ಫೆಬ್ರವರಿ 7ರಂದು ಅನಿಲ್ ಕುಂಬ್ಳೆ ಈ ವಿಶ್ವದಾಖಲೆ ಮಾಡಿ 18 ವರ್ಷಗಳಾಯಿತು

0
874

ಟೀಂ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ನ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ಮಾಡಿದ್ದು ನಿನ್ನೆಗೆ ಬರೋಬ್ಬರಿ 18 ವರ್ಷಗಳಾಗಿದ್ದು ವಿಶ್ವ ದಾಖಲೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನ ಒಂದೇ ಇನ್ನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆಯುವುದು ಅಸಾಮಾನ್ಯ ಸಾಧನೆ. ಅಂತಹದರಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ತಂಡದ ಹತ್ತು ವಿಕೆಟ್ ಗಳನ್ನು ಪಡೆದು ವಿಶ್ವ ದಾಖಲೆಯನ್ನು ಮಾಡಿದ್ದಾರೆ. ನಿನ್ನೆಗೆ ಬರೋಬ್ಬರಿ 18 ವರ್ಷಗಳಾಗಿದೆ.

1999ರ ಫೆಬ್ರವರಿ 7ರಂದು ಅನಿಲ್ ಕುಂಬ್ಳೆ ಈ ವಿಶ್ವದಾಖಲೆಯನ್ನು ಮಾಡಿದ್ದರು. ಅಂದರೆ ಇಂದಿಗೆ 18 ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಇಂತಹ ಸಾಧನೆ ಮಾಡಿದ್ದು ಆ ನಂತರ ಯಾವುದೇ ಆಟಗಾರ ಇಂತಹ ಸಾಧನೆ ಮಾಡಿಲ್ಲ.

ಅನಿಲ್ ಕುಂಬ್ಳೆ ಅವರ ಇನ್ನಿಂಗ್ಸ್ ವೊಂದರಲ್ಲಿ 10ಸಾಧನೆ ಮಾಡಿದ್ದಾರೆ. 1999 ಫೆಬ್ರವರಿ 07 ರಂದು ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದ ಎರಡೇ ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೇಟ್ ಗಳ ಸಾಧನೆ ಮಾಡಿದ್ದಾರೆ.

ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 101ರನ್ ಗಳಿಸಿದ್ದ ಪಾಕ್, ಕುಂಬ್ಳೆ ಗೂಗ್ಲಿ ಜಾದೂ ಮುಂದೆ ಸಿಲುಕಿ 128 ರನ್ ಆಗುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ 207 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಕುಂಬ್ಳೆ ಬೌಲಿಂಗ್ ನಲ್ಲಿ ಪಾಕ್ ಅರ್ಧದಷ್ಟು ತಂಡ ಕಾದಿತ್ತು ನಂತರ ಇರುವ ಮೂವರು ಎಲ್ ಬಿಡಬ್ಲ್ಯು ಹಾಗೂ ಮತ್ತಿಬ್ಬರು ಕ್ಲೀನ್ ಬೌಲ್ಡ್ ಆಗಿದ್ದರು.