ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್‍ ರಾವತ್‍ , ಆಯ್ಕೆ ಮಾಡಿದ ಹಿಂದಿನ ಉದ್ದೇಶವೇನು ಗೊತ್ತೆ?

0
1112

ಲೆಫ್ಟಿನೆಂಟ್‍ ಜನರಲ್‍ ಬಿಪಿನ್‍ ರಾವತ್‍ ಅವರನ್ನು ಭಾರತದ ಸೇನಾ ದಂಡನಾಯಕನಾಗಿ ಕೇಂದ್ರ ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಈಗ ವಿವಾದಕ್ಕೆ ತಿರುಗಿದೆ, ಕೇವಲ ಪಕ್ಷಗಳ ನಡುವೆ ನಡೆಯುತ್ತಿದ್ದ ರಾಜಕೀಯ ಈಗ ಸೇನೆಗೂ ಕಾಲಿಟ್ಟಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಈ ಬಿಪಿನ್ ರಾವತ್‍ ಯಾರು? ಅವರಿಗೆ ಈ ಹುದ್ದೆ ಕೊಡಬಾರದಿತ್ತು ಎಂಬ ವಾದ ಯಾಕೆ? ಹಿರಿತನದಲ್ಲಿ ಹಾಗೂ ಅನುಭವದಲ್ಲಿ ಇಬ್ಬರು ಹಿರಿಯರನ್ನು ಕಡೆಗಣಿಸಿ ರಾವತ್‍ಗೆ ಯಾಕೆ ಮಣೆ ಹಾಕಲಾಯಿತು, ಅಷ್ಟಕ್ಕೂ ಈ ರಾವತ್‍ಗೆ ಇರುವ ಅನುಭವವೇನು? .. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ರಾವತ್‍ ಯಾಕೆ ಬೇಕು ಅಥವಾ ಬೇಡ ಅನ್ನೋದನ್ನು ಈ ವಿವರ ಓದಿದ ಮೇಲೆ ನೀವೇ ನಿರ್ಧರಿಸಿ.

ಸೇನಾ ದಂಡನಾಯಕರ ನಿಯಮ ಏನು?

ಸೇನಾ ದಂಡನಾಯಕರ ಆಯ್ಕೆಯ ಪರಮಾಧಿಕಾರ ಕೇಂದ್ರ ಸರಕಾರಕ್ಕೆ ಬಿಟ್ಟಿದ್ದು. ಆದರೆ ದೇಶದ ರಕ್ಷಣೆ ಸಂಬಂಧಿಸಿದ ಅತ್ಯಂತ ಮಹತ್ವದ ಹುದ್ದೆ ಇದಾಗಿದ್ದರಿಂದ ಹಿಂದಿನ ಸರಕಾರಗಳು ಸೇವಾ ಹಿರಿತನದ ಆಧಾರದ ಮೇಲೆ ನೇಮಕಗಳಿಗೆ ಅನುಮೋದನೆ ನೀಡುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ, ಗಡಿಯಲ್ಲಿನ ಬಿಗುವಿನ ಪರಿಸ್ಥಿತಿ, ಪಾಕಿಸ್ತಾನ ಮತ್ತು ಚೀನಾದ ಆತಂಕಗಳ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮುನ್ನೆಚ್ಚರಿಕಾ ಕ್ರಮವಾಗಿ ಆಕ್ರಮಣಕಾರಿ ಮನೋಭಾವದ ಬಿಪಿನ್‍ ರಾವತ್‍ ನೇಮಕಕ್ಕೆ ಒಲವು ತೋರಿದೆ.

ವಿವಾದ ಏನು?

