ದಿನ ಭವಿಷ್ಯ: ಡಿಸೆಂಬರ್‌ 8, 2017

0
1318

ಮೇಷ:-
ಆಸೆಯೇ ದುಃಖಕ್ಕೆ ಮೂಲ ಎಂದರು ಭಗವಾನ್‌ ಬುದ್ಧರು. ಅಂತೆಯೇ ಈ ದಿನ ಎಲ್ಲವೂ ಒಳಿತಾಗುವುದು ಎಂಬ ನಿಮ್ಮ ಆಸೆಗೆ ತಣ್ಣೀರು ಎರಚಿದಂತೆ ಆಗುವುದು. ಈ ದಿನ ವಿಭಿನ್ನವಾಗಿ ಯೋಚಿಸಿ ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ನಿಮ್ಮದಾಗುವುದು.

ವೃಷಭ:-
ಅನುಮಾನಂ ಪೆದ್ದ ರೋಗಂ ಎಂದರು ಹಿರಿಯರು. ಕೆಲವೊಂದು ವಿಷಯಗಳಲ್ಲಿ ನಂಬಿಕೆ ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ಸಮಾಜದಲ್ಲಿ ಎಲ್ಲರೂ ಕೆಟ್ಟವರಲ್ಲ, ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಿರಿ.

ಮಿಥುನ:-
ಎಲ್ಲಿಗೆ ಹೋದರೂ ನಿಮ್ಮ ಗ್ರಹಗತಿಗಳು ಬದಲಾವಣೆ ಆಗುವುದಿಲ್ಲ. ಇದನ್ನೆ ಬಸವಣ್ಣನವರು ಅಂದಿದ್ದು. ಬಾರದು ಬಪ್ಪದು, ಬಪ್ಪದು ತಪ್ಪದು ಎಂದು. ಹಾಗಾಗಿ ನಿಲುಕದಿರುವ ನಕ್ಷ ತ್ರ ಕುರಿತು ಚಿಂತಿಸಿ ಫಲವಿಲ್ಲ.

ಕಟಕ:-
ಸಕಾರಾತ್ಮಕ ಚಿಂತನೆಯಿಂದ ಸಾಧ್ಯವಾಗದೆ ಇದ್ದುದನ್ನು ಸಾಧ್ಯವಾಗಿ ಮಾಡಬಲ್ಲ ಶಕ್ತಿ ಇದೆ. ಹಾಗಾಗಿ ಧನಾತ್ಮಕವಾಗಿ ಚಿಂತಿಸಿ ಈ ದಿನ ಧನ್ಯತೆಯನ್ನು ಪಡೆಯಿರಿ. ಸ್ನೇಹಿತರು ಈ ವಿಷಯವಾಗಿ ಬೆಂಗಾವಲಿಗೆ ನಿಲ್ಲುವರು.

ಸಿಂಹ:-
ಗುರು ರಾಘವೇಂದ್ರರನ್ನು ಮನಸಾ ಸ್ಮರಿಸಿರಿ. ನಿಮ್ಮ ಇಚ್ಛಿತ ಕಾರ್ಯಗಳನ್ನು ಪೂರೈಸಿಕೊಳ್ಳುವತ್ತ ಚಿಂತಿಸಿರಿ. ಯಾತ್ರಿಕರ ರೂಪದಲ್ಲಿ ಗುರುವು ನಿಮಗೆ ದರ್ಶನವಿತ್ತು ಮಾರ್ಗ ತೋರುವರು. ಹಣಕಾಸು ಕೂಡಾ ಸಾಕಷ್ಟು ಹರಿದು ಬರುವುದು.

ಕನ್ಯಾ:-
ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು. ನಿಮ್ಮ ಮನೆಯಲ್ಲಿಯೇ ಸಾಕಷ್ಟು ವಿರೋಧಾಭಾಸಗಳಿದ್ದಲ್ಲಿ ಬೇರೆಯವರಿಗೆ ಹೇಗೆ ತಾನೇ ಮಾರ್ಗದರ್ಶನ ನೀಡುವಿರಿ. ಮೊದಲು ನಿಮ್ಮ ಮನಸ್ಸನ್ನು ಸಂತೈಸಿಕೊಳ್ಳಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ತುಲಾ:-
ಸಾಲ ಕೊಡುವವರು ಇರುವರೆಂದೆ ನೀವು ಪದೇ ಪದೇ ಸಾಲ ಕೇಳುವಿರಿ. ಇದರಿಂದ ನಿಮಗೆ ಅನನುಕೂಲವಾಗುತ್ತದೆ. ಮುಂದೆ ನಿಮಗೆ ನಿಜವಾದ ಕಷ್ಟ ಬಂದರೂ ಯಾರೂ ಸಹಾಯ ಮಾಡದೇ ಇರುವ ಪರಿಸ್ಥಿತಿ ಎದುರಾಗಬಹುದು.

ವೃಶ್ಚಿಕ:-
ಜನ್ಮಶನಿಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುವರು. ಗುರುವಿನ ಶುಭತೆಯಿಂದಾಗಿ ಉತ್ತಮ ವ್ಯೆದ್ಯರು ನಿಮಗೆ ದೊರೆತು ಕಾಯಿಲೆ ಬೇಗನೆ ಗುಣಮುಖವಾಗುವುದು.

ಧನಸ್ಸು:-
ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ನಾಣ್ಣುಡಿ. ಆದರೆ ನೀವು ಮಿತಿಮೀರಿ ಹಣವನ್ನು ಖರ್ಚು ಮಾಡುವುದರಿಂದ ಈ ದಿನ ಹಣದ ವಿಷಯವಾಗಿ ಮನೆಯಲ್ಲಿ ವಾದ-ವಿವಾದಗಳು ಏರ್ಪಡುವ ಸಂಭವವಿರುತ್ತದೆ.

ಮಕರ:-
ಆರೋಗ್ಯ ತಪಾಸಣೆಗೆ ಹಣದ ಅವಶ್ಯಕತೆ ಇದ್ದು ಇಂದು ನಿಮ್ಮ ಬ್ಯಾಂಕಿನಿಂದ ಹಣ ಡ್ರಾ ಮಾಡುವಿರಿ. ಸಹೋದರ ಸಂಬಂಧಿಯೊಡನೆ ಉತ್ತಮ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಳ್ಳಿರಿ.

ಕುಂಭ:-
ಇಲ್ಲಿಯವರೆಗೂ ಮಾಡಿದ ಕಾರ್ಯ ಫಲ ಕೊಟ್ಟೆ ಕೊಡುವುದು. ಹಾಗಂತ ಮುಂದಿನ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದರ್ಥವಲ್ಲ. ಈಗ ಮಾಡಿದ ಕಾರ್ಯದಿಂದಾಗಿ ಮುಂದಿನ ಕಾರ್ಯಗಳಿಗೆ ಬಲ ಬರುವುದು. ಹಿರಿಯರ ಸಲಹೆಯಂತೆ ನಡೆಯಿರಿ.

ಮೀನ:-
ಜನರು ನಿಮ್ಮನ್ನು ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸುವರು. ಆದರೆ ಯಾವ ಹುತ್ತದಲ್ಲಿ ಯಾವ ಹಾವು ಎಂಬುದು ತಿಳಿಯಲಾಗದು. ಅಂತೆಯೇ ಜನರು ಯಾವ ಕಾರಣ ಹೊಗಳುತ್ತಿದ್ದಾರೆ ಎಂದು ತಿಳಿಯುವುದು ಸಹ ಈ ದಿನ ಕಷ್ಟವಾಗುವುದು.