ನಿತ್ಯ ಭವಿಷ್ಯ ಸೆಪ್ಟೆಂಬರ್ 2, 2017 (ಶನಿವಾರ)

0
765

ಸೆಪ್ಟೆಂಬರ್ 2, 2017 (ಶನಿವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಪೂರ್ವಾಷಾಢ ನಕ್ಷತ್ರ,

ಮೇಷ

01-Mesha

ಕೊಟ್ಟ ಹಣ ಮರಳಿ ಬರುವಲ್ಲಿ ವಿಳಂಬ ತೋರುವುದು. ಧನಕಾರಕ ಗುರುವಿನ ಬಲ ಇಲ್ಲ. ಕರ್ಮಕಾರಕ ಶನಿಯು ಅಷ್ಟಮದಲ್ಲಿರುವುದರಿಂದ ಈದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸುವಿರಿ. ಜೀವನ ನಿರ್ವಹಣೆಗೆ ಸಾಲ ಮಾಡಬೇಕಾಗುವುದು.

ವೃಷಭ

02-Vrishabha

ಹಳೆಯ ವಿವಾದವೊಂದು ಗುರುವಿನ ಅನುಗ್ರಹದಿಂದ ಬಗೆಹರಿಯಲಿದೆ. ಹಣಕಾಸಿನ ಸ್ಥಿತಿಯಲ್ಲಿ ಉತ್ತಮ ಚೇತರಿಕೆ ಕಂಡುಬರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ನಿಮಗೆ ಹರ್ಷವನ್ನುಂಟು ಮಾಡುವುದು.

ಮಿಥುನ

03-Mithuna

ಹಿಂದಿನ ವೈಭೋಗವನ್ನು ನೆನೆದು ದುಃಖಿಸುವುದರಲ್ಲಿ ಅರ್ಥವಿಲ್ಲ. ಎದುರಾಗಲಿರುವ ಮಹತ್ವದ ವಿಚಾರದಲ್ಲಿ ತಲ್ಲೀನರಾಗಿ ಆ ವಿಷಯದಲ್ಲಿ ಜಯಗಳಿಸುವ ಚಿಂತನೆ ನಡೆಸಿರಿ. ಎಲ್ಲಾ ರೀತಿಯಿಂದ ನಿಮಗೆ ಅನುಕೂಲವಾಗುವುದು.

ಕಟಕ

04-Kataka

ಶನೈಶ್ಚರನ ಸಂಚಾರವು ನಿಮ್ಮ ಪೂರ್ವಪುಣ್ಯವನ್ನು ಹರಣ ಮಾಡುವುದರಿಂದ ಮಹತ್ತರ ಕೆಲಸದಲ್ಲಿ ಹಿನ್ನಡೆ ಅನುಭವಿಸುವಿರಿ. ಮಕ್ಕಳು ಮಾಡುವ ಅವಿಚಾರ ಕಾರ್ಯಗಳಿಗೆ ತಲೆ ತಗ್ಗಿಸಬೇಕಾಗುವುದು. ಆಂಜನೇಯ ಮಂತ್ರವನ್ನು ಪಠಿಸುವ ಮೂಲಕ ಧೈರ್ಯವಾಗಿರಿ.

ಸಿಂಹ

05-Simha

ಸಿಂಹದಂತೆ ಗರ್ಜಿಸಲು ಒತ್ತಡ ಬರುವುದಾದರೂ ಮುಂದೆ ಹಮ್ಮಿಕೊಳ್ಳಬೇಕಾಗಿರುವ ಮಹತ್ತರ ಕಾರ್ಯದ ಯಶಸ್ಸಿಗಾದರೂ ಈ ದಿನ ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲದೆ ಇದ್ದಲ್ಲಿ ಈವರೆಗೂ ಮಾಡಿದ ಕೆಲಸ ನೀರಿನಲ್ಲಿ ಹೋಮ ಮಾಡಿದಂತೆ ಆಗುವುದು.

ಕನ್ಯಾ

06-Kanya

ಆತ್ಮವಿಶ್ವಾಸದಿಂದ ನಿಮಗೆ ಎದುರಾಗುವ ಸಮಸ್ಯೆಗಳನ್ನು ಎದುರಿಸುವಿರಿ. ಇದರಿಂದ ನಿಶ್ವಯವಾಗಿಯೂ ವಿಜಯದ ಗುರಿಯನ್ನು ಮುಟ್ಟುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದೂರ ಪ್ರಯಾಣ ಸಂಭವವಿದೆ.

