ನಿತ್ಯ ಭವಿಷ್ಯ ಆಗಸ್ಟ್ 18, 2017 (ಶುಕ್ರವಾರ)

0
714

ಆಗಸ್ಟ್ 18, 2017 (ಶುಕ್ರವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಆರ್ದ್ರೆ ನಕ್ಷತ್ರ,

ಮೇಷ

01-Mesha

ಈ ದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ಊಟದಲ್ಲಿ ರುಚಿ ಕಡಿಮೆ ಎನಿಸುವುದು. ಆಪ್ತ ಸ್ನೇಹಿತರಿಂದ ಬೇಸರ ಉಂಟಾಗುವ ಸಾಧ್ಯತೆ. ಆಂಜನೇಯ ಸ್ತೋತ್ರ ಪಠಿಸಿ.

ವೃಷಭ

02-Vrishabha

ಸಜ್ಜನರ ಸಂಘವದು ಹೆಜ್ಜೇನು ಸವಿದಂತೆ ಎನ್ನುವಂತೆ ಈ ದಿನ ಹರ್ಷ, ಉಲ್ಲಾಸದಿಂದ ಸಮಯ ಕಳೆಯುವಿರಿ. ಮೇಲಧಿಕಾರಿಗಳಿಂದ ಪ್ರಶಂಸೆ. ದೇಹದಲ್ಲಿ ಉತ್ತಮ ಆರೋಗ್ಯ. ಧನಾತ್ಮಕ ಚಿಂತನೆಯಿಂದ ಮನಸ್ಸು ಪ್ರಫುಲ್ಲಿತವಾಗುವುದು.

ಮಿಥುನ

03-Mithuna

ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ಕೊಂಚ ಏರುಪೇರು ಆಗುವ ಸಂಭವ. ಮನೆ ವೈದ್ಯರ ಸಲಹೆ ಪಡೆಯಿರಿ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ಆಗುವುದು. ಶಿವನ ಆರಾಧನೆಯಿಂದ ಒಳಿತಾಗುವುದು.

ಕಟಕ

04-Kataka

ಈ ದಿನ ಅಧಿಕ ಕೆಲಸದಿಂದ ಸರಿಯಾದ ಸಮಯಕ್ಕೆ ಆಹಾರ ಸೇವಿಸಲು ಆಗುವುದಿಲ್ಲ. ಇದೇ ಕಾರಣಕ್ಕೆ ಸಂಜೆಯ ವೇಳೆಗೆ ಅಲ್ಪ ಆಲಸ್ಯ ಕಾಡುವುದು. ಮನೆಗೆದ್ದು ಮಾರುಗೆಲ್ಲು ಎನ್ನುವಂತೆ ಮೊದಲು ಆರೋಗ್ಯದ ಕಡೆ ಗಮನ ನೀಡಿ.

ಸಿಂಹ

05-Simha

ಇಂದು ನಿಮ್ಮ ಮಾತೇ ಅಂತಿಮ. ಕೆಲಸ ಕಾರ್ಯಗಳಲ್ಲಿ ನೀವು ತೆಗೆದುಕೊಂಡ ತೀರ್ಮಾನವನ್ನು ಎಲ್ಲರೂ ಪಾಲಿಸುವರು. ಶತ್ರು ನಾಶ, ಆರೋಗ್ಯ ವೃದ್ಧಿ, ಉತ್ಸಾಹ. ಕೌಟುಂಬಿಕ ಸದಸ್ಯರೊಡನೆ ಉತ್ತಮ ಸಮಯ ಕಳೆಯುವಿರಿ.

ಕನ್ಯಾ

06-Kanya

ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ. ಅಂತೆಯೇ ನೀವು ಮುಂದೆ ಮಾಡಬೇಕೆನ್ನುವ ಕ್ರಿಯಾಶೀಲ ಕೆಲಸಗಳಿಗೆ ಸ್ನೇಹಿತರ ನೆರವು ಪಡೆಯುವಿರಿ. ಹಿರಿಯರೊಡನೆ ಗೌರವಯುತವಾಗಿ ನಡೆದುಕೊಳ್ಳಿ.

ತುಲಾ

07-Tula

ಸಕಲ ಅನರ್ಥಗಳಿಗೆ ಕೋಪ ಮೊದಲು ಬೇರು. ಜೀವನದಲ್ಲಿ ಸಣ್ಣಪುಟ್ಟ ಘಟನೆಗಳು ನಮ್ಮ ಆತ್ಮೀಯರಿಂದ ಆದಾಗ ಬೇಸರ ಮೂಡುವುದು ಸಹಜ. ಅಂತಯೇ ಈದಿನ ನಿಮ್ಮ ಕೋಪ ತಾಪಗಳಿಂದ ದೂರವಿರುವುದು ಒಳ್ಳೆಯದು.

ವೃಶ್ಚಿಕ

08-Vrishika

ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ವ್ಯಾಪಾರಸ್ಥರಿಗೆ ಉತ್ತಮ ಕಾಲ. ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿ ದೀನ ದಲಿತರಿಗೆ ಆಹಾರ ನೀಡಿ.

ಧನು

09-Dhanussu

ಬುದ್ಧಿ ಚಾತುರ‍್ಯದಿಂದ ಹಮ್ಮಿಕೊಂಡ ಕೆಲಸಗಳು ಪ್ರಶಂಸೆಗೆ ಪಾತ್ರವಾಗುವುದು. ದ್ವಿತೀಯ ಧನಾಧಿಪತಿ ವ್ಯಯಸ್ಥಾನದಲ್ಲಿ ಸಂಚರಿಸುತ್ತಿರುವುದರಿಂದ ಆರ್ಥಿಕ ಮುಗ್ಗಟ್ಟು ಉಂಟಾಗುವುದು. ಕುಟುಂಬದಲ್ಲಿ ಸಾಮರಸ್ಯ ಕಡಿಮೆ ಆಗುವುದು.

ಮಕರ

10-Makara

ಸ್ವಾಭಿಮಾನದಿಂದ ಬದುಕಬೇಕೆನ್ನುವ ನೀವು ಇನ್ನೊಬ್ಬರ ಹಂಗಿನಲ್ಲಿ ಬದುಕಲು ಇಷ್ಟಪಡುವುದಿಲ್ಲ. ಇದನ್ನೇ ಇತರರು ಅಹಂಕಾರ ಎಂದು ಭಾವಿಸುವರು. ಬೇರೆಯವರು ಏನಾದರೂ ಅಂದುಕೊಳ್ಳಲಿ ನೀವು ನಿಮ್ಮ ಕೆಲಸ ಮಾಡಿ.

ಕುಂಭ

11-Kumbha

ಉನ್ನತ ಅಧಿಕಾರಿಗಳ ಭೇಟಿ ಮತ್ತು ಮಾತುಕತೆಯಿಂದ ಸಮಸ್ಯೆಗಳು ಇತ್ಯರ್ಥವಾಗುವುದು. ಆಟೋಮೊಬೈಲ್‌ ಮತ್ತು ಇಲೆಕ್ಟ್ರಾನಿಕ್ಸ್‌ಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು.

ಮೀನ

12-Meena

ಈ ದಿನ ನಿಮ್ಮ ಮಾತಿಗೆ ಬೆಲೆ ಬರುವುದು. ನಿಮ್ಮ ಹಿತಚಿಂತಕರನ್ನು ಅಥವಾ ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವಿರಿ. ಇದರಿಂದ ನಿಮಗೇ ಲಾಭವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.