ಸೆಪ್ಟೆಂಬರ್ 27, 2017 (ಬುಧವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ಶರದೃತುಋತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಮೂಲ ನಕ್ಷತ್ರ,
ಮೇಷ
ವಿದೇಶ ವ್ಯವಹಾರ ನಿಮಗೆ ಕಠಿಣವಾದದ್ದು ಅಲ್ಲ. ಸೂಕ್ತ ಜನರೊಂದಿಗೆ ಸಂಪರ್ಕವನ್ನು ಪಡೆಯಿರಿ. ಸ್ನೇಹಿತರು, ಬಂಧುಗಳ ಸಹಕಾರ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಕಲಹಗಳು ಬರದಂತೆ ಎಚ್ಚರಿಕೆ ವಹಿಸಿರಿ.
ವೃಷಭ
ಧೈರ್ಯಂ ಸರ್ವರ್ಥ ಸಾಧನಂ ಎನ್ನುವಂತೆ ಈ ದಿನ ಧೈರ್ಯದಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಮಗನ ವ್ಯವಹಾರದಲ್ಲಿನ ನಷ್ಟ ಸರಿದೂಗಿಸಲು ಆತನಿಗೆ ಸೂಕ್ತ ಸಲಹೆ ನೀಡುವಿರಿ. ಕೆಮ್ಮು-ಕಫದಂತಹ ತೊಂದರೆ ಇರುತ್ತದೆ.
ಮಿಥುನ
ಸಹೋದರ ಸಂಬಂಧಿ ವ್ಯಾಜ್ಯಗಳು ಮುಂದೂಡಲ್ಪಡುವುದು. ಸಂಗಾತಿಯ ಬೆಂಬಲ ನಿಮಗೆ ಇರುವುದರಿಂದ ಹೆಚ್ಚಿನ ಹಣ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಆಗುವುದು. ವಿಷ್ಣುವಿನ ಆರಾಧನೆ ಮಾಡುವುದು ಒಳ್ಳೆಯದು.
ಕಟಕ
ದ್ವಿತೀಯ ಧನಸ್ಥಾನದ ರಾಹು ಸಂಚಾರದಿಂದಾಗಿ ನಿಮಗೆ ಬರಬೇಕಾಗಿದ್ದ ಹಣಕಾಸು ಶೀಘ್ರದಲ್ಲೇ ನಿಮ್ಮ ಕೈಸೇರುವುದು. ಇದರಿಂದ ಮಾನಸಿಕ ನೆಮ್ಮದಿಯ ಜೊತೆಗೆ ಕೌಟುಂಬಿಕ ಸೌಖ್ಯ ಒದಗಿ ಬರುವುದು.
ಸಿಂಹ
ತಲೆಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದು ಮೂರ್ಖತನ. ಅಂತೆಯೆ ದ್ವಿತೀಯದಲ್ಲಿ ಗುರು ಸಂಚಾರವಿದೆ ಎಂದು ನೀವು ಮಾಡುವ ಎಲ್ಲಾ ಕೆಲಸಗಳು ಸುಲಲಿತವಾಗಿ ಆಗುತ್ತದೆ ಎಂಬ ಭ್ರಮೆ ಬೇಡ. ಕೆಲಸಕ್ಕೆ ತಕ್ಕ ಶ್ರಮವೂ ಬೇಕು.
ಕನ್ಯಾ
ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿ ನಿಮ್ಮ ಬಗ್ಗೆ ಅನುಕಂಪ ತೋರುವ ಎಲ್ಲರೂ ನಿಮ್ಮ ಪ್ರೀತಿಪಾತ್ರರು ಎಂದು ತಪ್ಪಾಗಿ ಅಥೈರ್ಸಿಕೊಳ್ಳುವಿರಿ. ಆದಷ್ಟು ಭೇಟಿ ಆದ ಜನರ ಪೂರ್ವಾಪರ ವಿಚಾರ ತಿಳಿದು ಅವರ ಸ್ನೇಹವನ್ನು ಸಂಪಾದಿಸಿರಿ.
