ನಿತ್ಯ ಭವಿಷ್ಯ ಆಗಸ್ಟ್ 21, 2017 (ಸೋಮವಾರ)

0
660

ಆಗಸ್ಟ್ 21, 2017 (ಸೋಮವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,
ಆಶ್ಲೇಷ ನಕ್ಷತ್ರ,

ಮೇಷ

01-Mesha

ಉಷ್ಣ ಸಂಬಂಧದ ಕಾಯಿಲೆ ಅಥವಾ ಚರ್ಮವ್ಯಾಧಿಗಳು ಕಾಡುವ ಸಾಧ್ಯತೆ ಇದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ತಂಪಾದ ಆಹಾರ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು. ಅನಾವಶ್ಯಕ ಚಿಂತನೆ ಮಾಡದಿರಿ. ಎಲ್ಲವೂ ಒಳಿತಾಗುವುದು.

ವೃಷಭ

02-Vrishabha

ನಿಮ್ಮ ಮಕ್ಕಳನ್ನು ಜೋಪಾನ ಮಾಡುವಷ್ಟೇ ನಿಮ್ಮ ಹೆತ್ತ ತಂದೆ-ತಾಯಿ ಅಥವಾ ಅತ್ತೆ-ಮಾವಂದಿರ ಆರೈಕೆ ಮಾಡುವುದು ಒಳ್ಳೆಯದು. ಇದರಿಂದ ನಿಮಗೆ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೆ ಹಿರಿಯರ ತುಂಬು ಆಶೀರ್ವಾದ ದೊರೆಯುವುದು.

ಮಿಥುನ

03-Mithuna

ಅತಿ ಚಾಣಾಕ್ಷ ಬುದ್ಧಿವಂತರಾದ ನಿಮ್ಮನ್ನು ಇತರರು ಗುರುತಿಸಿ ಗೌರವಿಸುವ ಕಾಲಘಟ್ಟ ಇಂದು ಎದುರಾಗಲಿದೆ. ಇದರಿಂದ ನಿಮಗೂ ಮತ್ತು ನಿಮ್ಮನ್ನು ಅರಿತ ಸ್ನೇಹಿತರಿಗೂ ಸಂತೋಷ ತರುವುದು. ವಿತಂಡವಾದದಿಂದ ಬೇರೆಯವರಿಗೆ ಬೇಸರ ಮಾಡದಿರಿ.

ಕಟಕ

04-Kataka

ಮನೆಗೆ ಮಾರಿ ಊರಿಗೆ ಉಪಕಾರಿ ಎಂದು ಕರೆಸಿಕೊಳ್ಳುವ ನೀವು ಇಂದು ನಿಮ್ಮ ಕುಟುಂಬದವರ ಯೋಗಕ್ಷೇಮದ ಕಡೆ ಗಮನ ಕೊಡುವುದು ಒಳ್ಳೆಯದು. ಇದರಿಂದ ನೀವು ಹೆಚ್ಚು ಜಯಶೀಲರಾಗುತ್ತೀರಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ಸಿಂಹ

05-Simha

ಈ ದಿನ ನಿಮ್ಮದೇ ಕಾಲ. ನೀವಾಡುವ ಒಂದೊಂದು ಮಾತು ವೇದದಂತೆ ಎಂಬಂತೆ ಸಮಾಜವು ನಿಮ್ಮನ್ನು ಹೆಚ್ಚಾಗಿ ಗೌರವಿಸುವುದು. ಇದರಿಂದ ಅಹಂಕಾರಕ್ಕೆ ಒಳಗಾಗದೆ ಭತ್ತದ ತೆನೆಯಂತೆ ಬಾಗಿ ಸೌಜನ್ಯಶೀಲರಾಗಿರಿ.

ಕನ್ಯಾ

06-Kanya

ದಿನೇ ದಿನೇ ಪ್ರವೃದ್ಧಮಾನಕ್ಕೆ ಬರುತ್ತಿರುವ ನಿಮ್ಮನ್ನು ಕಂಡರೆ ಇತರೆಯವರಿಗೆ ಅಸೂಯೆ ಮೂಡುವುದು. ಮತ್ತು ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಎಸಗುವ ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದು ಮಾಡಿ ನಿಮಗೆ ಅವಮಾನ ಮಾಡುವ ಹವಣಿಕೆಯಲ್ಲಿರುವರು.

