ನಿತ್ಯ ಭವಿಷ್ಯ: ಜನವರಿ 10, 2018

0
1087
ದಿನ ಭವಿಷ್ಯ

ಮೇಷ:

ಹೊಟ್ಟೆಯಲ್ಲಿನ ಕಿಚ್ಚು ರಟ್ಟೆಯಲ್ಲಿ ಇಲ್ಲ ಎನ್ನುವಂತೆ ಕೆಲವೊಮ್ಮೆ ಮೌನಕ್ಕೆ ಶರಣಾಗಬೇಕಾಗುವುದು. ಹಾಗಂತ ಇದು ವ್ಯಕ್ತಿಯ ದೌರ್ಬಲ್ಯವಲ್ಲ.

ವೃಷಭ:

ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆಹಾರದ ಬದಲಾವಣೆಯಿಂದ ವ್ಯತ್ಯಯವಾಗುವ ಸಂಭವ. ಕೌಟುಂಬಿಕ ಜೀವನದಲ್ಲಿ ಸಾಮರಸ್ಯ ಇರುವುದು.

ಮಿಥುನ:

ಸದ್ಯದ ಮಟ್ಟಿಗೆ ಅತಿಯಾದ ಆಲೋಚನೆ, ಮಹತ್ವಾಕಾಂಕ್ಷೆ ಒಳ್ಳೆಯದಲ್ಲ. ಯುಗಾದಿ ನಂತರ ಉತ್ತಮ ದಿನಗಳನ್ನು ಕಾಣುವಿರಿ.

ಕಟಕ:

ಉದ್ಯೋಗದ ಸ್ಥಳದಲ್ಲಿ ನೆಮ್ಮದಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಮ್ಮಿಕೊಂಡ ಕಾರ್ಯಗಳು ಸರಾಗವಾಗಿ ಆಗುವವು. ಆರ್ಥಿಕ ಸ್ಥಿತಿ ಉತ್ತಮ.

ಸಿಂಹ:

ನಿಮ್ಮ ವಿಚಾರಧಾರೆ ಸರಿಯಾಗಿಯೇ ಇದೆ. ಆದರೆ ಅದನ್ನು ಸಮರ್ಥವಾಗಿ ಮಂಡಿಸುವಲ್ಲಿ ವಿಫಲರಾಗುವಿರಿ. ಹಾಗಾಗಿ ಸಾಕಷ್ಟು ತಯಾರಿ ಅಗತ್ಯ.

ಕನ್ಯಾ:

ನಿಮ್ಮ ಸಾಮರ್ಥ್ಯದ ದುರ್ಬಳಕೆಯಾಗಬಹುದು. ಆದ್ದರಿಂದ ಯಾವುದೇ ಕಾರ್ಯಭಾರ ಒಪ್ಪಿಕೊಳ್ಳುವ ಮುನ್ನ ಎರಡು ಬಾರಿ ಚಿಂತಿಸಿ. ಆರ್ಥಿಕ ಸದೃಢತೆ.

ತುಲಾ:

ಉದ್ಯೋಗದ ಸ್ಥಳದಲ್ಲಿ ನೆಮ್ಮದಿ. ವೃತ್ತಿಗೆ ಸಂಬಂಧಿಸಿದಂತೆ ದೂರದೇಶದಿಂದ ಬರುವ ವಾರ್ತೆ ಹೆಚ್ಚಿನ ಸಂತೋಷವನ್ನುಂಟು ಮಾಡುವುದು.

ವೃಶ್ಚಿಕ:

ಕೆಲವು ವಿಚಾರಗಳಲ್ಲಿ ಅತಿಯಾದ ಆತ್ಮವಿಶ್ವಾಸ ಸಲ್ಲದು. ನಿಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪಬೇಕೆಂಬ ಹಠಬೇಡ. ಬೇರೆಯವರ ವಿಚಾರಧಾರೆಗಳನ್ನು ಆಲಿಸಿ.

ಧನಸ್ಸು:

ಬಾಯಿತಪ್ಪಿ ಆಡುವ ಮಾತಿನಿಂದ ಜಗಳವಾಗುವ ಸಂಭವವಿದೆ. ಮಧ್ಯಸ್ಥಿಕೆ ವ್ಯವಹಾರದಿಂದ ದೂರ ಇರುವುದು ಒಳಿತು.

ಮಕರ:

ನಿರಾಶೆಯ ದಿನಗಳು ಇನ್ನಿಲ್ಲ. ಬಹಳ ದಿನಗಳ ನಿರೀಕ್ಷೆ ಇಂದು ಕೈಗೂಡುವ ಸಂಭವ ಅಥವಾ ನಿಮ್ಮ ನಿರೀಕ್ಷೆಗಳಿಗೆ ಸಕಾರಾತ್ಮಕ ಉತ್ತರ ದೊರೆಯುವುದು.

ಕುಂಭ:

ಪ್ರತಿಯೊಂದಕ್ಕೂ ಮಿತಿ ಇರುತ್ತದೆ. ಮಿತಿ ಮೀರಿದರೆ ಆಪತ್ತು ಎನ್ನುವ ವಿಚಾರ ನಿಮಗೆ ತಿಳಿಯದ್ದೇನೂ ಅಲ್ಲ. ಹಾಗಾಗಿ ನಿಮ್ಮ ಮಿತಿಯಲ್ಲಿ ವ್ಯವಹರಿಸಿ.

ಮೀನ:


ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ನೀರಿನಿಂದ ಆರೋಗ್ಯ ಹದಗೆಡುವ ಸಾಧ್ಯತೆ. ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.