ನಿತ್ಯ ಭವಿಷ್ಯ ಸೆಪ್ಟೆಂಬರ್ 23, 2017 (ಶನಿವಾರ)

0
659

ಸೆಪ್ಟೆಂಬರ್ 23, 2017 (ಶನಿವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ಶರದೃತುಋತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ತದಿಗೆ ತಿಥಿ,
ಸ್ವಾತಿ ನಕ್ಷತ್ರ,

ಮೇಷ

01-Mesha

ನಾನೇ ಎಲ್ಲವನ್ನು ತಿಳಿದುಕೊಂಡಿರುವೆ ಎಂಬ ಅಹಂಮಿಕೆಯೆ ಇಂದು ನಿಮ್ಮನ್ನು ಹಿಂದಕ್ಕೆ ನಿಲ್ಲಿಸುವುದು. ಬುದ್ಧಿಯ ಪಕ್ವತೆಯಾದಂತೆ ಬಾಗುವುದನ್ನು ಕಲಿತರೆ ಒಳಿತಾಗುವುದು.

ವೃಷಭ

02-Vrishabha

ಅತ್ಯಂತ ಭಾವುಕರಾದ ನೀವು ಭಾವನಾತ್ಮಕವಾದ ಒತ್ತಡದಲ್ಲಿ ಮನಸ್ಸಿನ ವಿಚಾರಗಳನ್ನು ಬಹಿರಂಗಗೊಳಿಸುವಿರಿ. ಆದರೆ ಭಗವಂತನ ನಿಯಮದಂತೆ ಎಲ್ಲವೂ ಆಗುತ್ತಿರುವುದರಿಂದ ಹೆಚ್ಚಿಗೆ ಚಿಂತಿಸುವುದು ತರವಲ್ಲ.

ಮಿಥುನ

03-Mithuna

ಸಕಾರಾತ್ಮಕ ಚಿಂತನೆಯಿಂದ ಸರಳ ಜೀವನವನ್ನು ನಡೆಸುವಿರಿ. ಮಕ್ಕಳಿಂದ ಸಂತೋಷದ ವಾರ್ತೆ ಕೇಳುವಿರಿ. ಈ ದಿನ ಸಂಜೆ ಆಂಜನೇಯ ದೇವಸ್ಥಾನಕ್ಕೆ ಹೋಗಿ ಬನ್ನಿರಿ. ಭಿಕ್ಷ ುಕರಿಗೆ ಅಥವಾ ದೀನ ದಲಿತರಿಗೆ ಆಹಾರ ನೀಡಿರಿ.

ಕಟಕ

04-Kataka

ಬೊಗಳುವ ನಾಯಿ ಕಚ್ಚುವುದಿಲ್ಲ. ಕಚ್ಚುವ ನಾಯಿ ಬೊಗಳುವುದಿಲ್ಲ. ಅಂತೆಯೇ ಈದಿನ ನಿಮ್ಮ ವಿರುದ್ಧವಾಗಿ ಕೆಲವರು ಕೂಗಾಟ ನಡೆಸಬಹುದು. ಆದರೆ ನಿಮಗೆ ಯಾವುದೇ ಹಾನಿ ಇರುವುದಿಲ್ಲ. ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಿರಿ.

ಸಿಂಹ

05-Simha

ನಿಮ್ಮ ಸತ್ಯ ಹಾಗೂ ಕಠಿಣ ಪರಿಶ್ರಮದಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಕಚೇರಿ ಕೆಲಸ ಕಾರ್ಯಗಳಲ್ಲಿ ಪದೋನ್ನತಿಯ ಸಂದರ್ಭ. ಕಾರ್ಯನಿಮಿತ್ತ ದೂರ ಪ್ರಯಾಣ ಮಾಡುವ ಯೋಗವಿದೆ.

ಕನ್ಯಾ

06-Kanya

ನಿಮ್ಮ ಮೌನವನ್ನು ಕೆಲವರು ಅಪಾರ್ಥ ಮಾಡಿಕೊಳ್ಳುವರು. ಆದರೆ ಆಂತರಿಕವಾಗಿ ನೀವು ಗಟ್ಟಿಗೊಳ್ಳುತ್ತಿದ್ದೀರಿ. ಎದುರಾಗುವ ಎಲ್ಲಾ ಕಷ್ಟಗಳನ್ನು ಉಪಾಯದಿಂದ ಗೆದ್ದು ಮೇಲೇರುವಿರಿ.

