ನಿತ್ಯ ಭವಿಷ್ಯ ಸೆಪ್ಟೆಂಬರ್ 15, 2017 (ಶುಕ್ರವಾರ)

0
610

ಸೆಪ್ಟೆಂಬರ್ 15, 2017 (ಶುಕ್ರವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಪುನರ್ವಸು ನಕ್ಷತ್ರ,

ಮೇಷ

01-Mesha

ಮಕ್ಕಳು ಜೀವನದ ಅನುಭವವಿಲ್ಲದೆ ಗೋಳಾಡಿಸುವರು. ಹೀಗಾಗಿ ಅವರ ಮೇಲೆ ಕೋಪ-ತಾಪಗಳು ಬರುವುದು ಸಹಜ. ಆದರೆ ಹಿರಿಯರಾದ ನೀವು ತಾಳ್ಮೆ ವಹಿಸಿ ಅವರಿಗೆ ಸರಿಯಾದ ಬುದ್ಧಿವಾದವನ್ನು ಹೇಳುವಿರಿ.

ವೃಷಭ

02-Vrishabha

ಬಾಳಸಂಗಾತಿಯು ನಿಮ್ಮ ವಿಚಾರದಲ್ಲಿ ಪ್ರಸನ್ನತೆ ಪ್ರದರ್ಶಿಸಲಿದ್ದಾರೆ. ಅವರು ಕೊಡುವ ಸಲಹೆಗಳನ್ನು ಸ್ವೀಕರಿಸಿ ಇದಕ್ಕಿಂತ ಹೆಚ್ಚಿನ ಸಂತೋಷ ಜೀವನದಲ್ಲಿ ಇರುವುದಿಲ್ಲ. ಮಕ್ಕಳು ಸಹ ನಿಮ್ಮ ವಿಚಾರಗಳನ್ನು ಗೌರವಿಸಿ ಪಾಲಿಸುವರು.

ಮಿಥುನ

03-Mithuna

ನಿಮ್ಮನ್ನು ಎದುರಿಗೆ ಹೊಗಳಿ ಹಿಂದೆ ತೆಗಳುವ ಜನರೇ ಜಾಸ್ತಿ. ಹೀಗಾಗಿ ಇಂಥ ಶತ್ರುಗಳಿಂದ ದೂರ ಇರುವುದು ಒಳ್ಳೆಯದು. ಆಸ್ತಿಯ ವಿಷಯದ ಬಗ್ಗೆ ತಕರಾರು ಎದುರಿಸಬೇಕಾಗುವುದು.

ಕಟಕ

04-Kataka

ಹಳೆಯ ದಸ್ತಾವೇಜು, ಕಡತ ಫೈಲುಗಳನ್ನು ಕಳಕೊಂಡು ಸಿಡಿಮಿಡಿ ಮಾಡಿಕೊಳ್ಳದಿರಿ. ಸ್ವಲ್ಪ ತಾಳ್ಮೆ ವಹಿಸಿದಲ್ಲಿ ಅವು ಶೀಘ್ರವೇ ದೊರೆಯುವುದು. ವಿಳಂಬವಿಲ್ಲದೆ ಈದಿನ ಆದಷ್ಟು ಕಡತಗಳನ್ನು ವಿಲೇವಾರಿ ಮಾಡಿ.

ಸಿಂಹ

05-Simha

ಗುರು ಸಮಾನರೆನಿಸಿದ ಹಿರಿಯ ವ್ಯಕ್ತಿಯೊಬ್ಬರಿಂದ ಜೀವನದಲ್ಲಿ ಮಹತ್ತರ ಬದಲಾವಣೆಯ ಗಾಳಿ ಬೀಸುವುದು. ಮಗನಿಗೆ ಕನ್ಯೆ ದೊರೆಯುವ ಸಂಭವ. ಮಾತಿನಲ್ಲಿ ಹಿಡಿತವಿರಲಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ

