ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕಾಂಗ್ರೆಸ್​​ನ​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ತೃತೀಯಲಿಂಗಿ ಅಪ್ಸರಾ ರೆಡ್ಡಿ ನೇಮಕ..

0
623

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎರಡು ಬಲಿಷ್ಠ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬಹುತೇಕ ಬದಲಾವಣೆಗಳು ನಡೆಯುತ್ತಿವೆ ಇದಕ್ಕೆ ಸಾಕ್ಷಿಯಾಗಿ ಬಿಜೆಪಿ ಪಕ್ಷದಿಂದ ಮೋದಿಯವರು ಹೊಸ ಹೊಸ ಯೋಜನೆ, ಮಿಸಲಾತಿ ತಂದು ಜನರಿಗೆ ಹತ್ತಿರವಾಗುತ್ತಿದ್ದರೆ ಇನ್ನೂ ಕಾಂಗ್ರೆಸ್-ನಲ್ಲಿ ತೃತೀಯ ಲಿಂಗಿಯೋಬ್ಬರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

Also read: ಭಿಕ್ಷೆ ಬಿಟ್ಟು ಕೃಷಿ, ಹೈನುಗಾರಿಕೆ ಮಾಡುತ್ತಿರುವ ಮಂಗಳಮುಖಿಯರು; ಯಾವ ರೈತನಿಗೂ ಕಡಿಮೆಯಿಲ್ಲವಂತೆ..

ಏನಿದು ಸುದ್ದಿ?

134 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಸಮ್ಮುಖದಲ್ಲಿ, ಸಾಮಾಜಿಕ ಕಾರ್ಯಕರ್ತ, ಮಾಜಿ ಪತ್ರಕರ್ತೆ, ತೃತೀಯಲಿಂಗಿ ಅಪ್ಸರಾ ರೆಡ್ಡಿ ಅವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ (ಎಐಎಂಸಿ) ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಇಂಥ ಹುದ್ದೆಯನ್ನು ನೀಡಲಾಗಿದೆ.

ಈ ಸಂಬಂಧ ಕಾಂಗ್ರೆಸ್‌ ತನ್ನ ಟ್ವಿಟರ್‌ನಲ್ಲಿ ರಾಹುಲ್‌ ಗಾಂಧಿ ಮತ್ತು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಷ್ಮಿತಾ ದೇವ್‌ ಜತೆಗೆ ಅಪ್ಸಾರಾ ಇರುವ ಫೋಟೊವೊಂದನ್ನು ಟ್ವೀಟ್‌ ಮಾಡಿದೆ. 2016ರಲ್ಲಿ ಎಐಎಡಿಎಂಕೆ ಸೇರಿದ್ದ ಅಪ್ಸಾರ ಅವರು ಇದೀಗ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಲ್ಲದೇ ಪದಾಧಿಕಾರಿಯಾಗಿಯೂ ನೇಮಕಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ಸ್ವಲ್ಪ ದಿನಗಳ ಕಾಲ ಬಿಜೆಪಿಯಲ್ಲೂ ಇದ್ದರು. ಕಾಲೇಜು ದಿನಗಳಿಂದಲೇ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಅಪ್ಸರ ಭಾಗವಹಿಸಿದ್ದರು. ನಂತರ ತಮಿಳುನಾಡಿನ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್​ ಶಾರೊಂದಿಗೆ ಚರ್ಚಿಸಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಕಾರಣ?

Also read: ಶಾಸ್ತ್ರದ ಪ್ರಕಾರ ಮಂಗಳಮುಖಿಯರಿಂದ ಮಂಗಳವಾರ ಈ ವಸ್ತುಗಳನ್ನು ಪಡೆದರೆ ಊಹಿಸಲು ಸಾಧ್ಯವಾಗದಷ್ಟು ಹಣ ಸಿಗುತ್ತೆ..?

ಬಿಜೆಪಿಯಲ್ಲಿ ಮಹಿಳೆಯರಿಗೆ ಸರಿಯಾದ ಮಾನ್ಯತೆ ಇರದ ಕಾರಣ ಮತ್ತು ಮಹಿಳೆಯರ ವಿರುದ್ಧದ ಬಿಜೆಪಿ ಧೋರಣೆಯಿಂದ ಬೆಸರಿಸಿಕೊಂಡು ಇತ್ತೀಚೆಗೆ ಪಕ್ಷ ತೊರೆದಿದ್ದರು. ಈಗ ಕಾಂಗ್ರೆಸ್ ಸೇರಿರುವ ಅಪ್ಸರಾ ಭಾರತದಲ್ಲೀಗ ಮಹಿಳೆಯರ ಹಕ್ಕು ಮತ್ತು ಸ್ವಾಭಿಮಾನದ ಪ್ರಾಮುಖ್ಯತೆಗಿಂತ ಧರ್ಮಕ್ಕೆ ಒತ್ತು ಕೊಡುತ್ತಿರುವ ಆಡಳಿತವಿದೆ ಎಂದು ಹೇಳಿದ್ದಾರೆ.
ಈ ಮೂಲಕ ಭಾರತವನ್ನು ಕಟ್ಟಿದ್ದು ಕಾಂಗ್ರೆಸ್‌. ಉತ್ತಮ ಯೋಜನೆಗಳ ಮೂಲಕ ರಾಷ್ಟ್ರದ ನಾಗರಿಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ ಎಂದು ಅಪ್ಸರಾ ರೆಡ್ಡಿ ಕಾಂಗ್ರೆಸ್‌ ಪಕ್ಷವನ್ನು ಹೊಗಳಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಹಾಗೂ ಮಹಿಳಾ ಕೇಂದ್ರಿತ ನೀತಿಗಳತ್ತ ಕೊಡುಗೆ ನೀಡುವುದು ತಮ್ಮ ಗುರಿ ಎಂದು ಅಪ್ಸರಾ ರೆಡ್ಡಿ ತಮ್ಮ ಮುಂದಿನ ಗುರಿಯ ಬಗ್ಗೆ ತಿಳಿಸಿದ್ದಾರೆ.