ಮೇಷ
ಆಶಾವಾದವು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಬೆಂಬಲ ನೀಡುವರು. ಈದಿನ ಶುಭವಾರ್ತೆಯನ್ನು ಕೇಳುವಿರಿ. ಬಂಧುಭಗಿನಿಯರ ಸೌಖ್ಯ, ಭಾಗ್ಯ ವೃದ್ಧಿ. ಆಂಜನೇಯ ಸ್ತೋತ್ರ ಪಠಿಸಿ.
ವೃಷಭ
ನಿವೇಶನ ಖರೀದಿಯ ಪ್ರಸ್ತಾಪ ಒಂದು ಹಂತಕ್ಕೆ ಬರುವುದು. ಜಾಗ್ರತೆಯಿಂದ ವ್ಯವಹರಿಸಿರಿ. ಹಣಕಾಸು ವಿವಿಧ ರೀತಿಯಲ್ಲಿ ಒದಗಿ ಬರುವುದು. ಉದ್ಯೋಗದಲ್ಲಿ ಉತ್ಕರ್ಷ, ವೈಭವ ಕಾಲ. ಕೌಟುಂಬಿಕವಾಗಿ ನೆಮ್ಮದಿಯ ದಿನ.
ಮಿಥುನ
ಬೌದ್ಧಿಕ ವ್ಯವಹಾರದಿಂದ ಸಮಾಜದಲ್ಲಿ ಗುರುತಿಸಲ್ಪಡುವಿರಿ. ಪುತ್ರ ಸೌಖ್ಯ, ಹರ್ಷದಾಯಕ ವಾರ್ತೆ ಕೇಳುವಿರಿ. ದೂರ ಪ್ರವಾಸ. ವ್ಯವಹಾರ ಕೌಶಲ್ಯದಿಂದ ದ್ರವ್ಯ ಸಂಚಯ. ಕೌಟುಂಬಿಕ ಜೀವನ ಮಧುರವಾಗಿರುತ್ತದೆ.
ಕಟಕ
ಕೋರ್ಟು ಕಚೇರಿಯ ಕಾರ್ಯಗಳು ಮುಂದೂಡಲ್ಪಡುವುದು. ಮಾನಸಿಕ ಶಾಂತಿಗಾಗಿ ಶಿವಪಂಚಾಕ್ಷರಿ ಮಂತ್ರವನ್ನು ಪಠಿಸಿ. ವ್ಯಾಪಾರ-ಉದ್ಯೋಗದಲ್ಲಿ ತುಸು ಹಿನ್ನಡೆ ಸಂಭವ. ವಾದ-ವಿವಾದಗಳಿಂದ ದೂರವಿರಿ.
ಸಿಂಹ
ಉದ್ಯೋಗದಲ್ಲಿ ಸ್ಥಿರತೆ, ಕುಟುಂಬದ ವಾತಾವರಣವು ಚೇತೋಹಾರಿಯಾಗಿರುತ್ತದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಮನ್ನಣೆ ಸಿಗುವುದು.
ಕನ್ಯಾ
ಧನಾತ್ಮಕ ಚಿಂತನೆಯಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ವಿರೋಧಿಗಳಿಗೆ ಮುಖಭಂಗವಾಗುವುದು. ಉದರ ಶೂಲೆಗೆ ಸಂಬಂಧಪಟ್ಟಂತೆ ತೊಂದರೆಯನ್ನು ಎದುರಿಸಬೇಕಾಗುವುದು. ಮನೆ ವೈದ್ಯರ ಸಲಹೆ ಪಡೆಯಿರಿ.
ತುಲಾ
ಸೌಂದರ್ಯವರ್ಧಕ ವಸ್ತುಗಳ ಖರೀದಿ. ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಮನ್ನಣೆ. ಬರಹಗಾರರಿಗೆ ಉತ್ತಮ ಸಂಭಾವನೆ, ಗೌರವ ದೊರೆಯುವುದು. ಸಜ್ಜನ ಬಂಧುಪ್ರೇಮ, ಯೋಜಿತ ಕಾರ್ಯಗಳು ತೃಪ್ತಿ ನೀಡುವುದು.
ವೃಶ್ಚಿಕ
ವಿದ್ವಾನ್ ಮತ್ತು ಗುಣಿ ಜನರ ಪರಿಚಯವಾಗುವುದು. ಉದ್ಯೋಗ ದಂಧೆ ನೌಕರಿಯಲ್ಲಿ ಲಾಭ. ಲೇಖನಿ ವ್ಯವಸಾಯದಲ್ಲಿ ಯಶಸ್ಸು, ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಮಾನ-ಸನ್ಮಾನಗಳು ದೊರೆತು ಅಧಿಕಾರ ಪ್ರಾಪ್ತಿ ಉಂಟಾಗುವುದು.
ಧನು
ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು. ಮಿತ್ರರ ಸಹಕಾರ ದೊರೆಯಲಿದೆ. ವ್ಯವಹಾರವು ಸುಲಲಿತವಾಗಿ ನಡೆಯುವುದು. ಪರಾವಲಂಬನ ಜೀವನ ಒಳ್ಳೆಯದಲ್ಲ. ಗುರುವಿನ ಅನುಗ್ರಹ ಪಡೆಯಿರಿ.
ಮಕರ
ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಹಿಡಿದು ಪ್ರತಿಯೊಬ್ಬರ ಸಹಕಾರ ದೊರೆಯಲಿದೆ. ಮಡದಿಯೊಂದಿಗಿನ ಬಾಂಧವ್ಯ ಮಧುರವಾಗಿರುವಂತೆ ನೋಡಿಕೊಳ್ಳಿ. ಹಿತೈಷಿಗಳ ಶ್ರೇಯಸ್ಸಿಗೆ ಶಕ್ತಿ ಮೀರಿ ಪ್ರಯತ್ನಿಸುವಿರಿ.
ಕುಂಭ
ನಿಮ್ಮ ವೃತ್ತಿ ಹಾಗೂ ವ್ಯಾಪಾರದಲ್ಲಿ ತೊಡಕು ಸಹಜವಾಗಿದ್ದರೂ ಅದರಿಂದ ಹೆಚ್ಚಿನ ಹಾನಿ ಇಲ್ಲ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಹಕಾರವಿರುತ್ತದೆ. ಅವಸರವು ಕೆಲಸವನ್ನು ಕೆಡಿಸಿದರೆ ಸಂಯಮವು ಕಾರ್ಯದಲ್ಲಿ ಯಶಸ್ಸು ನೀಡುತ್ತದೆ.
ಮೀನ
ಆಗಿ ಹೋದ ಕಹಿ ಘಟನೆಗಳನ್ನು ಮೆಲುಕು ಹಾಕುವುದರಲ್ಲಿ ಅರ್ಥವಿಲ್ಲ. ಗುರುವಿನ ಬೆಂಬಲವಿರುವುದರಿಂದ ಸಕಾರಾತ್ಮಕವಾಗಿ ಚಿಂತಿಸಿ ಯಶಸ್ಸನ್ನು ಹೊಂದಿರಿ. ಕೌಟುಂಬಿಕ ವಿಷಯಗಳನ್ನು ಅತಿರೇಕಕ್ಕೆ ಒಯ್ಯುವುದು ಒಳ್ಳೆಯದಲ್ಲ.