ತುಲಾ

07-Tula

ಉತ್ತಮ ಕೆಲಸಕ್ಕೆ ಅಡೆತಡೆ ಎದುರಾಗುವುದು. ಜೀವನದಲ್ಲಿ ಶಿಸ್ತು ಮತ್ತು ಕ್ರಮತೆಯನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಮಡದಿಯ ಮಾತಿಗೆ ಒಪ್ಪಿಗೆ ಸೂಚಿಸುವುದರಿಂದ ಕಳೆದುಕೊಳ್ಳುವುದು ಏನಿಲ್ಲ. ಇದರಿಂದ ಒಳಿತೇ ಆಗುವುದು.

ವೃಶ್ಚಿಕ

08-Vrishika

ಬಂಧುಗಳಿಂದ ಹಣಕಾಸಿನ ನೆರವು ದೊರೆಯುವುದು. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಆರೋಗ್ಯದ ವಿಷಯದಲ್ಲಿ ತುಸು ಎಚ್ಚರಿಕೆ ಅಗತ್ಯ. ಪ್ರಯಾಣ ಕಾಲದಲ್ಲಿ ನಾರಸಿಂಹ ದೇವರನ್ನು ಸ್ಮರಿಸಿರಿ.

ಧನು

09-Dhanussu

ದಶಮಸ್ಥ ಗುರು ಉದ್ಯೋಗದಲ್ಲಿ ಬಡ್ತಿ ನೀಡುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾದ ವಾತಾವರಣವು ಉಂಟಾಗುವುದು. ನಿಮ್ಮ ಸಹೋದ್ಯೋಗಿಗಳಿಗೂ ಈ ವಿಚಾರ ತಿಳಿದು ಅವರು ಸಂತಸ ವ್ಯಕ್ತಪಡಿಸುವರು. ಈ ಸಲುವಾಗಿ ಸ್ವಲ್ಪ ಹಣ ಕೈಬಿಡುವ ಸಂಭವವಿದೆ.

ಮಕರ

10-Makara

ದಿಢೀರನೇ ಶ್ರೀಮಂತರಾಗುವ ಕನಸು ಭಂಗವಾಗುವುದು. ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ಹೂಡಿದ ಹಣಕ್ಕೆ ಸಂಚಕಾರ ಬರುವುದು. ನೀವು ಖರೀದಿಸಿದ ಜಾಗಕ್ಕೆ ಬೆಲೆ ಕಡಿಮೆ ಆಗುವುದರಿಂದ ನೀವು ವ್ಯಥೆಯನ್ನು ಅನುಭವಿಸಬೇಕಾಗುವುದು.

ಕುಂಭ

11-Kumbha

ಎಲ್ಲಾ ಕೆಲಸಗಳು ಸರಾಗವಾಗಿ ಆಗುತ್ತಿವೆ ಎಂದು ತೋರಿದರೂ ಆಗಬೇಕಾದ ಪ್ರಮುಖ ಕಾರ‍್ಯಕ್ಕೆ ಚಾಲನೆ ದೊರೆಯದೆ ಇರುವುದು ನಿಮ್ಮ ಚಿಂತೆಗೆ ಕಾರಣವಾಗುವುದು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿರಿ.

ಮೀನ

12-Meena

ನಿಮ್ಮ ಧೈರ್ಯ ಹಾಗೂ ಮುನ್ನುಗ್ಗುವ ಸ್ವಭಾವಕ್ಕೆ ಸಾಮಾಜಿಕವಾಗಿ ಮನ್ನಣೆ ದೊರೆಯುವುದು. ನಿಮ್ಮ ಬಹುದಿನದ ಕನಸು ನನಸಾಗುವುದು. ಆರ್ಥಿಕ ಸ್ಥಿತಿಯು ಉತ್ತಮವಿದ್ದು ಮಾನಸಿಕ ನೆಮ್ಮದಿಯನ್ನು ಹೆಚ್ಚು ಮಾಡುವುದು.