ತುಲಾ

07-Tula

ಈ ದಿನ ಹೊಸ ಕೆಲಸವೊಂದು ನಿಮಗೆ ಕೂಡಿಬರುವುದು. ಅದರಿಂದ ಹೆಚ್ಚಿನ ಲಾಭಾಂಶವು ಬರುವುದಿದೆ. ಬಂದ ಹಣದಲ್ಲಿ ಉಳಿತಾಯದ ಕಡೆಗೂ ಗಮನ ಹರಿಸುವುದು ಒಳ್ಳೆಯದು. ಮಕ್ಕಳ ಆರೋಗ್ಯದ ಕಡೆ ಗಮನ ನೀಡಿರಿ.

ವೃಶ್ಚಿಕ

08-Vrishika

ಏನೇ ಕಷ್ಟಬಂದರೂ ಅದನ್ನು ನಗು ನಗುತ್ತಾ ಸ್ವೀಕರಿಸುವ ನಿಮ್ಮ ಕೌಶಲ್ಯಕ್ಕೆ ಎಲ್ಲರೂ ಬೆರಗಾಗುವರು. ಅತ್ಯಂತ ಸ್ವಾಭಿಮಾನಿಯಾದ ನೀವು ಇನ್ನೊಬ್ಬರ ಮುಂದೆ ದೈನ್ಯರಾಗಿ ಬೇಡಿಕೊಳ್ಳುವುದಿಲ್ಲ. ಇದೇ ನಿಮ್ಮನ್ನು ರಕ್ಷಿಸುವುದು.

ಧನು

09-Dhanussu

ಈ ಹಿಂದೆ ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಯು ನಿಮ್ಮ ಬಳಿ ಬಂದು ಗೌರವ ಸೂಚಿಸುವರು. ಇದರಿಂದ ನಿಮಗೆ ಹೆಮ್ಮೆ ಎನಿಸುವುದು. ಯಾವತ್ತು ಪ್ರಾಮಾಣಿಕತೆಗೆ ಬೆಲೆ ಇದ್ದೆ ಇರುತ್ತದೆ ಎಂಬುದು ಮತ್ತೊಮ್ಮೆ ಖಾತ್ರಿ ಆಗುತ್ತಿದೆ.

ಮಕರ

10-Makara

ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಪ್ರಸ್ತಾಪ ನಡೆಯುವುದು. ನಿಮ್ಮ ಮಕ್ಕಳಿಗೆ ಉತ್ತಮ ಸಂಬಂಧ ಬರುವುದು. ಮತ್ತು ಮದುವೆ ಮಾತುಕತೆಯ ಹಂತದವರೆಗೂ ಹೋಗುವುದರಿಂದ ಮನೆಯಲ್ಲಿ ಸಂತಸ, ಸಂಭ್ರಮವಿರುತ್ತದೆ.

ಕುಂಭ

11-Kumbha

ಸದಾ ಅಭ್ಯಾಸದಲ್ಲಿಯೆ ಆಸಕ್ತರಾದ ನಿಮಗೆ ಹೊರ ಜಗತ್ತಿನಲ್ಲಿ ಏನು ನಡೆಯುತ್ತದೆ ಎಂಬ ಪರಿವೇ ಇಲ್ಲ. ನಿಮ್ಮದೇ ಬೇರೆ ಲೋಕದಲ್ಲಿರುತ್ತೀರಿ. ಈ ಏಕಾಗ್ರತೆಯೇ ನಿಮ್ನನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು.

ಮೀನ

12-Meena

ಹಿಂದಿದ್ದ ಕಷ್ಟಗಳು ಕಡಿಮೆಯಾಗಿ ಜೀವನದಲ್ಲಿ ನವ ಉಲ್ಲಾಸ ಮನೆ ಮಾಡಿದೆ. ಬಂಧುಗಳು-ಹಿತೈಷಿಗಳು ನಿಮ್ಮ ಯೋಗಕ್ಷೇಮವನ್ನು ವಿಚಾರಿಸುವರು. ಇದರಿಂದ ನಿಮ್ಮ ಹೃದಯ ತುಂಬಿ ಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.