ದಿನ ಭವಿಷ್ಯ 22 ನವೆಂಬರ್, 2017

0
554

ಮೇಷ:-

ನಿಮ್ಮ ಆಕಾಂಕ್ಷೆಗಳು ಪೂರ್ಣಗೊಳ್ಳುವುದರಿಂದ ಹೆಚ್ಚು ಸಂತೋಷದಿಂದ ಇರುತ್ತೀರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು, ನೂತನ ಕಾರ್ಯಗಳನ್ನು ಹಮ್ಮಿಕೊಳ್ಳಲು ಇದು ಸಹಕಾರಿಯಾಗಿರುತ್ತದೆ.

ವೃಷಭ:-

ನಿಮಗೆ ಸಂತಸ ನೀಡುವ ಸುದ್ದಿಗಳು ಇಂದು ಬರಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಸಾಮಾನ್ಯಕ್ಕಿಂತ ಹೆಚ್ಚು ಉತ್ಸಾಹಶಾಲಿಗಳಾಗುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ.

ಮಿಥುನ:-

ಬಂಧುಬಾಂಧವರಿಂದ ಕಷ್ಟಕಾಲದಲ್ಲಿ ಸಹಾಯ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಸ್ನೇಹಿತರ ವ್ಯವಹಾರದಲ್ಲಿ ಜಾಮೀನು ಪತ್ರಗಳಿಗೆ ಸಹಿ ಮಾಡದಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ.

ಕಟಕ:-

ಜೀವನ ವೃತ್ತಿಯಲ್ಲ. ವ್ಯವಹಾರಗಳಲ್ಲಿ ಸ್ವಯಂ ವಿಮರ್ಶೆ ಮಾಡಿಕೊಳ್ಳಿರಿ. ಮತ್ತು ವೃತ್ತಿಯಲ್ಲಿ ತಪ್ಪುಗಳು ನುಸುಳದಂತೆ ನೋಡಿಕೊಳ್ಳಿರಿ. ಹಳೆಯ ಸ್ನೇಹಿತರು ಭೇಟಿ ಆಗುವ ಸಂದರ್ಭ. ಹಣವು ನೀರಿನಂತೆ ಖರ್ಚಾಗುವುದು.

ಸಿಂಹ:-

ಇಂದಿನ ಎಲ್ಲಾ ಕಾರ್ಯಗಳಲ್ಲಿ ಜಯ ದೊರೆಯುತ್ತದೆ. ಮನೆಯಲ್ಲಿ ಸಂಭ್ರಮ. ಕೌಟುಂಬಿಕವಾಗಿ ಸಂತಸದ ಕ್ಷಣಗಳನ್ನು ಕಾಣುವಿರಿ. ಮಕ್ಕಳ ಪ್ರಗತಿಯು ನಿಮಗೆ ಹೆಮ್ಮೆ ಎನಿಸುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕನ್ಯಾ:-

ನೀವು ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಲೆಕ್ಕಾಚಾರವನ್ನು ಸಂಬಂಧಪಟ್ಟ ಅಧಿಕಾರಿಗಳು ತಪಾಸಣೆ ಮಾಡುವ ಸಂದರ್ಭವಿರುತ್ತದೆ. ಲೆಕ್ಕಪತ್ರಗಳು ಸರಿಯಾಗಿ ಇಟ್ಟುಕೊಂಡಿರುವ ಬಗ್ಗೆ ಮೆಚ್ಚುಗೆ ಸೂಚಿಸುವರು.

ತುಲಾ:-

ಧನಸ್ಥಾನದ ಶನಿ ಸಂಚಾರದಿಂದ ಹಣಕಾಸು ಮುಗ್ಗಟ್ಟನ್ನು ಎದುರಿಸಬೇಕಾಗುವುದು. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಸಫಲತೆಗಾಗಿ ಎಷ್ಟು ಹಣ ಸುರಿದರೂ ಸಾಲದೆನಿಸುವುದು. ಹಾಗಾಗಿ ಇದನ್ನು ಸರಿದೂಗಿಸಲು ಹೊರಗಡೆ ಸಾಲ ಮಾಡಬೇಕಾಗುವುದು.

ವೃಶ್ಚಿಕ:-

ಹೊಸ ಹೊಸ ಕಾರ್ಯಯೋಜನೆಗಳನ್ನು ರೂಪಿಸುವ ಮುನ್ನ ಬಹು ಎಚ್ಚರಿಕೆ ಅಗತ್ಯ. ಹಣದ ವ್ಯವಹಾರಗಳಲ್ಲಿ ಮೋಸ ಹೋಗುವ ಸಂದರ್ಭವಿರುತ್ತದೆ. ಆಂಜನೇಯ ಸ್ತೋತ್ರ ಪಠಿಸಿರಿ. ದೀನದಲಿತರಿಗೆ ಆಹಾರವನ್ನು ನೀಡಿರಿ.

ಧನಸ್ಸು:-

ಈ ದಿನ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಪ್ರಯಾಣ ಕಾಲದಲ್ಲಿ ಎಚ್ಚರಿಕೆ. ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಮಕರ:-

ವ್ಯಾಪಾರೋದ್ಯಮ ಬೆಳವಣಿಗೆಗಾಗಿ ಶ್ರಮಿಸುತ್ತೀರಿ. ಆರ್ಥಿಕ ತೊಂದರೆಗಳು ನಿವಾರಣೆ ಆಗುವುದು. ಮನೆಯಲ್ಲಿ ಮಕ್ಕಳ ಕಲರವ ಕೇಳಿಬರುವುದು. ಸಾಮಾಜಿಕ ಗೌರವ/ಮನ್ನಣೆ ಪ್ರಾಪ್ತವಾಗುವುದು.

ಕುಂಭ:-

ಸೃಜನಾತ್ಮಕತೆ ಮತ್ತು ಉತ್ಸಾಹಗಳ ಅಗತ್ಯವಿರುವ ಕೆಲಸಗಳಲ್ಲಿ ಯಶಸ್ಸು. ಇಂದು ನಿಮ್ಮ ಸಾಹಸಿ ಮನೋಭಾವಕ್ಕೆ ತಕ್ಕಂತೆ ಕೆಲಸಗಳು ಅರಸಿ ಬರುವವು. ಅದನ್ನು ನಿಷ್ಟೆಯಿಂದ ಮಾಡಿ ಮುಗಿಸುವಿರಿ.

ಮೀನ:-

ಹೊಸ ಹೊಸ ವಿಚಾರಗಳು ನಿಮ್ಮ ತಲೆಯಲ್ಲಿ ಸುತ್ತುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರಲು ವೇದಿಕೆಯನ್ನು ಅರಸುತ್ತಿರುವಿರಿ. ಸದ್ಯದರಲ್ಲಿಯೇ ನಿಮಗೆ ಆ ಉತ್ತಮ ಅವಕಾಶ ಕಂಡುಬರುವುದು.