ದಿನ ಭವಿಷ್ಯ: 5 ಡಿಸೆಂಬರ್ 2017

0
1050
ದಿನ ಭವಿಷ್ಯ

ಮೇಷ:
ನಿಮ್ಮ ಬಾಳಿಗೆ ಸಂತೋಷ ತುಂಬುವ ಸುದ್ದಿಗಳನ್ನು ಕೇಳುವಿರಿ. ಉನ್ನತ ಅಧಿಕಾರಿಗಳಿಂದ ಬೆಂಬಲ ದೊರೆಯುವುದು.

ವೃಷಭ:
ಉತ್ತಮ ಆರೋಗ್ಯ, ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಕೂಲ ಪರಿಣಾಮ ಎದುರಿಸುವಿರಿ. ನಿಧಾನದಿಂದ ಪ್ರಗತಿಯುಂಟಾಗುವುದು.

ಮಿಥುನ:
ಯಾವುದೇ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಒಳ್ಳೆಯದಲ್ಲ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ಪಡೆಯುವಿರಿ.

ಕಟಕ:
ವಾಣಿಜ್ಯ ರಂಗದವರಿಗೆ ಲಾಭ. ಗೆಳೆಯರಿಂದ ಸಹಾಯ. ನಿಮ್ಮ ಅನಿಸಿಕೆಗಳನ್ನು ಮತ್ತೊಬ್ಬರ ಮುಂದೆ ಹಂಚಿಕೊಳ್ಳಿ.

ಸಿಂಹ:
ನಿರುದ್ಯೋಗಿಗಳಿಗೆ ನೌಕರಿ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ.

ಕನ್ಯಾ:
ಉತ್ತಮ ಆರೋಗ್ಯ. ಆತ್ಮೀಯರೊಬ್ಬರನ್ನು ಭೇಟಿ ಮಾಡುವ ಸಾಧ್ಯತೆ. ಸಂತಸ ನೀಡುವ ಸುದ್ದಿಗಳನ್ನು ಸ್ವೀಕರಿಸುವಿರಿ.

ತುಲಾ:
ಮನೆಯಲ್ಲಿ ಶುಭ ಕಾರ್ಯ. ನೆಮ್ಮದಿಯ ವಾತಾವರಣ. ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ವಹಿಸಿ.

ವೃಶ್ಚಿಕ:
ಹಿರಿಯರು ಹೆತ್ತವರೊಂದಿಗೆ ವಾಗ್ವಾದಕ್ಕಿಳಿಯುವುದು ಒಳ್ಳೆಯದಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ. ಆಹಾರದ ವಿಷಯದಲ್ಲಿ ಜಾಗ್ರತೆ.

ಧನಸ್ಸು:
ಆರೋಗ್ಯದ ಬಗ್ಗೆ ಗಮನವಿರಲಿ. ಆದಾಯ ಮೀರಿ ಖರ್ಚು ಮಾಡಬೇಡಿ. ಆಸೆಗಳಿಗೆ ಕೊಂಚ ಬ್ರೇಕ್ ಬೀಳುವುದು.

ಮಕರ:
ನೌಕರಿಯಲ್ಲಿ ಬಡ್ತಿ ಸಾಧ್ಯತೆ. ವರ್ಗಾವಣೆ ಯೋಗ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಕೆಲಸದ ಒತ್ತಡ.

ಕುಂಭ:
ವ್ಯಾಪಾರಿಗಳಿಗೆ ಉತ್ತಮ ಲಾಭ. ಹಿರಿಯರ ಆಶೀರ್ವಾದ ಪಡೆಯಿರಿ. ತಾಳಿದವನು ಬಾಳಿಯಾನು. ತಾಳ್ಮೆ ವಹಿಸುವುದು ಸೂಕ್ತ.

ಮೀನ:
ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು. ಮಾಡಬೇಕಾದ ಕಾರ್ಯಗಳು ಸಾಕಷ್ಟಿವೆ. ಆದ್ಯತೆ ಮೇಲೆ ಪರಿಹರಿಸಿಕೊಳ್ಳಿ.