ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶ ಪಡೆಯಲು RTE ಕಾಯ್ದೆ ಅಡಿಯಲ್ಲಿ ಅರ್ಜಿ ಆಹ್ವಾನ..

0
2215

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಿದೆ. ಈ ಮೂಲಕ ಅರ್ಜಿ ಸಲ್ಲಿಸಲು ಬಯಸುವ ಪಾಲಕರು ಇದೆ ಫೆಬ್ರವರಿ 15 ರಿಂದ ಅರ್ಜಿ ಸಲ್ಲಿಸಬೇಕು. ಈ ಅವಕಾಶ ನಿಮ್ಮ ಮಕ್ಕಳ ಭವಿಷ್ಯದ ಬುನಾದಿ ಆಗಿದೆ. ಏಕೆಂದರೆ ಖಾಸಗಿ ಶಾಲೆಗಳಲ್ಲಿ ಕಲಿತ ಮಕ್ಕಳು ಒಳ್ಳೆಯ ಗುಣಮಟ್ಟದ ಶಿಕ್ಷಣ ಪಡೆದು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುವುದು ಗೊತ್ತೇ ಇದೆ. ಆದರೆ ಬಡ ಕುಟುಂಬದ ಮಕ್ಕಳು ಖಾಸಗಿ ಶಾಲೆಯಲ್ಲಿ ಸೇರಲು ತಂದೆ ತಾಯಿ- ಗಳ ಬಡತನ ಅಡ್ಡಿಯಾಗಿ ಓದಿನಲ್ಲಿ ಮುಂದೆಬರಲು ಸಾದ್ಯವಾಗುವುದಿಲ್ಲ. ಇನ್ನೂ ಭಾಷೆ ಮತ್ತು ಇತರೆ ವಿಷಯವಾಗಿ ಸರ್ಕಾರಿ ಶಾಲೆಗಳ ಉಳಿಕೆಯನ್ನು ಹೆಚ್ಚಿಸಲು ಭಯಸಿದರೆ ಮಕ್ಕಳ ಭವಿಷ ಹಿನ್ನೆಡೆಯಾಗುತ್ತೆ. ಈ ಅಳುಕಿನಲ್ಲಿರುವ ಪಾಲಕರು RTE ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತ ಪ್ರವೇಶವನ್ನು ಪಡೆಯಬಹುದು.

ಏನಿದು ಆರ್ ಟಿಇ’ ಕಾಯ್ದೆ?

ಚಾಲ್ತಿಯಲ್ಲಿರುವ ಆರ್ ಟಿಇ ಕಾಯ್ದೆ ಪ್ರಕಾರ ಉಚಿತ ಸೀಟು ಬಯಸುವ ಬಡ ವಿಧ್ಯಾರ್ಥಿಗಳು ತಾವು ವಾಸವಿರುವ ಒಂದು ಕಿಮೀ ವ್ಯಾಪ್ತಿಯಲ್ಲಿರುವ ಖಾಸಗಿ (ಕಾರ್ಮೆಂಟ್) ಶಾಲೆಗಳಲ್ಲಿ ಬಡ ಮಕ್ಕಳಿಗೆ ಕಡ್ಡಾಯವಾಗಿ ಶೇ.25 ಸೀಟು ನೀಡಬೇಕು. ಈ ಕಾಯ್ದೆಯಡಿಯಲ್ಲಿ ಉಚಿತ ಸೀಟು ಪಡೆದ ಮಕ್ಕಳ ಸಂಪೂರ್ಣ ವಿಧ್ಯಾಭ್ಯಾಸದ ಖರ್ಚನ್ನು ಸರ್ಕಾರವೇ ಭರಿಸುತ್ತೆ. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಮಕ್ಕಳ ಪೋಷಕರು ಬೇಕಾದ ದಾಖಲಾತಿ ಮೂಲಕ ಅರ್ಜಿ ಸಲ್ಲಿಸಬೇಕು.

