ಬಹುದಿನಗಳಿಂದ ರಾಹುಲ್ ಗಾಂಧಿ ಮೋದಿ ವಿರುದ್ದ ತಿರುಚುತ್ತ ಬಂದಿರುವ ರಫೇಲ್ ಖರೀದಿ ವಿಚಾರಕ್ಕೆ ಸಂಬಂಧಪಟ್ಟಂತೆ ಅನಿಲ್ ಅಂಬಾನಿ ತಿರುಗೇಟು ನೀಡಿದ್ದಾರೆ. ಅನಿಲ್ ಅಂಬಾನಿ ಒಡೆತನದ ಕಂಪನಿಗೆ ಪ್ರಧಾನಿ ಮೋದಿ 30000 ಕೋಟಿ ರು. ಲಾಭ ಮಾಡಿಕೊಟ್ಟಿದ್ದಾರೆ ಎಂದು ಪದೇ ಪದೇ ಆರೋಪಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ನೇರವಾಗಿ ಉತ್ತರಿಸಿದ ರಿಲಯನ್ಸ್ ಗ್ರೂಪ್ ಕಂಪನಿ ರಾಹುಲ್ ಗೆ ತಿರುಗೇಟು ನೀಡಿದೆ.
ಹೌದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಪ್ರಾಮಾಣಿಕತೆ ಹೇಳಿಕೆಗೆ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಗ್ರೂಪ್ ತಿರುಗೇಟು ನೀಡಿದೆ. ರಾಹುಲ್ ಹೇಳಿಕೆಯನ್ನು ಅಲ್ಲಗಳೆದಿರುವ ಅನಿಲ್ ಅಂಬಾನಿ ದುರುದ್ದೇಶಪೂರ್ವಕ ಹಾಗೂ ರಾಜಕೀಯ ಕಾರಣಗಳಿಗೆ ನನ್ನನ್ನು ಎಳೆದು ತರಲಾಗುತ್ತಿದೆ. ರಾಹುಲ್ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅನಿಲ್ ಒಡೆತನದ ರಿಲಯನ್ಸ್ ಕಂಪನಿ, ‘ರಫೇಲ್ ವಿಷಯ ಸಂಬಂಧ ಮಾಡುತ್ತಿರುವ ಆರೋಪಗಳಿಗೆ ರಾಹುಲ್ ಗಾಂಧಿ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ.
ಇಷ್ಟೇ ಅಲ್ಲದೇ ವಾಸ್ತವವಾಗಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಲ್ಲಿದ್ದ 2002-2014ರ ಅವಧಿಯಲ್ಲಿ ರಿಲಯನ್ಸ್ ಗ್ರೂಪ್ಗೆ ಇಂಧನ, ಟೆಲಿಕಾಂ, ರಸ್ತೆ, ಮೆಟ್ರೋ ಸೇರಿದಂತೆ 1 ಲಕ್ಷ ಕೋಟಿ ರು. ಮೊತ್ತದ ಯೋಜನೆ ಗುತ್ತಿಗೆ ನೀಡಿತ್ತು. 10 ವರ್ಷಗಳ ಕಾಲ ಬೆಂಬಲಿಸಿದವರನ್ನು ಈಗ ಭ್ರಷ್ಟ ಉದ್ಯಮಿ ಎಂದು ಕರೆಯಲಾಗುತ್ತಿದೆ. ಹೀಗಾಗಿ 10 ವರ್ಷಗಳ ಕಾಲ ನಮಗೆ ಬೆಂಬಲ ನೀಡಿದ್ದು ಯಾರು ಎನ್ನುವುದನ್ನು ರಾಹುಲ್ ಗಾಂಧಿ ತಿಳಿಸಬೇಕು ಎಂದು ಕಿಡಿಕಾರಿದ್ದು. ಇಂಥ ಆರೋಪಗಳಿಗೆ ಯಾವುದೇ ಆಧಾರವೂ ಇಲ್ಲ.
ಇದರ ಹೊರತಾಗಿಯೂ ನಮ್ಮ ಕಂಪನಿ ವಿರುದ್ಧ ಮಿಥ್ಯಾರೋಪಗಳನ್ನು, ಉದ್ದೇಶಪೂರ್ವಕ ತಪ್ಪು ಮಾಹಿತಿಗಳನ್ನು ಜನರಿಗೆ ರವಾನಿಸಲಾಗುತ್ತಿದೆ ಎಂದಿದ್ದಾರೆ. ಈ ಹಿಂದೆಯೂ ಕೂಡ ರಫೆಲ್ ಒಪ್ಪಂದದಲ್ಲಿ ಹಗರಣ ಆರೋಪಕ್ಕೆ ರಾಹುಲ್ ಗಾಂಧಿಗೆ ಪತ್ರ ಬರೆದ ಅನಿಲ್ ಅಂಬಾನಿ ಪಟ್ಟಭದ್ರ ಹಿತಾಸಕ್ತಿಗಳು, ಕಾರ್ಪೊರೇಟ್ ವಿರೋಧಿಗಳು ರಫೆಲ್ ಜೆಟ್ ಖರೀದಿ ಹಗರಣದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ದಾರಿ ತಪ್ಪಿಸಿದ್ದಾರೆ ಎಂದು ಅನಿಲ್ ಈ ಪತ್ರದಲ್ಲಿ ತಿಳಿಸಿದ್ದಾರೆ. ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮುಂದುವರೆದ ವೈಯಕ್ತಿಕ ವಾಗ್ದಾಳಿಗಳಿಂದ ನೋವಾಗಿದೆ ಎಂದೂ ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ಅಂಬಾನಿ ಹೇಳಿದ್ದರು.
ರಾಹುಲ್ ಗಾಂಧಿ ಮಾಡಿರುವ ಆರೋಪ ರಫ್ತು ಹಾಗೂ ಕೆಲಸದ ಹಂಚಿಕೆಯಲ್ಲಿ ರಿಲಾಯನ್ಸ್ ಸಂಸ್ಥೆಯ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ಅಂಬಾನಿ, ರಫೆಲ್ ಫೈಟರ್ ಜೆಟ್ ಗಳನ್ನು ರಿಲಾಯನ್ಸ್ ಅಥವಾ ಡಸ್ಸಾಲ್ಟ್ ರಿಲಯನ್ಸ್ ಜಾಯಿಂಟ್ ವೆಂಚರ್ ನಲ್ಲಿ ಉತ್ಪಾದನೆ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಫ್ರೆಂಚ್ ನ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡುವುದಕ್ಕೂ ಕೇವಲ 10 ದಿನಗಳ ಮುಂಚೆ ರಿಲಾಯನ್ಸ್ ಡಿಫೆನ್ಸ್ ಸಂಸ್ಥೆ ಅಸ್ಥಿತ್ವಕ್ಕೆ ಬಂದಿತ್ತು ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನೂ ಅನಿಲ್ ತಳ್ಳಿಹಾಕಿದ್ದಾರೆ.