ನಿತ್ಯ ಭವಿಷ್ಯ 11, ಮಾರ್ಚ್, 2018

0
716

Astrology in kannada | kannada news

ಮೇಷ:

ಇಂದು ಎಲ್ಲವನ್ನು ಭಾವನಾತ್ಮಕ ನೆಲೆಗಟ್ಟಿನಲ್ಲಿಯೇ ನೋಡಲು ಯತ್ನಿಸುವಿರಿ. ಕೆಲವರು ನಿಮ್ಮ ಮನಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದು.

ವೃಷಭ:

ಆರ್ಥಿಕವಾಗಿ ಮಹತ್ವದ ದಿನ. ಉಳಿತಾಯ ಮಾಡಿದ್ದ ಸಣ್ಣ ಮೊತ್ತವೊಂದು ಬೃಹತ್ ಪ್ರಮಾಣದಲ್ಲಿ ಕೈಸೇರಲಿದೆ. ಆರ್ಥಿಕ ಸುಭದ್ರತೆ ಕಾಣುವಿರಿ.

ಮಿಥುನ:

ಸಂಬಂಧಗಳನ್ನು ಮರುಹೊಂದಾಣಿಕೆ ಮಾಡಿಕೊಳ್ಳುವುದು ಒಳ್ಳೆಯದು. ಇರುವಷ್ಟು ಕಾಲ ಎಲ್ಲರೊಂದಿಗೆ ನಗು-ನಗುತ್ತಾ ಬಾಳುವುದೇ ಜೀವನದ ಹೆಗ್ಗುರಿ.

ಕಟಕ:

ಕೆಲವರ ವಿಚಾರದಲ್ಲಿ ರಾಗ-ದ್ವೇಷ ಇರುವುದು ಸಹಜ. ಆದರೆ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳುವುದು ತರವಲ್ಲ. ಕಾಲಕ್ರಮೇಣ ಅವರ ಬಗ್ಗೆ ಪ್ರೀತಿ ವಿಶ್ವಾಸ ಮೂಡುವುದು.

ಸಿಂಹ:

ಕೆಲವು ದಿನಗಳಿಂದ ಕಾಡುತ್ತಿದ್ದ ಆತಂಕವೊಂದು ಮರೆಯಾಗಿ ಮನದಲ್ಲಿ ನೆಮ್ಮದಿ ಮೂಡುವುದು. ಮಗನ ಮದುವೆ ಮಾತುಕತೆ ನಡೆಯುವ ಸಂಭವವಿದೆ.

ಕನ್ಯಾ:

ಬದಲಾವಣೆ ಇಂದಿನ ಪ್ರಮುಖ ವಿಚಾರ. ಧಾರ್ಮಿಕ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ಮನೆಯಿಂದ ದೂರವಿರಬೇಕಾದ ಪ್ರಸಂಗ ಎದುರಾಗುವುದು. ಗುರುವಿನ ರಕ್ಷೆ ದೊರೆಯಲಿದೆ.

ತುಲಾ:

ಸಂಶೋಧನೆ ಮತ್ತು ಸಮೀಕ್ಷೆ ಕ್ಷೇತ್ರದಲ್ಲಿರುವವರಿಗೆ ಸಂತಸದ ಮತ್ತು ಸಂಭ್ರಮದ ದಿನ. ನಿಮ್ಮ ಸಂಶೋಧನಾ ಲೇಖನಗಳು ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಳ್ಳುವುದು.

ವೃಶ್ಚಿಕ:

ನಿಮ್ಮ ಇವತ್ತಿನ ಯಶಸ್ಸಿಗೆ ನಿಮ್ಮ ಸ್ನೇಹಿತರು ಶ್ರಮಪಟ್ಟಿರುತ್ತಾರೆ ಎಂಬುದನ್ನು ಮರೆಯದಿರಿ. ಅವರ ಸಹಾಯವನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿರಿ.

ಧನಸ್ಸು:

ಕಾರ್ಯಾಗಾರ, ತರಬೇತಿ ಕಾರ್ಯಗಳಲ್ಲಿ ಉಪನ್ಯಾಸ ನೀಡಲು ನಿಮಗೆ ಆಮಂತ್ರಣ ಬರುವ ಸಾಧ್ಯತೆ. ನಿಮ್ಮ ವಿಚಾರಧಾರೆಗಳು ಎದುರಾಳಿಯ ಹೃದಯಕ್ಕೆ ತಾಕುವವು.

ಮಕರ:

ಮಾತು ಕಡಿಮೆ ಮಾಡಿ ಕೇಳಿಸಿಕೊಳ್ಳುವುದಕ್ಕೆ ಗಮನ ಕೊಡುವುದು ಒಳ್ಳೆಯದು. ಪರರ ಸಂಕಷ್ಠದ ಅನುಭವ ತಿಳಿದಾಗ ನೀವೆಷ್ಟು ಸುಖಿ ಎಂದು ಗೊತ್ತಾಗುವುದು.

ಕುಂಭ:

ಗ್ರಹಿಕೆಯ ವಿಧಾನ ಬದಲಿಸಿಕೊಳ್ಳಲು ಪ್ರಯತ್ನಿಸುವಿರಿ. ಪರರಿಗೆ ಸಹಾಯ ಮಾಡುವ ಕುರಿತು ಅತೀವ ಆಸಕ್ತಿ ಮೂಡುವುದು. ಇದರಿಂದ ಜನರ ಮೆಚ್ಚುಗೆ ಪಡೆಯುವಿರಿ.

ಮೀನ:

Meena1

ಬದಲಾವಣೆ ಜಗದ ನಿಯಮ. ಹಾಗಾಗಿ ಇಂದು ಹೊಸ ವಿಚಾರವನ್ನು ಕಲಿಯಲು ಉತ್ಸುಕರಾಗುವಿರಿ. ಅದು ಕಂಪ್ಯೂಟರ್ ಶಿಕ್ಷಣವಾಗಿರಬಹುದು ಅಥವಾ ಪೇಯಿಂಟಿಂಗ್ ಆಗಿರುವುದು.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!