ದಿನ ಭವಿಷ್ಯ: 21 ಡಿಸೆಂಬರ್ 2017

0
1397
ದಿನ ಭವಿಷ್ಯ

ಮೇಷ:

ಎಲ್ಲವೂ ಒಂದೇ ಸಲ ಆಗಿಬಿಡಬೇಕೆಂಬ ಆತುರ ಬೇಡ. ಕೊಂಚ ತಾಳ್ಮೆಯೂ ಇರಲಿ. ಹೀಗಾದಲ್ಲಿ ಮುಂದಿನ ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ.

ವೃಷಭ:

ಗುರಿ ತಲುಪುವ ಹಾದಿ ಈಗ ಸ್ಪಷ್ಟವಾಗಿ ಗೋಚರಿಸುತ್ತಿರುವುದರಿಂದ ಆ ಮಾರ್ಗದಲ್ಲಿ ನಡೆಯಿರಿ. ಹೊಸ ತಂತ್ರಗಾರಿಕೆಯಿಂದ ಯಶಸ್ಸು ಹೊಂದುವಿರಿ.

ಮಿಥುನ:

ವೃತ್ತಿ ಮತ್ತು ವ್ಯವಹಾರದಲ್ಲಿ ಕುಶಲರಾದ ನೀವು ದೌರ್ಬಲ್ಯವನ್ನು ಮೆಟ್ಟಿನಿಂತರೆ ಹೆಚ್ಚಿನ ಯಶಸ್ಸು ಹೊಂದಬಹುದು. ಆರ್ಥಿಕ ಸಬಲತೆ ಇರುವುದು.

ಕಟಕ:

ನೀವು ಕೆಲಸ ಮಾಡುತ್ತಾ ಹೋದರೆ ಯಶಸ್ಸು ನಿಮ್ಮ ಹಿಂದೆಯೇ ಬರುತ್ತದೆ. ಆದರೆ ಪ್ರತಿಫಲ ನಿರೀಕ್ಷಿಸುತ್ತಾ ಕಾರ್ಯ ಪ್ರವೃತ್ತರಾದರೆ ಹಿನ್ನಡೆ ಅನುಭವಿಸುವಿರಿ.

ಸಿಂಹ:

ಒಂದು ರೀತಿಯ ಪರೀಕ್ಷೆಕಾಲ ನಿಮಗೆ. ಸಾಮಾಜಿಕ ಮತ್ತು ಕೌಟುಂಬಿಕ ಕ್ಷೇತ್ರವನ್ನು ಹೇಗೆ ನಿಭಾಯಿಸುತ್ತೀರಿ ಎಂಬುದೇ ಎಲ್ಲರಿಗೂ ಸೋಜಿಗದ ವಿಚಾರವಾಗುವುದು.

ಕನ್ಯಾ:

ಯಶಸ್ಸಿಗೆ ಹಲವು ಮಾರ್ಗಗಳು. ಆದರೆ ಯಾವ ಮಾರ್ಗದಲ್ಲಿ ಹೋದರೆ ಒಳಿತಾಗುವುದು ಎಂದು ಮನದಲ್ಲೇ ಕೊರಗುವುದಕ್ಕಿಂತ ಸ್ನೇಹಿತರ ಸಲಹೆ ಪಡೆಯಿರಿ.

ತುಲಾ:

ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳುವುದು ಮುಖ್ಯವಲ್ಲ. ಅದನ್ನು ಸಾಕಾರಗೊಳಿಸುವುದು ಹೇಗೆ ಎಂಬುದನ್ನು ಆಲೋಚಿಸಿ. ಆ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿ.

ವೃಶ್ಚಿಕ:

ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎಂಬಂತೆ ಜೀವನದಲ್ಲಿ ಆಶಾಭಾವನೆಯನ್ನು ಮೈಗೂಡಿಸಿಕೊಳ್ಳಿ. ಇದರಿಂದ ನಿಮಗೆ ಒಳಿತಾಗುವುದು.

ಧನಸ್ಸು:

ಅವಕಾಶಗಳು ಹೇರಳವಾಗಿವೆ. ಆದರೆ ಅವುಗಳಲ್ಲಿ ತೊಡಗಿಸಿಕೊಳ್ಳಲು ನೀವೇ ಹಿಂದೇಟು ಹಾಕುತ್ತಿದ್ದೀರಿ. ಬಂದ ಅವಕಾಶಗಳನ್ನು ಕಳೆದುಕೊಳ್ಳಬೇಡಿ.

ಮಕರ:

ಬಯಕೆಗಳು ಮತ್ತು ವಾಸ್ತವದ ನಡುವಿನ ದ್ವಂದ್ವ ನಿಮ್ಮನ್ನು ಕಾಡುತ್ತದೆ. ತಾಳ್ಮೆಯಿಂದ ಯೋಚಿಸಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಒಳ್ಳೆಯದು.

ಕುಂಭ:

ಅವಿವಾಹಿತರಿಗೆ ಕಂಕಣಭಾಗ್ಯ ಒದಗಿ ಬರುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ:

ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಬೇಕು. ನಿಮ್ಮ ಕರ್ತೃತ್ವ ಶಕ್ತಿ ನೋಡಿಯೇ ನಿಮ್ಮ ಮೇಲಾಧಿಕಾರಿಗಳು ಹೆಚ್ಚಿನ ಜವಾಬ್ದಾರಿ ನೀಡುತ್ತಿರುವರು.