ನಿತ್ಯ ಭವಿಷ್ಯ ಅಕ್ಟೋಬರ್ 6, 2017 (ಶುಕ್ರವಾರ)

0
591

ಮೇಷ

01-Mesha

ವಧುವನ್ನು ಹುಡುಕುತ್ತಿರುವ ಗಂಡುಗಳಿಗೆ ಇಂದು ಶುಭ ವಾರ್ತೆ ಸಿಗಲಿದೆ. ಬಹುಶಃ ಮಾತುಕತೆ ವಿವಾಹದ ಹಂತಕ್ಕೆ ತಲುಪಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಉಂಟಾಗುವುದು. ಸ್ನೇಹಿತರು ಬಂಧುಗಳು ನಿಮಗೆ ಈ ಬಗ್ಗೆ ಕೀಟಲೆ ಮಾಡುವರು.

ವೃಷಭ

02-Vrishabha

ನೀವು ಪರೋಪಕಾರಿಗಳು. ನಿಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ನಿಮ್ಮಿಂದ ಹಲವರು ಸಹಾಯ ಕೇಳಿ ಬರುವರು. ಅವರಿಗೆ ಸಹಾಯ ಮಾಡುವುದರಿಂದ ನಿಮ್ಮ ಕೀರ್ತಿ ವರ್ಚಸ್ಸು ಇನ್ನೂ ಹೆಚ್ಚುವುದು.

ಮಿಥುನ

03-Mithuna

ಪ್ರಯಾಣದ ಆಲಸ್ಯಕ್ಕೆ ಮದ್ದು ತೆಗೆದುಕೊಳ್ಳಿರಿ. ಸಾಧ್ಯವಾದರೆ ಇಂದು ಕೊಂಚ ವಿಶ್ರಾಂತಿ ಪಡೆಯಿರಿ. ನಿಮ್ಮ ಗೆಳೆಯನ ಸಂಸಾರವನ್ನು ಸರಿ ಮಾಡಿಸಿದ್ದಕ್ಕೆ ಪ್ರಶಂಸೆಗಳು ನಿಮಗೆ ದೊರೆಯಲಿದೆ.

ಕಟಕ

04-Kataka

ಕಷ್ಟದಲ್ಲಿರುವ ನಿಮ್ಮ ಸಂಬಂಧಿಕರಿಗೆ ಅಥವಾ ಮಗಳಿಗೆ ಧನ ಸಹಾಯ ಮಾಡುವಿರಿ. ಅಥವಾ ಅವರು ನಿರಾಶರಾಗದಂತೆ ಒಳ್ಳೆಯ ಮಾತುಗಳಿಂದ ಅವರಿಗೆ ಧೈರ್ಯ ತುಂಬುವಿರಿ. ಕಷ್ಟದಲ್ಲಿರುವಾಗ ಸಹಾಯ ಮಾಡುವವರೇ ನಿಜವಾದ ಬಂಧುಗಳು.

ಸಿಂಹ

05-Simha

ನಿಮ್ಮ ಗಮನಕ್ಕೆ ಬರದೇ ನಿಮ್ಮ ಮನೆಯಲ್ಲಿ ಒಂದು ಶುಭ ಸಮಾರಂಭದ ವೇದಿಕೆ ಸಜ್ಜಾಗಿರುವುದು. ಅದನ್ನು ಕೂಲಾಗಿಯೇ ಸ್ವೀಕರಿಸಿರಿ. ಇದು ನಿಮಗೆ ಮುಂಚೆ ತಿಳಿದರೆ ಆ ಕಾರ್ಯಕ್ರಮವನ್ನು ಮಾಡಲು ನಿಮ್ಮ ಮನಸ್ಸು ಒಪ್ಪುವುದಿಲ್ಲ.

ಕನ್ಯಾ

06-Kanya

ದೂರದ ಊರಿನಿಂದ ಬರುವ ಪತ್ರವು ನಿಮ್ಮ ಮುಖದಲ್ಲಿ ಮಂದಹಾಸವನ್ನು ಮೂಡಿಸುವುದು. ಬಾಲ್ಯದಲ್ಲಿ ಕಳೆದ ಹಳೆಯ ನೆನಪುಗಳು ಮರುಕಳಿಸುವುದು. ಸ್ನೇಹಿತರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿರಿ. ಮನಸ್ಸು ಹಗುರವಾಗುವುದು.