ತುಲಾ
ಮನೆಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳೇ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಮೂಡಲು ಸಹಾಯವಾಗುತ್ತದೆ. ಆದಷ್ಟು ಶಿವನ ಆರಾಧನೆ ಮಾಡುವ ಮೂಲಕ ಸಂಸಾರದಲ್ಲಿ ಸುಖ ಕಾಣುವಿರಿ. ಸೋತು, ಗೆಲ್ಲವುದು ಶ್ರೇಷ್ಠ.
ವೃಶ್ಚಿಕ
ಮಾನಸಿಕ ಒತ್ತಡಗಳಿಂದ ಹೊರಬರಲು ಯೋಗ, ಪ್ರಾಣಾಯಾಮಗಳನ್ನು ಇಂದು ತಪ್ಪದೆ ಮಾಡಿರಿ. ಪ್ರಯಾಣದಲ್ಲಿ ಎಚ್ಚರ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ. ನೀವು ಬಯಸಿದಷ್ಟು ಈ ದಿನ ಹಣಕಾಸು ದೊರೆಯದೆ ಹೋಗಬಹುದು.
ಧನು
ಸ್ನೇಹಿತರ ಬಳಗ ಬೆನ್ನಿಗೆ ನಿಲ್ಲುವುದು ಮಾತ್ರವಲ್ಲ, ಅಗತ್ಯ ಮಾರ್ಗದರ್ಶನವನ್ನು ನೀಡುವುದು. ನಿಮ್ಮ ನಿಜವಾದ ಸಾಮರ್ಥ್ಯ ಮೇಲಧಿಕಾರಿಗಳಿಗೆ ತಿಳಿಯುವುದರಿಂದ ಅವರು ನಿಮ್ಮ ಮೇಲೆ ವಿಶೇಷ ಅಭಿಮಾನವನ್ನು ಬೆಳೆಸಿಕೊಳ್ಳುವರು.
ಮಕರ
ನಿಮ್ಮ ಬಳಿ ಸಂಗ್ರಹ ಹಣವನ್ನು ಬ್ಯಾಂಕಿಗೆ ಹಾಕುವ ಮೂಲಕ ನೀವೊಬ್ಬ ಸೀದಾಸಾದಾ ವ್ಯಕ್ತಿ ಎನ್ನುವರು. ಆದಾಗ್ಯೂ ಸರ್ಕಾರಕ್ಕೆ ಲೆಕ್ಕ ತೋರಿಸದೆ ಇರುವ ಕಾರಣಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯಿದೆ.
ಕುಂಭ
ಸಮಾಜದ ಹಸಿವನ್ನು ನೀಗಿಸುವ ನಿಮಗೆ ಇಂದು ಮಂಕು ಕವಿದ ವಾತಾವರಣ. ಆದಷ್ಟು ನಿಮ್ಮ ಬಳಿಯಲ್ಲಿ ಸ್ವಲ್ಪ ಉದ್ದಿನಕಾಳನ್ನು ಇಟ್ಟುಕೊಳ್ಳಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಮೀನ
ಕೂಡಿಟ್ಟ ಹಣವು ನೀರಿನಂತೆ ಖರ್ಚಾಗುವುದು. ಹಾಗಾಗಿ ಮನಸ್ಸಿಗೆ ಬಂದಂತೆ ಖರ್ಚನ್ನು ಮಾಡದಿರಿ. ಕೆಲ ಮಟ್ಟಿಗಿನ ಉಳಿತಾಯಗಳ ಕಡೆ ಗಮನ ಹರಿಸಿರಿ. ಹಿರಿಯರ ಆಶೀರ್ವಾದದಿಂದ ಈ ದಿನ ಉತ್ತಮವಾಗಿರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಚಿಂತೆ ಉಂಟಾಗುವುದು.