ದಿನ ಭವಿಷ್ಯ: 25 ಡಿಸೆಂಬರ್ 2017

0
578
ದಿನ ಭವಿಷ್ಯ

ಮೇಷ:

ಉದ್ಯೋಗದಲ್ಲಿ ಆಕಸ್ಮಿಕ ಬದಲಾವಣೆ, ಷೇರು ದಲ್ಲಾಳಿಗಳಿಗೆ ತೃಪ್ತಿಕರ ದಿನ. ವಿಚಾರ ವಿನಿಮಯದಿಂದ ಬದುಕು ಪ್ರಗತಿ.

ವೃಷಭ:

ವೈದ್ಯ ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು, ಆರೋಗ್ಯದಲ್ಲಿನ ಉತ್ತಮ ಸುಧಾರಣೆಯಿಂದ ಕಾರ್ಯಗಳಲ್ಲಿ ಜಯ.

ಮಿಥುನ:

ಅಪೇಕ್ಷಿಸುವ ಸಹಕಾರ ಮೇಲಧಿಕಾರಿಗಳಿಂದ ದೊರೆತು ಹಣಕಾಸು ಸುಧಾರಣೆ, ಕಲಾವಿದರಿಗೆ ಸಂತಸ.

ಕರ್ಕ:

ಒಪ್ಪಂದದ ವ್ಯವಹಾರಗಳು ಸುಗಮ ಸಾಗಲು ಆಪ್ತರ ನೆರವು. ಬಂಧುಗಳ ಭೇಟಿಯಿಂದ ಸುಖ ಪ್ರಯಾಣ.

ಸಿಂಹ:

ಹಳೆಯ ಯೋಜನೆಗಳಿಗೆ ಮರುಜೀವ ದೊರೆತು ಉದ್ಯಮಿಗಳಿಗೆ ಅಧಿಕ ಲಾಭ, ಬರಹಗಾರರಿಗೆ ಗೌರವಾದರ.

ಕನ್ಯಾ:

ಕೃಷಿಕರಿಗೆ ಬೇಳೆ ಕಾಳುಗಳಿಂದ ಅಧಿಕ ಆದಾಯ, ಬಟ್ಟೆ ವ್ಯಾಪಾರಿಗಳಿಗೆ ಪ್ರಗತಿ, ಹೆಚ್ಚಿನ ಕೆಲಸದಿಂದ ಆಯಾಸ.

ತುಲಾ:

ಸಹೋದ್ಯೋಗಿಗಳಿಗೆ ಹೆಚ್ಚಿನ ಬಡ್ತಿಯಿಂದ ವಿಶ್ವಾಸ ಹೆಚ್ಚಳ. ಮೃದು ಮಾತುಗಳಿಂದ ಕಾರ್ಯ ಸಾಧನೆ, ಸಂತಸ.

ವೃಶ್ಚಿಕ:

ಮಹತ್ವದ ಕೆಲಸಗಳಿಗೆ ಕರಾರು ವಿಧಿಸುವಿಕೆಯಿಂದ ಸಮಾಧಾನ ಹೆಚ್ಚಿನ ಲಾಭದಿಂದ ಹಿರಿಯರಲ್ಲಿ ಗೌರವ ವೃದ್ಧಿ.

ಧನು:

ಬತ್ತದ ಉತ್ಸಾಹದಿಂದ ಹೊಸ ಅವಕಾಶಗಳಲ್ಲಿ ಯಶಸ್ಸು. ಹಿರಿಯ ಸಹೋದ್ಯೋಗಿಗಳಿಂದ ಸಹಾಯ ಉಲ್ಲಾಸ.

ಮಕರ:

ಹಿರಿಯರಿಂದ ಬಂದ ಆಸ್ತಿ ಉಳಿಸಿಕೊಳ್ಳಲು ಶತ ಪ್ರಯತ್ನ, ಪ್ರಯಾಣದಿಂದ ಅಧಿಕ ಖರ್ಚು, ಜತೆಗೆ ಆದಾಯ.

ಕುಂಭ:

ಹೊಸದಾಗಿ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ, ಆತ್ಮೀಯರೊಂದಿಗೆ ಚರ್ಚೆ, ಧಾನ್ಯ ವ್ಯಾಪಾರಿಗಳಿಗೆ ಸಾಧಾರಣ.

ಮೀನ:

ಆರೋಗ್ಯದಲ್ಲಿ ನಿಧಾನ ಉಂಟಾಗುವ ಚೇತರಿಕೆಯಿಂದ ಉದ್ಯೋಗದಲ್ಲಿ ಮುನ್ನಡೆ. ಶುಭವಾರ್ತೆ. ಕುಟುಂಬ ಸೌಖ್ಯ.