ನಿತ್ಯ ಭವಿಷ್ಯ: ಡಿಸೆಂಬರ್ 31, 2017

0
1192

ಮೇಷ:

ಕುಟುಂಬದಲ್ಲಿ ಗೃಹಿಣಿಯ ಕಿರಿಕಿರಿ, ಮನಸ್ಸಿಗೆ ಅಸಮಾಧಾನ. ಸಾಲದ ಹೊರೆಯಿಂದ ಪರಿಹಾರ. ಒಳಜಗಳದಿಂದ ಬಿರುಕು ಉಲ್ಬಣ ಸಂಭವ.

ವೃಷಭ:

ವೃತ್ತಿರಂಗದಲ್ಲಿನ ಉದಾಸೀನತೆಯಿಂದ ಉತ್ಸಾಹಕ್ಕೆ ಕುಂದು. ವ್ಯರ್ಥಕಾಲಹರಣದಿಂದ ವಿದ್ಯಾರ್ಥಿಗಳಿಗೆ ಹಿನ್ನಡೆ, ಹಿರಿಯರಿಂದ ಬೇಸರ.

ಮಿಥುನ:

ಪ್ರತಿಕೂಲ ವಾತಾವರಣದಿಂದ ಸ್ವಲ್ಪ ತೊಳಲಾಟ. ಸ್ವಾಭಿಮಾನದ ಪ್ರಶ್ನೆಯಿಂದ ಆರ್ಥಿಕ ವಿಚಾರದಲ್ಲಿ ಹಿನ್ನಡೆ. ಮನಸ್ಸಿಗೆ ಕಿರಿಕಿರಿ.

ಕಟಕ:

ವ್ಯಾಪಾರಿಗಳಿಗೆ ವ್ಯವಹಾರಗಳಲ್ಲಿ ಹಣ ಹೂಡುವಿಕೆಯಿಂದ ಲಾಭ. ಸಾಮಾಜಿಕ ಚಟುವಟಿಕೆಗಳಿಂದ ಮನಸ್ಸಿಗೆ ಹೆಚ್ಚು ಸಂತಸ.

ಸಿಂಹ:

ಆರ್ಥಿಕ ಸಂಸ್ಥೆಗಳಿಂದ ಸಹಾಯ ಸಿಗದೇ ವಿತ್ತಚಿಂತೆ ಹೆಚ್ಚಳ ಸಂಭವ. ಪತ್ನಿಯ ಖರ್ಚಿನಿಂದ ಮನಸ್ಸಿನ ಒಳ ಒಳಗೇ ತೊಳಲಾಟ.

ಕನ್ಯಾ:

ಚಿಂತಿತ ಕೆಲಸ ಕಾರ್ಯಗಳಿಗೆ ಸಕಾಲ ಒತ್ತಡಗಳಿದ್ದರೂ ಆತ್ಮವಿಶ್ವಾಸ ವೃದ್ಧಿ, ಪ್ರಯತ್ನ ಬಲದಿಂದ ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಜಯ.

ತುಲಾ:

ಹಲವಾರು ಚಿಂತೆಗಳು ನಿಮ್ಮನ್ನು ಆವರಿಸುವಿಕೆಯಿಂದ ಅಧೈರ್ಯ ಹೆಚ್ಚಳ ಸಂಭವ. ಹಿತ ಮಿತ್ರರಿಂದ ದ್ರವ್ಯಾನುಕೂಲ. ಕಷ್ಟ ಪರಿಹಾರ.

ವೃಶ್ಚಿಕ:

ಆರೋಗ್ಯದ ಉದಾಸೀನತೆಯಿಂದ ಕಷ್ಟ ಹೆಚ್ಚಳ. ವಿದ್ಯಾರ್ಥಿಗಳಿಗೆ ಸಾರ್ಥಕ ಜಯ. ದೂರ ಪ್ರಯಾಣದಿಂದ ಆಯಾಸ ಕಿರಿಕಿರಿ.

ಧನಸ್ಸು:

ವ್ಯಾಪಾರಿಗಳಿಗೆ ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ಆದಾಯ. ರಾಜಕಾರಣಿಗಳಿಗೆ ಸೂಕ್ತ ಸ್ಥಾನಮಾನದಿಂದ ಸಂತಸ.

ಮಕರ:

ಆಕಸ್ಮಿಕ ಪ್ರಯಾಣ ದೇಹಾಯಾಸಕ್ಕೆ ಕಾರಣ ವಾಗಲಿದ್ದು ವೈದ್ಯಕೀಯ ಖರ್ಚು ಹೆಚ್ಚಳ. ಸಾಹಿತ್ಯ, ರಂಗಪಟುಗಳಿಗೆ ಗೌರವ ಸ್ಥಾನಮಾನ.

ಕುಂಭ:

ಕೃಷಿಯಲ್ಲಿ ದುಡಿಯುವವರಿಗೆ ಮಿಶ್ರಫಲ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಪಾರ ವೆಚ್ಚ, ಪ್ರಯಣದಿಂದ ಕಸಿವಿಸಿ.

ಮೀನ:


ವ್ಯಾಪಾರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಲು ತಂದೆ-ತಾಯಿಯ ಸಹಾಯ. ವಾಹನ ಸಮಸ್ಯೆಯಿಂದ ಕೊಂಚ ಕಿರಿಕಿರಿ.