ನಿತ್ಯ ಭವಿಷ್ಯ: ಜನವರಿ 1, 2018

0
1387
ದಿನ ಭವಿಷ್ಯ

ಮೇಷ:

ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎನ್ನುವಂತೆ ಈ ದಿನ ನಿಮ್ಮ ಆಶಾವಾದಿತ್ವಕ್ಕೆ ಬೆಲೆ ಬರುವುದು. ಕೆಲವು ಗ್ರಹಗಳ ಅವಕೃಪೆ ಇರುವುದರಿಂದ ಆಂಜನೇಯ ಸ್ತೋತ್ರ ಪಠಿಸಿರಿ. ಹಣವನ್ನು ಖರ್ಚು ಮಾಡುವ ಸಂದರ್ಭದಲ್ಲಿ ಎರಡು ಬಾರಿ ಚಿಂತಿಸಿರಿ.

ವೃಷಭ:

ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ರಾಜಕೀಯ ನಾಯಕರುಗಳಿಗೆ ಉತ್ತಮ ದಿನವಿದು. ವ್ಯಾಪಾರಸ್ಥರಿಗೆ ಅಧಿಕ ಲಾಭಾಂಶ ಕಂಡು ಬರುವುದು. ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿರಿ. ಶಿಸ್ತುಳ್ಳ ಮನುಜನಿಗೆ ಶಿವನು ತಲೆ ಬಾಗುವನು.

ಮಿಥುನ:

ಸಕಲ ಅನರ್ಥಗಳಿಗೆ ಕೋಪ ಮೊದಲ ಬೇರು. ಜೀವನದಲ್ಲಿ ಸಣ್ಣ ಪುಟ್ಟ ಘಟನೆಗಳು ನಮ್ಮ ಆತ್ಮೀಯರಿಂದ ಆದಾಗ ಬೇಸರ ಮೂಡುವುದು ಸಹಜ. ಅಂತೆಯೇ ಈ ದಿನ ನಿಮ್ಮ ಕೋಪ ತಾಪಗಳಿಂದ ದೂರ ಇರುವುದು ಒಳ್ಳೆಯದು.

ಕಟಕ:

ಆಸ್ತಿ ವ್ಯವಹಾರಗಳು ಚರ್ಚೆಗೆ ಬರುವುದು. ಉತ್ತಮ ಆರೋಗ್ಯ ಇರುವುದು. ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುವುದು. ಸಕಾಲದಲ್ಲಿ ಸ್ನೇಹಿತರ ನೆರವು ದೊರೆಯುವುದರಿಂದ ಉತ್ತಮ ಫಲಿತಾಂಶ ಕಾಣುವಿರಿ.

ಸಿಂಹ:

ಗುರಿ ಸಾಧಿಸುವಲ್ಲಿ ದೈವ ಕೃಪೆಯಿಂದ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಇಂದು ಸಹಾಯ ಮಾಡುವರು. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕನ್ಯಾ:

ಬುದ್ಧಿ ಚಾತುರ‍್ಯದಿಂದ ಹಮ್ಮಿಕೊಂಡ ಕೆಲಸಗಳು ಪ್ರಶಂಸೆಗೆ ಪಾತ್ರವಾಗುವುದು. ಹಿತಚಿಂತಕರೊಡನೆ ಸಮಾಲೋಚಿಸುವಿರಿ. ಆರ್ಥಿಕ ಬಿಕ್ಕಟ್ಟು ನಿಮ್ಮನ್ನು ಕಾಡುವುದು. ಹಿರಿಯರ ಮಧ್ಯಸ್ಥಿಕೆಯಿಂದ ಕಚೇರಿ ಬಿಕ್ಕಟ್ಟು ಶಮನವಾಗುವುದು.

ತುಲಾ:

ಜಡ್ಡುಗಟ್ಟಿದ ಕಾರ್ಯಕಾರಿ ಮಂಡಳಿಗೆ ಬಿಸಿ ಮುಟ್ಟಿಸುವಿರಿ. ಸಹೋದ್ಯೋಗಿಗಳು ನಿಮಗೆ ಬೆಂಬಲ ನೀಡುವರು. ನ್ಯಾಯಯುತವಾದ ನಿಮ್ಮ ಬೇಡಿಕೆಗಳು ಪೂರ್ಣಗೊಳ್ಳುವುದು. ಆರ್ಥಿಕ ಸ್ಥಿತಿ ಸುಧಾರಣೆ ಆಗುವುದು.

ವೃಶ್ಚಿಕ:

ಬ್ಯಾಂಕಿಂಗ್‌ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಹಣವನ್ನು ಪಡೆಯುವಾಗ ಪರೀಕ್ಷಿಸಿ ಪಡೆಯಿರಿ. ಇಲ್ಲವೇ ತೊಂದರೆಗೆ ಸಿಲುಕಿಕೊಳ್ಳುವಿರಿ. ಸ್ವಂತ ವ್ಯವಹಾರ ಮಾಡುವವರಿಗೆ ಸ್ವಲ್ಪ ಕಿರಿಕಿರಿ ಇದೆ. ಆಂಜನೇಯ ಸ್ತೋತ್ರವನ್ನು ಪಠಿಸಿರಿ.

ಧನಸ್ಸು:

ಇಂದು ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದೆ. ಬಂಧು ಬಾಂಧವರ ಸಹಕಾರ ದೊರೆಯುವುದು. ಪರಸ್ಪರ ಒಪ್ಪಿಗೆಯಿಂದ ವಿವಾಹ ನಿಶ್ಚಯ ಕಾರ್ಯ ಮಾಡುವಿರಿ.

ಮಕರ:

ನೌಕರಿಯಲ್ಲಿನ ಸಮಸ್ಯೆಗಳು ಬಗೆಹರಿಯುವುದು. ಹಳೆಯ ಸ್ನೇಹಿತರು ಇಂದು ನಿಮ್ಮೊಡನೆ ಕಾಲ ಕಳೆಯುವರು. ಸಂಗಾತಿಯ ಸಕಾಲಿಕ ಎಚ್ಚರಿಕೆ ಮಾತುಗಳನ್ನು ಆಲಿಸುವುದರಿಂದ ಒಳಿತಾಗುವುದು.

ಕುಂಭ:

ಕೌಟುಂಬಿಕ ಜೀವನದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪತಿ-ಪತ್ನಿಯರಲ್ಲಿ ವಿರಸ ತೋರುವುದು. ಮನಸ್ಸಿನ ಸೌಖ್ಯಕ್ಕೆ ಧಕ್ಕೆ ಬರಲಿದೆ. ವಾದ-ವಿವಾದಗಳಿಂದ ದೂರ ಉಳಿಯುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮ ಇರುವುದು.

ಮೀನ:


ಒಳ್ಳೆಯ ಕೆಲಸ ಮಾಡುವುದರಿಂದ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯುವಿರಿ. ಊಟ-ಉಪಚಾರಗಳಲ್ಲಿ ಕ್ಷ ಮತೆಯನ್ನು ಅನುಸರಿಸಿಕೊಂಡರೆ ಒಳ್ಳೆಯದು. ಲೇವಾದೇವಿ ವ್ಯವಹಾರದಲ್ಲಿ ಅಧಿಕ ಲಾಭವಿದೆ.