ಯಾವುದೇ ಸರಕಾರ ಬಂದರೂ ಸೇನಾ ದಂಡನಾಯಕರ ವಿಷಯದಲ್ಲಿ ಮೂಗು ತೂರಿಸುವ ಯತ್ನ ಮಾಡುತ್ತಿರಲಿಲ್ಲ. ಆದರೆ ಈ ಬಾರಿ ಕೇಂದ್ರ ಸರಕಾರ, ಹಿರಿತನದಲ್ಲಿ ಲೆಫ್ಟಿನೆಂಟ್‍ ಜನರಲ್‍ ಪ್ರವೀಣ್‍ ಭಕ್ಷಿ ಮತ್ತು ದಕ್ಷಿಣ ಸೇನಾ ಕಮಾಂಡರ್‍ ಲೆಫ್ಟಿನೆಂಟ್‍ ಪಿ.ಎಂ. ಹರಿಜ್‍ ಅವರನ್ನು ಹಿಂದಿಕ್ಕಿ ಈ ಇಬ್ಬರಿಗಿಂತ ನಾಲ್ಕು ಹುದ್ದೆ ಕೆಳಗಿರುವ ಬಿಪಿನ್ ರಾವತ್‍ ಅವರನ್ನು ಸರಕಾರ ನೇಮಿಸಿರುವುದು ವಿವಾದಕ್ಕೀಡು ಮಾಡಿದೆ. ಭಕ್ಷಿ ಅವರನ್ನು ಉಪ ದಂಡನಾಯಕನಾಗಿ ನೇಮಿಸಲಾಗಿದೆ.

ಬಿಪಿನ್‍ ರಾವತ್ ಯಾರು?

ಬಿಪಿನ್‍ ರಾವತ್‍ 1078ರ ಇಲೆವೆನ್‍ ಗೋರ್ಖಾ ರೈಫಲ್ಸ್ ನ 5ನೇ ಬೆಟಾಲಿಯನ್‍ಗೆ ಸೇರಿದವರಾಗಿದ್ದಾರೆ, ಡೆಹ್ರಾಡೂನ್‍ ಮೂಲದವರಾಗಿದ್ದು, `ಸ್ವಾರ್ಡ್‍ ಆಫ್‍ ಹಾನರ್‍’ ಗೌರವಕ್ಕೆ ಪಾತ್ರರಾಗಿದ್ದಾರೆ. ಸದಾ ಉದ್ವಿಗ್ನವಾಗಿರುವ ಜಮ್ಮು-ಕಾಶ್ಮೀರದ ರಾಷ್ಟ್ರೀಯ ರೈಫಲ್ಸ್‍ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಯುದ್ಧ ಹಾಗೂ ರಹಸ್ಯ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಅದರಲ್ಲೂ ಊರಿ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್‍ ಯಶಸ್ವಿಯಾಗಿ ನಡೆದಿದ್ದು, ಮೋದಿ ಅವರ ಒಲವು ಪಡೆಯಲು ನೆರವಾಯಿತು.

1978ರಿಂದಲೇ ವಾಯುಪಡೆಯ ಫೈಟರ್ ಜೆಟ್‍ಗಳನ್ನು ಚಲಾಯಿಸಿದ್ದಾರೆ. ಅಲ್ಲದೇ ಹಲವಾರು ಮಾದರಿಯ ಯುದ್ಧ ವಿಮಾನಗಳನ್ನು ಹಾರಿಸಿದ ಅನುಭವ ಕೂಡ ಇದೆ. ಯುದ್ಧವಿಮಾನ ಹಾರಾಟದ ತರಬೇತುದಾರನಾಗಿಯೂ ಸೇವೆ ಸಲ್ಲಿಸಿದ್ದಾರೆ, ಅದರಲ್ಲೂ ಅತ್ಯಂತ ಮಹತ್ವದಾದ ಕಾರ್ಗಿ‍ಲ್‍ ಯುದ್ಧದಲ್ಲಿ ಯುದ್ಧ ವಿಮಾನಗಳ ಯಶಸ್ವಿ ಕಾರ್ಯಾಚರಣೆ ಹಿಂದೆ ಇವರ ಶ್ರಮವೂ ಇದೆ ಎನ್ನಲಾಗಿದೆ,

ಹಲವಾರು ಯಶಸ್ವಿ ಕಾರ್ಯಾಚರಣೆಗಳನ್ನೂ ಮಾಡಿದ್ದು, ಭೂತಾನ್‍ನಲ್ಲಿ ಭಾರತೀಯ ಸೇನೆಗೆ ತರಬೇತಿ ನೀಡುವ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ, ರಕ್ಷಣಾ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ, ಸೇನೆ ಹಾಗೂ ಸೇನಾ ವರದಿಗಾರಿಕೆ ಕುರಿತು ಪತ್ರಿಕೆಗಳಲ್ಲಿ ಲೇಖನಗಳನ್ನೂ ಬರೆದಿದ್ದಾರೆ, ಮೀರತ್‍ನ ಚೌಧರಿ ಚರಣ್‍ ಸಿಂಗ್‍ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿಗೆ ಸಂಬಂಧಿಸಿ ಡಾಕ್ಟರೇಟ್ ಕೂಡ ಪೂರೈಸಿದ್ದಾರೆ.

