ನಿತ್ಯ ಭವಿಷ್ಯ: ಡಿಸೆಂಬರ್ 27, 2017

0
1231
ದಿನ ಭವಿಷ್ಯ

ಮೇಷ:


ಸದ್ಯದ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈಗ ತೊಡಗಿಸಿಕೊಂಡಿರುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸಿ.

ವೃಷಭ:


ಯಾವುದೇ ಗೌಪ್ಯತೆಯನ್ನು ಕಾಯ್ದುಕೊಳ್ಳಲು ನಿಮ್ಮಿಂದಾಗದು. ಇದರಿಂದಾಗಿಯೇ ವಿನಾಕಾರಣ ಆರೋಪ ಎದುರಿಸಬೇಕಾಗುವುದು.

ಮಿಥುನ:


ಉಡಾಫೆತನ ಬಿಟ್ಟು ಭವಿಷ್ಯದ ಬಗ್ಗೆ ಚಿಂತಿಸಲೇಬೇಕು. ಕೌಟುಂಬಿಕವಾಗಿ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಅಗತ್ಯವಿದೆ.

ಕಟಕ:


ಐಷಾರಾಮಿ ವಸ್ತುಗಳನ್ನು ಖರೀದಿಸಬೇಕೆನ್ನುವ ನಿಮ್ಮ ಬಯಕೆ ಈಡೇರುವ ಸಂದರ್ಭವಿದ್ದು, ಬೆಲೆಬಾಳುವ ವಸ್ತುಗಳು ಮನೆಯನ್ನು ಅಲಂಕರಿಸುವವು.

ಸಿಂಹ:


ನಿಮ್ಮ ಸಾಧನೆ ಬಗ್ಗೆ ಸಹೋದ್ಯೋಗಿಗಳ ಬಳಿ ಹೆಚ್ಚು ಹೇಳಿಕೊಳ್ಳಬೇಡಿ. ಈಗಾಗಲೇ ನಿಮ್ಮ ಅಭಿವೃದ್ಧಿ ಕುರಿತು ಕೆಲವರಿಗೆ ಮತ್ಸರ ಉಂಟು.

ಕನ್ಯಾ:


ನಿಮ್ಮ ಸೃಜನಶೀಲ ವಿಚಾರಗಳು ಬೇರೆಯವರಿಗೆ ಅರ್ಥವಾಗುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆ. ಆಕಸ್ಮಿಕವಾಗಿ ಭೇಟಿಯಾಗುವ ವ್ಯಕ್ತಿಯಿಂದ ನಿಮಗೆ ಯಶಸ್ಸು.

ತುಲಾ:


ಮೇಲಾಧಿಕಾರಿಗಳು ನಿಮ್ಮ ಕಾರ್ಯ ಕುಶಲತೆ ಗುರುತಿಸಿ ಬಡ್ತಿ ನೀಡುವರು. ಕಾರ್ಯದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲು ವಾಹನ ಉಡುಗೊರೆ ಪಡೆಯುವಿರಿ.

ವೃಶ್ಚಿಕ:


ಮೇಲಾಧಿಕಾರಿಗಳು ಬಹುದಿನದ ನಿಮ್ಮ ಬೇಡಿಕೆಯನ್ನು ಪೂರೈಸುವರು. ಇದರಿಂದ ನಿಮ್ಮ ಕಾರ್ಯಯೋಜನೆಗೆ ಆನೆ ಬಲ ಬಂದಂತಾಗುವುದು.

ಧನಸ್ಸು:


ಹಣಕಾಸಿನ ವಿಚಾರದಲ್ಲಿ ಇಂದು ವೃತ್ತಿಪರರ ಮಾರ್ಗದರ್ಶನ ಪಡೆಯುವುದು ಒಳಿತು. ಇದರಿಂದ ಸಾಕಷ್ಟು ಹಣ ಉಳಿತಾಯವಾಗುವುದು.

ಮಕರ:


ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

ಕುಂಭ:


ಅಲ್ಪ ಪ್ರವಾಸದಿಂದ ಮಾನಸಿಕ ನೆಮ್ಮದಿ ದೊರೆಯುವುದು. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವ ಸಾಧ್ಯತೆಯಿದೆ. ಆರೋಗ್ಯ ಉತ್ತಮ.

ಮೀನ:


ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಬೇಕಾಗಿದೆ. ಆರ್ಥಿಕ ಸದೃಢತೆ ಕಂಡುಬರುವುದು. ಗುರುವಿನ ಆಶೀರ್ವಾದ ಪಡೆಯುವಿರಿ.