ತುಲಾ

07-Tula

ತುಂಬಾ ದಿನಗಳಿಂದ ಆಗಬೇಕಿದ್ದ ಸರ್ಕಾರಿ ಕೆಲಸಗಳು ಇಂದು ಆಗುತ್ತವೆ. ಹಾಗಾಗಿ ನಿಮಗೆ ನವಚೈತನ್ಯ ಬಂದಂತೆ ಆಗುವುದು. ಅಂತೆಯೆ ನಿಮಗೆ ಬರಬೇಕಾಗಿದ್ದ ಬಾಕಿ ಹಣವು ಇಂದು ನಿಮ್ಮ ಕೈಸೇರುವುದು.

ವೃಶ್ಚಿಕ

08-Vrishika

ಎಲ್ಲಾ ಕಷ್ಟಗಳ ಸರಮಾಲೆ ಕಂಡು ಮನೆಯಲ್ಲಿ ವಾಸ್ತುದೋಷವಿರಬಹುದೆಂದು ಭ್ರಮಿಸುವಿರಿ. ಆದರೆ ಅದು ದಿಟವಲ್ಲ. ಸದ್ಯದ ಗ್ರಹಗತಿಗಳು ನಿಮ್ಮ ಮನಸ್ಸನ್ನು ಆಡಿಸುತ್ತಿವೆ. ಭಕ್ತಿಯಿಂದ ಭಗವಂತನಲ್ಲಿ ಪ್ರಾರ್ಥನೆ ಮಾಡಿರಿ ಒಳಿತಾಗುವುದು.

ಧನು

09-Dhanussu

ನಿಮಗೆ ಬರುವ ಸಲಹೆ ಸಹಕಾರಗಳನ್ನು ಸ್ವೀಕರಿಸಿರಿ. ಆದರೆ ಪ್ರತ್ಯುತ್ತರವಾಗಿ ನೀವು ನಿಮ್ಮ ವಿಚಾರಧಾರೆಗಳನ್ನು ಹರಿಯಬಿಡದಿರಿ. ಕೆಲವೊಮ್ಮೆ ಇದರಿಂದ ಅಪಾರ್ಥಕ್ಕೆ ಎಡೆಮಾಡಿಕೊಡುವ ಸಂದರ್ಭವಿರುತ್ತದೆ.

ಮಕರ

10-Makara

ನಿಮ್ಮ ಹೊಣೆಗಾರಿಕೆಗೆ ಹೆದರದೆ ಮುನ್ನುಗ್ಗಿರಿ. ಮನೆಯ ಹಿರಿಯರ ಆರೋಗ್ಯದತ್ತ ಗಮನ ಹರಿಸಿರಿ. ನಿಮ್ಮ ಧಾರಾಳತನವೇ ನಿಮಗೆ ಶ್ರೀರಕ್ಷೆ ಆಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕುಂಭ

11-Kumbha

ಪರೋಪಕಾರಿಗಳಾದ ನೀವು ಇಂದು ಇತರೆಯವರಿಗೆ ಸಹಾಯ ಮಾಡಿ ಅವರಿಂದಲೇ ಟೀಕೆಗೆ ಗುರಿಯಾಗುವ ಸಂದರ್ಭವಿದೆ. ಹಾಗಾಗಿ ಯಾರು ಕೇಳದೆ, ಬಯಸದೆ ಅವರಿಗೆ ಸಹಾಯ ಮಾಡದಿರಿ.

ಮೀನ

12-Meena

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದರು ಹಿರಿಯರು. ಇಂದಿನ ನಿಮ್ಮ ಕಾರ್ಯಗಳು ಸುಗಮವಾಗಿ ಆಗಲು ಗುರುವಿನ ಆಶೀರ್ವಾದ ಮುಖ್ಯ. ಹಾಗಾಗಿ ಅವುಗಳನ್ನು ಪಡೆಯಲು ಪ್ರಯತ್ನಿಸಿ.