ಯಾವ ಮಕ್ಕಳು ಅರ್ಜಿ ಸಲ್ಲಿಸಬಹುದು?

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ R T E ಅಡ್ಮಿಷನ್ ಪಡೆಯಲು ಅರ್ಜಿ ಹಾಕಲು ಅದಿಕೃತ ವೆಬ್ ಸೈಟ್ ನಲ್ಲಿ ಕೇಳಿರುವ ದಿನಾಂಕಗಳ ನಂತರ ಮತ್ತು ಒಳಗೆ ಹುಟ್ಟಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಮಾಹಿತಿ:

ಅರ್ಜಿ ವಿಳಾಸ ಬದಲಾಗಿದ್ದರು ಅರ್ಜಿ ನೀಡಬಹುದಾಗಿದೆ. ದಾಖಲೆಗಳ ಪರಿಶೀಲನೆ ಪಾಲಕರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶಾಲೆ ಇರುವ ಬಡಾವಣೆ ಮತ್ತು ವಾಸದ ಬಡಾವಣೆ ಪರೀಕ್ಷಿಸಿಕೊಳ್ಳಬೇಕು. ಕಂದಾಯ ಇಲಾಖೆ, ಆಧಾರ್ ನಂಬರ್ ಸೇರಿ ದಾಖಲೆಗಳು ಅಸಲಿಯಾಗಿದ್ದರೂ ಒಮ್ಮೊಮ್ಮೆ ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿನ ಇನಿಷಿಯಲ್ ಹೊಂದಾಣಿಕೆಯಾಗದೆ ತಿರಸ್ಕಾರವಾಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಆನ್ಲೈನ್ ಮೂಲಕ ದೂರು ಸಲ್ಲಿಸಿದರೆ 48 ಗಂಟೆಗಳ ಒಳಗೆ ಸರಿಪಡಿಸಲಾಗುವುದು. ಇದರ ಜೊತೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ಗಳಲ್ಲಿನ ಬಡಾವಣೆಗಳು ಆಧಾರ್ ನಿಂದ ಕೈಬಿಟ್ಟಿದ್ದರೆ ಅಂಥವುಗಳ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ಸೇರಿಸುವ ಕ್ರಮ ಕೈಗೊಳ್ಳಲಾಗಿದೆ.

ಅರ್ಜಿ ಹಾಕಲು ಬೇಕಾದ ದಾಖಲೆಗಳು.

1. ವಿದ್ಯಾರ್ಥಿಯ ಆಧಾರ ಕಾರ್ಡ, ಮತ್ತು ಜನ್ಮ ಧೃಡೀಕರಣ ಪ್ರಮಾಣ ಪತ್ರ.
2. ತಂದೆ, ತಾಯಿಯ ಜಾತಿ ಮತ್ತು ಆದಾಯ ದೃಢೀಕರಣ ಪತ್ರ.
3. ತಂದೆ, ತಾಯಿಯ ಆಧಾರಕಾರ್ಡ.
4. ಸರ್ಕಾರ ನೀಡಿರುವ ಯಾವುದಾದರೊಂದು ವಿಳಾಸದ ಗುರುತಿನ ಪತ್ರ.
5. ಅರ್ಜಿ ಸಲ್ಲಿಸುವ ಆನ್ ಲೈನ್ ವಿಳಾಸ www.schooleducation.kar.nic.in ಕ್ಲಿಕ್ ಮಾಡಿ.

ಈ ಮಾಹಿತಿಯನ್ನು ದಯವಿಟ್ಟು ನಿಮ್ಮ ಅಕ್ಕ ಪಕ್ಕದ ಬಡ ಮಕ್ಕಳಿಗೆ ಸರಕಾರದ ಉಚಿತ ಶಿಕ್ಷಣದ ಬಗ್ಗೆ ತಿಳಿಸಿ ಶಿಕ್ಷಣ ಬೆಳೆಸಿ.