ಭಿಕ್ಷೆ ಬಿಟ್ಟು ಕೃಷಿ, ಹೈನುಗಾರಿಕೆ ಮಾಡುತ್ತಿರುವ ಮಂಗಳಮುಖಿಯರು; ಯಾವ ರೈತನಿಗೂ ಕಡಿಮೆಯಿಲ್ಲವಂತೆ..

0
1354

ಮಂಗಳಮುಖಿಯರು ಅಂದರೆ ಸಮಾಜದಲ್ಲಿ ಬೆಲೆಯೇ ಇಲ್ಲ, ಅವರು ಹುಟ್ಟಿದೆ ಶಾಪವಾಗಿದೆ ಕುಟುಂಬದ ಘನತೆಗೆ ದಕ್ಕೆ ತಂದಿದೆ ಅಂತ ಇಲ್ಲಸಲ್ಲದ ಶಾಪ ಹಾಕಿ ಮನೆಯಿಂದ ಹೊರದಬ್ಬಿ ಅವರನ್ನು ನೋಡಿವ ದೃಷ್ಟಿಯೇ ಬೇರೆಯಾಗಿದೆ. ಬದುಕಲು ಎಲ್ಲಾದರು ಒಂದು ಕೆಲಸ ಕೇಳಿದರೆ ಎಲ್ಲಿವೂ ಕೆಲಸ ಕೊಡೋದಿಲ್ಲ ಅದೇ ಕಾರಣಕ್ಕೆ ಬೀದಿ ಬೀದಿಯಲ್ಲಿ ಅಲೆದು ಭಿಕ್ಷೆ ಎತ್ತಿ, ಇಲ್ಲ ಲೈಂಗಿಕ ವೃತ್ತಿಯಲ್ಲಿ ತೊಡಗಿಕೊಂಡು ಜೀವನ ನಡೆಸುವ ಇವರನ್ನು ನೋಡಿದರೆ ಎಲ್ಲರಿಗೂ ಅದು ಏನೋ ಒಂದು ತರಹದ ತೆಗಳಿಕೆ ಇರುತ್ತೆ.

Also read: ಶಾಸ್ತ್ರದ ಪ್ರಕಾರ ಮಂಗಳಮುಖಿಯರಿಂದ ಮಂಗಳವಾರ ಈ ವಸ್ತುಗಳನ್ನು ಪಡೆದರೆ ಊಹಿಸಲು ಸಾಧ್ಯವಾಗದಷ್ಟು ಹಣ ಸಿಗುತ್ತೆ..?

ಇಂತಹ ಪರಿಸ್ಥಿತಿಯಲ್ಲಿ ತೃತೀಯ ಲಿಂಗಿಗಳು ಸಾಧನೆ ಮಾಡುವುದು ಹೇಗೆ ಹೇಳಿ? ಈಗೀಗ ಕೆಲವೊಂದು ರಾಜ್ಯಗಳಲ್ಲಿ ಸರ್ಕಾರಿ ಕೆಲಸಕ್ಕೆ ಆದ್ಯತೆ ನೀಡಿದ ಉದಾಹರಣೆಗಳಿವೆ. ಹಾಗೆಯೇ ಕೆಲವೊಂದು ವ್ಯಾಪಾರ ಮಾಡಿಕೊಂಡು ಜೀವನ ಮಾಡುವುದು ಕೇಳಿಬರುತ್ತಿವೆ. ಇದೆಲ್ಲವನ್ನು ಮಿರಿಸುವಷ್ಟು ಸಾಧನೆ ಮಾಡಿದ ಮಂಗಳೂರಿನ ಮಂಗಳಮುಖಿಯರು ಕೃಷಿಯಲ್ಲಿ ಮಾಡಿದ ಸಾಧನೆ ಕೇಳಿದರೆ ಎಂತವರು ಕೂಡ ಬೆರಗಾಗಿ ಹೋಗುತ್ತಾರೆ. ತಮ್ಮ ಸಾಧನೆಯನ್ನು ಕುರಿತು ಸ್ವತಹ ಕವಿತಾ ಎನ್ನುವ ಮಂಗಳಮುಖಿ ಹೇಳಿರುವುದು ಇಲ್ಲಿದೆ ನೋಡಿ.

Also read: ಸಮಾಜದಲ್ಲಿ ಎಲ್ಲರಿಂದಲೂ ಶೋಷಣೆಗೊಳಗಾಗಿರುವ ತೃತೀಯ ಲಿಂಗಿಗಳ ಪರವಾಗಿ ಹೋರಾಡುತ್ತಿರುವ ಅಕ್ಕ ಪದ್ಮಶಾಲಿಯವರ ಬಗ್ಗೆ ಓದಿ, ನಿಮಗೂ ಕಷ್ಟ ಎದರಿಸುವ ಸ್ಫೂರ್ತಿ ಬರುತ್ತೆ…

ಹೌದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರ ಗ್ರಾಮದಲ್ಲಿ ಅಪ್ಪಟ ಕೃಷಿ ಕಾಯಕದಲ್ಲಿ ತೊಡಗಿಕೊಂಡ ಮಂಗಳಮುಖಿಯರು ಅನ್ನದಾತನು ನಾಚುವಂತೆ ಸಾಮೂಹಿಕವಾಗಿ ಒಕ್ಕಲುತನದಲ್ಲಿ ತೊಡಗಿಸಿಕೊಂಡಿದ್ದಾರೆ. ಗುತ್ತಿಗೆ ಪಡೆದ ನಾಲ್ಕೂವರೆ ಎಕರೆ ಪ್ರದೇಶದ ಭೂಮಿಯಲ್ಲಿ ಆರು ಜನ ಮಂಗಳ ಮುಖಿಯರು ರೈತ ಕುಟುಂಬದಂತೆ ಬದುಕುತ್ತಿದ್ದಾರೆ. ಮೆಕ್ಕೆಜೋಳ, ಟೋಮೋಟೋ, ಆಲೂಗಡ್ಡೆ, ಬದನೆ ಸೇರಿದಂತೆ ಮಿಶ್ರ ಬೆಳೆಗಳನ್ನು ಬೆವರು ಸುರಿಸಿ ಬೆಳೆಯುತ್ತಿದ್ದಾರೆ. ಅಲ್ಲದೆ ಮನೆಗಳಲ್ಲಿ ಹಸು ಸಾಕುವ ಮೂಲಕವೂ ಹೈನುಗಾರಿಕೆಯನ್ನು ಕೂಡ ಮಾಡುತ್ತಿದ್ದಾರೆ.

ಕೃಷಿಯ ಬಗ್ಗೆ ಸಲಹೆ;

Also read: ಮಂಗಳ ಮುಖಿಯೊಬ್ಬಳು ಕೆಲಸವನ್ನು ಗಿಟ್ಟಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೊಗಿ ಜಯ ಸಾಧಿಸಿದಕಥೆ ಇದು!!

ಇವರು ತಮ್ಮಂತೆಯೇ ದುಡಿದು ಜೀವನ ಮಾಡಬೇಕು ಅಂತ ಇತರೆ ಮಂಗಳಮುಖಿಯರನ್ನೂ ನಮ್ಮೊಂದಿಗೆ ಕೈ ಜೋಡಿಸಿ ಎಂದು ಕರೆಯುತ್ತಿದ್ದಾರೆ, ಸಮಾಜದ ಮುಖ್ಯ ವಾಹಿನಿಗೆ ಬರಲು ಮನವಿ ಮಾಡಿದ್ದಾರೆ. ಜೊತೆಗೆ ಇವರ ಕಾರ್ಯಕ್ಕೆ ಸ್ಥಳೀಯರು ಶಹಭಾಷ್ ಎನ್ನುತ್ತಿದ್ದಾರೆ. ಹಳ್ಳಿಯಲ್ಲಿ ಕೃಷಿ ಬಿಟ್ಟು ಗ್ರಾಮಗಳನ್ನು ತೊರೆದು ನಗರಕ್ಕೆ ವಲಸೆ ಹೋಗುವ ಯುವ ಸಮೂಹವನ್ನು ನಾಚಿಸುವಂತೆ ಈ ಮಂಗಳಮುಖಿಯರ ಕೃಷಿ ಕಾಯಕ ಇತರರಿಗೆ ಮಾದರಿಯಾಗಿದೆ. ಕುರಿ- ಹಸು ಮೇಯಿಸುತ್ತಾ, ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಾ ಬಾಳು ಕಟ್ಟಿಕೊಂಡು ಎಲ್ಲರ ಹುಬ್ಬೇರಿಸುವಂತೆ ಬದುಕುತ್ತಿದ್ದಾರೆ.

ಹಿರಿಯ ಮಂಗಳಮುಖಿ ಕವಿತಾ;

ಕೃಷಿ ಪ್ರಾರಂಭದ ದಿನಗಳನ್ನು ಕುರಿತು ಕವಿತಾ ತಮ್ಮ ಅನುಭವವನ್ನು ಹಂಚಿಕೊಂಡಿದು ಹೀಗಿದೆ. ಎಲ್ಲರಿಂದ ಚಿಮಾರಿಗೆ ಒಳಗಾದ ನಾವು ಬರಿ ಭಿಕ್ಷೆಯಿಂದ ಜೀವನ ಮಾಡಬೇಕು ಅಂತ ಎಲ್ಲಿವೂ ಇಲ್ಲ, ಭಿಕ್ಷೆ ಹೊಟ್ಟೆಪಾಡಿಗಾಗಿ ಮಾಡಿಕೊಂಡ ಒಂದು ವೃತ್ತಿಯಾಗಿದೆ ಅಷ್ಟೇ, ನಮ್ಮ ಜೀವದಲ್ಲಿ ಇದೆ ಪರಿಸ್ಥಿತಿ ಇತ್ತು ಆದರೆ ನಮಗೆ ಆ ರೀತಿಯಲ್ಲಿ ಬದುಕುವುದು ಇಷ್ಟವಿಲ್ಲದ ಕಾರಣ ಕೃಷಿಯನ್ನು ಮಾಡಲೇಬೇಕು ಅಂತ ವಿಚಾರ ಮಾಡಿದ್ದಾಗೆ ಎಲ್ಲರು ನಕ್ಕರು ನಮಗೆ ಕೃಷಿಯ ಬಗ್ಗೆ ಗಂಧಗಾಳಿ ಇಲ್ಲ. ಮತ್ತು ಜಮೀನು ಕೂಡ ಇಲ್ಲ ಹೇಗೆ ಮಾಡುವುದು ವಿಚಾರವಾಗಿತ್ತು.

ನಂತರ ಇದೇ ಹುಲಿ ತಿಮ್ಮಾಪುರ ಗ್ರಾಮದ ರೈತರೊಬ್ಬರ ಮನೆಯಲ್ಲಿ ಕೂಲಿ ಆಳುಗಳಂತೆ ದುಡಿದು ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಇಂದು ಸ್ವಂತವಾಗಿ ಕೃಷಿ ಮಾಡುವಂತಾಗಿದ್ದೇವೆ. ತಮ್ಮಂತೆ ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಿ ದುಡಿದು ಜೀವನ ಮಾಡಬೇಕು ಎಂದು ಹೇಳಿದ್ದಾರೆ.