06-Kanya

ಸಾಲ ಕೊಡಲು ಬ್ಯಾಂಕ್‌ ಮುಂದೆ ಬರುವುದು. ಅಂತೆಯೇ ನಿಮ್ಮ ಹಿತೈಷಿಗಳು ನಿಮಗೆ ಹಣದ ಸಹಾಯ ಮಾಡಲು ಹಾತೊರೆಯುವರು. ಆದರೆ ಈ ಸಂದರ್ಭದಲ್ಲಿ ಸಾಲ ಪಡೆದರೆ ಸಾಲ ತೀರಿಸುವ ಬಗೆ ಹೇಗೆ ಎಂದು ಚಿಂತಿಸುವಿರಿ.

ತುಲಾ

07-Tula

ನೀವು ಸರಳವಾಗಿ ಇಡಬೇಕೆಂಬ ಹೆಜ್ಜೆಗಳು ತಪ್ಪಾಗುವ ಸಂಭವ ಜಾಸ್ತಿ. ನಿಮ್ಮ ಜಾಣ್ಮೆ ತರ್ಕಗಳು ಇಂದು ಉಪಯೋಗಕ್ಕೆ ಬರುವುದಿಲ್ಲ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ.

ವೃಶ್ಚಿಕ

08-Vrishika

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ನಿಮಗೆ ಬುದ್ಧಿವಾದ ಹೇಳುವವರೇ ಆಗಿರುತ್ತಾರೆ. ಆದರೆ ಅವರ ಮಾತುಗಳಿಗೆ ಹೆಚ್ಚಿನ ಗಮನ ಕೊಡದಿರಿ. ನಿಮ್ಮ ಕಾರ್ಯಗಳಿಗೆ ಗುರುವಿನ ಬೆಂಬಲವಿರುತ್ತದೆ. ಸಾವಧಾನದಿಂದ ಸಕಲ ಕಾರ್ಯಗಳನ್ನು ಮಾಡಿ.

ಧನು

09-Dhanussu

ಹಳೆಯ ಆಸ್ತಿಯ ವಿಷಯದ ಕುರಿತು ಒತ್ತಡ ಉಂಟಾಗುವುದು. ನ್ಯಾಯಾಲಯದ ತೀರ್ಮಾನವು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಬರುವುದು. ನಿಮ್ಮ ಆಪ್ತರ ಸಲಹೆಯನ್ನು ಪಡೆಯಿರಿ.

ಮಕರ

10-Makara

ಸಂಶೋಧನಾ ಶಕ್ತಿಯು ನಿಮ್ಮ ಮನಸು ವಿಕಸನ ಹೊಂದುವಂತೆ ಮಾಡುವುದು. ಪ್ರವಾಸಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಅತ್ಯಂತ ಸೂಕ್ತವಾದ ದಿನ. ನಿಮ್ಮ ಕಾರ್ಯಕ್ಷೇತ್ರವು ವಿಸ್ತಾರಗೊಳ್ಳುವುದು.

ಕುಂಭ

11-Kumbha

ಮನದ ಸಂಕಲ್ಪಕ್ಕೆ ವಿಘ್ನಗಳು ಬರುತ್ತವೆ. ಎದೆಗುಂದದಿರಿ. ನಿಮ್ಮನ್ನು ಟೀಕಿಸುವವರು ಬಹಳ ಮಂದಿ. ಹೀಗಾಗಿ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿರಿ. ಆದಷ್ಟು ಗುರುವಿನ ಸೇವೆ ಮಾಡಿ.

ಮೀನ

12-Meena

ನೇರವಾಗಿ ನಿಮ್ಮ ಯೋಜನೆಗಳನ್ನು ಸ್ನೇಹಿತರ ಮುಂದೆ ಹೇಳಿಕೊಳ್ಳಿ. ಸಾರ್ವಜನಿಕ ಮನ್ನಣೆಯೇ ನಿಮಗೆ ನೆರವು ನೀಡುವುದು. ಇದರಿಂದ ಹಣಕಾಸಿನ ತೊಂದರೆ ಕಡಿಮೆ ಆಗುವುದು.