ನಿತ್ಯ ಭವಿಷ್ಯ: ಡಿಸೆಂಬರ್ 11, 2017

0
1116
ದಿನ ಭವಿಷ್ಯ

ಮೇಷ:
ಯಾವುದೇ ಕೆಲಸವನ್ನು ಯೋಚಿಸದೆ ಕೈಗೊಳ್ಳದಿರಿ. ಶ್ರಮಪಟ್ಟರೆ ಮಾತ್ರ ಶುಭಫಲವಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಆರೋಗ್ಯದ ಸಲುವಾಗಿ ಕಾಲಕಾಲಕ್ಕೆ ಸೂಕ್ತ ಔಷಧ ಸೇವನೆ ಮಾಡಿರಿ.

ವೃಷಭ:
ಸಂಬಂಧಿಕರ ಆಗಮನದಿಂದ ಮನಃಶಾಂತಿ ಲಭಿಸುವುದು. ದೂರದ ಊರಿನಿಂದ ಬರುವ ಶುಭ ಸುದ್ದಿಯು ನಿಮ್ನನ್ನು ಹೆಚ್ಚು ಹರ್ಷಯುಕ್ತರನ್ನಾಗಿ ಮಾಡುವುದು. ಬಾಕಿ ಕೆಲಸ ಕಾರ್ಯಗಳು ಈದಿನ ಪೂರ್ತಿ ಆಗುವುದು.

ಮಿಥುನ:
ಹಿರಿಯರ ಮಾತನ್ನು ತಿರಸ್ಕರಿಸುವಿರಿ. ಅವರ ಅಪೇಕ್ಷೆಯನ್ನು ಪೂರ್ಣ ಮಾಡುವುದು ನಿಮ್ಮ ಶ್ರೇಯೋಭಿವದ್ಧಿಗೆ ಒಳಿತಾಗುವುದು. ಇದರಿಂದ ತಡೆಹಿಡಿಯಲ್ಪಟ್ಟ ನಿಮ್ಮ ಕಾರ್ಯಗಳು ಸುಲಲಿತವಾಗುವುದು. ಹಣಕಾಸಿನ ತೊಂದರೆ ಕಡಿಮೆ.

ಕಟಕ:
ಸರ್ಕಾರಿ ಸಂಬಂಧಿತ ಕಾರ್ಯಗಳು ಇಂದು ಸುಗಮವಾಗಿ ನಡೆಯುವುದು. ಜೀವನದಲ್ಲಿ ನೂತನ ಜನರ ಪರಿಚಯವಾಗುವುದು. ಜೀವನದಲ್ಲಿ ಮತ್ತಷ್ಠು ಯಶಸ್ಸು ದೊರೆಯುಲಿದೆ. ನೀವು ಯೋಜಿಸಿದ ಕಾರ್ಯಗಳಿಗೆ ಹಣಕಾಸು ಒದಗಿ ಬರುವುದು.

ಸಿಂಹ:
ಹೊಸ ಕೆಲಸಗಳನ್ನು ಮಾಡುವಾಗ ಆತುರ ಬೇಡ. ಹೊಸ ಸ್ನೇಹಿತರ ಪರಿಚಯದಿಂದ ಸಂತೋಷ ಸಿಗಲಿದೆ. ಮನೆಯಲ್ಲಿ ಕೌಟುಂಬಿಕ ಜೀವನದ ಮಧುರ ಅನುಭವವನ್ನು ಪಡೆಯುವಿರಿ. ನಿಮ್ಮ ಕೆಲಸಕ್ಕೆ ತಕ್ಕಷ್ಠು ಹಣ ದೊರೆಯುವುದು.

ಕನ್ಯಾ:
ಯಾವುದೇ ಋಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದೇ ಒಳ್ಳೆಯದು. ಮನಸ್ಸಿನ ಚಂಚಲತೆ ನಿವಾರಣೆಗಾಗಿ ಶಿವಪಂಚಾಕ್ಷರಿ ಮಂತ್ರ ಮತ್ತು ದುರ್ಗಾಜಪವನ್ನು ಮಾಡಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ತುಲಾ:
ಮನೆಯ ಶುಭಕಾರ್ಯಗಳಿಗೆ ಇಂದು ಉತ್ತಮ ದಿನವಾಗಿದೆ. ಇರುವ ಸ್ಥಳದಲ್ಲಿ ನೆಮ್ಮದಿ ದೊರೆಯುವುದು. ಮಕ್ಕಳ ಆಟ-ಪಾಠಗಳಿಂದ ಮನಸ್ಸು ಪ್ರಫುಲ್ಲತೆಯನ್ನು ಅನುಭವಿಸುವುದು. ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದ ಇರುವುದು ಒಳ್ಳೆಯದು.

ವೃಶ್ಚಿಕ:
ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಮನೆಯ ಹಿರಿಯರೊಂದಿಗೆ ಮತ್ತು ಮನೆಯ ಸದಸ್ಯರೊಡನೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳದಿರುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರ. ಭಿಕ್ಷುಕರಿಗೆ ಚಿತ್ರಾನ್ನ ನೀಡಿರಿ.

ಧನಸ್ಸು:
ಗುರುಕಪೆ ಇದೆ ಹಾಗೂ ಇಂದು ಹೆಚ್ಚು ಹಣವನ್ನು ವ್ಯಯಮಾಡದಿರುವುದೇ ಒಳ್ಳೆಯದು. ಮೂಲ ಬಂಡವಾಳವನ್ನೆ ಕರಗಿಸಿದರೆ ಮುಂದೆ ಹಣವನ್ನು ಕೂಡಿಡುವುದು ಕಷ್ಠವಾಗುವುದು. ಖರ್ಚು-ವೆಚ್ಚದ ಕಡೆ ಗಮನ ಹರಿಸುವುದು ಒಳ್ಳೆಯದು.

ಮಕರ:
ಸೋಮಾರಿತನ ಮೈಗೂಡಿಸಿಕೊಳ್ಳದೇ ಜಾಗತರಾಗಿರಿ. ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ. ಶ್ರಮಪಟ್ಟರೆ ಮಾತ್ರ ಅನುಕೂಲವಾಗುವುದು. ಸಮಾಜದಲ್ಲಿ ಮನ್ನಣೆ ದೊರೆಯುವುದು.

ಕುಂಭ:
ಹಳೆಯ ಸ್ನೇಹಿತರು ಭೇಟಿ ಆಗಿ ಹಳೆಯ ನೆನಪುಗಳು ನಿಮ್ಮ ಮನಸ್ಸಿನ ಆಳದಿಂದ ಪುಟಿದೇಳುವುದು. ಈದಿನ ಮಧುರ ಕ್ಷಣಗಳನ್ನು ಕಳೆಯುವಿರಿ. ವತ್ರಿರಂಗದಲ್ಲಿ ಉತ್ತಮ ಹೆಸರನ್ನು ಉಳಿಸಿಕೊಳ್ಳುವಿರಿ.

ಮೀನ:
ಹಳೆಯ ನೆನಪನ್ನು ಮಾಡಿಕೊಂಡು ಮರುಗದೆ ಭವಿಷ್ಯದತ್ತ ಗಮನ ಹರಿಸಿರಿ. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಸ್ನೇಹಿತರೊಂದಿಗೆ ಬೆರೆತು ಸಂತೋಷದಿಂದಿರಿ. ಕಾಲವು ಎಲ್ಲದಕ್ಕೂ ಉತ್ತರ ನೀಡುವುದು.