ರಾವತ್‍ ಆಯ್ಕೆ ಯಾಕೆ?

ಕೇಂದ್ರ ಸರಕಾರವೇ ಹೇಳುವ ಪ್ರಕಾರ ಪ್ರಸ್ತುತ ಸನ್ನಿವೇಶಕ್ಕೆ ರಾವತ್‍ ಹೇಳಿ ಮಾಡಿಸಿದ ವ್ಯಕ್ತಿ. ಪಾಕಿಸ್ತಾನ ಮತ್ತು ಚೀನಾದ ಬೆದರಿಕೆ ಹೆಚ್ಚುತ್ತಿದ್ದು, ಇದನ್ನು ಮೆಟ್ಟಿ ನಿಲ್ಲಬೇಕಾದರೆ ರಾವತ್‍ ಆಯ್ಕೆ ಅನಿವಾರ್ಯವಾಗಿತ್ತು. ಏಕೆಂದರೆ ಯುದ್ಧ ಮತ್ತು ರಹಸ್ಯ ಕಾರ್ಯಾಚರಣೆಗಳನ್ನು ಮಾಡಿದ ಅನುಭವ ಮತ್ತು ಡೈನಾಮಿಕ್‍ ವ್ಯಕ್ತಿತ್ವ ಮೋದಿ ಅವರನ್ನು ಸೆಳೆಯಿತು ಎಂದು ಉನ್ನತ ಮೂಲಗಳು ಹೇಳಿವೆ.

ಅಚ್ಚರಿ ಆಯ್ಕೆ ಇದೇ ಮೊದಲಲ್ಲ

ಸೇನಾ ದಂಡನಾಯಕನಾಗಿ ರಾವತ್‍ ಆಯ್ಕೆ ಅಚ್ಚರಿ ಮೂಡಿಸಿರುವುದು ನಿಜ. ಆದರೆ ಸರಕಾರವೊಂದು ಈ ರೀತಿ ನಿರ್ಧಾರ ಕೈಗೊಂಡಿರುವುದು ಇದೇ ಮೊದಲೇನಲ್ಲ. 1972ರಲ್ಲಿ ಇಂದಿರಾ ಗಾಂಧಿ ಸರಕಾರ ಇದ್ದಾಗ ಲೆಫ್ಟಿನೆಂಟ್ ಜನರಲ್‍ ಐಪಿಎಸ್ ಭಾಗತ್‍ ಅವರಿಗೆ ಫೀಲ್ಡ್‍ ಮಾರ್ಷಲ್ ಹುದ್ದೆ ನೀಡಿ ಅವರ ಕಿರಿಯರಾದ ಲೆಫ್ಟಿನೆಂಟ್ ಜನರಲ್‍ ಜಿ.ಜಿ.ಬೆವೂರ್‍ ಅವರನ್ನು ನೇಮಿಸಲಾಗಿತ್ತು. ನಂತರ ಆ ಜಾಗಕ್ಕೆ ಮಾಣಿಕ್‍ಷಾ ಬಂದರು. ನಂತರ ಲೆ.ಜ.ಎಸ್‍.ಕೆ. ಸಿನ್ಹಾ ಅವರಿಗೆ ದಂಡನಾಯಕನ ಸ್ಥಾನ ಸಿಗಬೇಕಿತ್ತು, ಆದರೆ ಇಂದಿರಾ ಗಾಂಧಿ ಅವರನ್ನು ಅಮಾನತುಗೊಳಿಸಿ ಕೆ,ವಿ, ಕೃಷ್ಣರಾವ್‍ ಅವರನ್ನು ನೇಮಿಸಿದ್ದರು.