ತುಲಾ

07-Tula

ಕಠಿಣ ದುಡಿಮೆ ಬಿಟ್ಟರೆ ಅನ್ಯಮಾರ್ಗವಿಲ್ಲ. ಅಂತೆಯೇ ಈ ದಿನ ನೀವು ಹೆಚ್ಚು ಶ್ರವಹಿಸಿ ಕೆಲಸ ಮಾಡಬೇಕಾಗುವುದು. ಆಪ್ತರೆ ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುವ ಸ್ಥಿತಿ. ಆದರೆ ಸಂಗಾತಿಯ ನುಡಿಗಳು ನಿಮಗೆ ಧೈರ್ಯ ನೀಡುತ್ತವೆ.

ವೃಶ್ಚಿಕ

08-Vrishika

ಅನಿಷ್ಟಕ್ಕೆಲ್ಲಾ ಶನಿಯೇ ಕಾರಣ ಎಂದು ಮುಖ ಸಿಂಡರಿಸದಿರಿ. ಎಲ್ಲಾ ಕಾಲವೂ ನಿಮಗೆ ಪೂರಕವಾಗಿರುವುದಿಲ್ಲ. ಈ ದಿನ ಊಟದ ಸಮಯದಲ್ಲಿ ಅಲ್ಪ ಅನ್ನವನ್ನು ಹೊರಗೆ ತೆಗೆದಿಟ್ಟು ಅದನ್ನು ಕಾಗೆಗಳಿಗೆ ನೀಡಿರಿ.

ಧನು

09-Dhanussu

ಕಷ್ಟಗಳು ಬಂದರೆ ಒಟ್ಟೊಟ್ಟಿಗೆ ಬರುತ್ತವೆ. ಅದನ್ನು ಎದುರಿಸಿ ನಿಲ್ಲಿರಿ. ಈಶ್ವರನಿಗೆ ಅಭಿಷೇಕ ಮಾಡಿರಿ. ಮತ್ತು ಮನೆಯ ಸಮೀಪ ಬನ್ನಿ ಮರವಿದ್ದರೆ ಅದರ ಬುಡಕ್ಕೆ ಒಂದು ಲೋಟ ಹಾಲನ್ನು ಹಾಕಿ ಪ್ರಾರ್ಥಿಸಿರಿ.

ಮಕರ

10-Makara

ದಿನದಿನಕ್ಕೂ ಪ್ರವೃದ್ಧಮಾನಕ್ಕೆ ಬರುತ್ತಿರುವ ನಿಮ್ಮನ್ನು ಕಂಡರೆ ಇತರೆಯವರಿಗೆ ಅಸೂಯೆ. ಅಂತಹ ಅಸೂಯೆಯ ಕುದೃಷ್ಟಿಯಿಂದಾಗಿ ಈ ದಿನ ನಿಮ್ಮ ಕಾರ್ಯಗಳಲ್ಲಿ ಹಿನ್ನಡೆ ಉಂಟುಮಾಡುವುದು. ಉಪ್ಪನ್ನು ಜೊತೆಯಲ್ಲಿಟ್ಟುಕೊಳ್ಳಿರಿ.

ಕುಂಭ

11-Kumbha

ಊದಿನ ಕಡ್ಡಿಯ ಬೆಂಕಿಯಿಂದ ಹಂಡೆ ನೀರು ಕಾಯಿಸಲು ಆಗುವುದಿಲ್ಲ. ಈ ದಿನ ಪ್ರಯತ್ನ ಸಾಲದು. ಅಂತೆಯೇ ಅದು ಇನ್ನೂ ಹೆಚ್ಚಿನ ಶ್ರಮವನ್ನು ಬಯಸುತ್ತದೆ. ಹಾಗಾಗಿ ಕೆಲಸ ಕಾರ್ಯದಲ್ಲಿ ಉದಾಸೀನತೆ ಬೇಡ.

ಮೀನ

12-Meena

ಎದುರಾಳಿಗಳನ್ನು ಎದುರಿಸುವ ಶಕ್ತಿಯಿದ್ದರೂ ಅದು ಈ ದಿನ ಉಪಯೋಗಕ್ಕೆ ಬರುವುದಿಲ್ಲ. ಗೆಳೆಯರ ದಾಕ್ಷಿಣ್ಯಕ್ಕೆ ಒಳಗಾಗಿ ಕೆಲವು ಅಪಮಾನಗಳನ್ನು ನುಂಗಿಕೊಳ್ಳಬೇಕಾಗುತ್ತದೆ. ಇದರ ಅರಿವು ಇದ್ದ ಜನರೇ ನಿಮ್ಮನ್ನು ಸತಾಯಿಸುವರು.