ನಿತ್ಯ ಭವಿಷ್ಯ: ಜನವರಿ 12, 2018

0
1126
ದಿನ ಭವಿಷ್ಯ

ಮೇಷ:

ಆಕಸ್ಮಿಕ ಸಮಸ್ಯೆಗಳಿಗೆ ಸುಗಮ ಪರಿಹಾರ.ವಿವಾಹ ಸಂಬಂಧಿ ಮಾತುಕತೆ ಮುಂದೂಡಿಕೆಯಿಂದ ಬೇಸರ. ನೌಕರಿ ಬದಲಾವಣೆಗೆ ಭಯ.

ವೃಷಭ:

ಹೆಚ್ಚಿನ ಸಾಲ ಪ್ರಮಾಣದಿಂದ ಮನಸ್ಸಿಗೆ ಭಯ. ಅನಗತ್ಯ ವಸ್ತುಖರೀದಿಗೆ ವಿಪರೀತ ಖರ್ಚು. ಆಪ್ತರೇಷ್ಟರ ಸತ್ಕಾರದಿಂದ ಸಂತಸ.

ಮಿಥುನ:

ವೈಯಕ್ತಿಕ ವ್ಯವಹಾರಗಳಲ್ಲಿನ ಗಟ್ಟಿ ನಿರ್ಧಾರದಿಂದ ಮನಸ್ಸಿಗೆ ತೃಪ್ತಿ. ಆರೋಗ್ಯದಲ್ಲಿ ಏರು ಪೇರು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮಂದಗತಿ.

ಕಟಕ:

ಮನಸ್ಸಿನಲ್ಲಿ ಹುದುಗಿರುವ ವಿಚಾರ ಬಂಧುಗಳಲ್ಲಿ ಹಂಚಿಕೊಳ್ಳುವುದರಿಂದ ಮಾನಸಿಕಶಾಂತಿ. ಅಧ್ಯಯನದಲ್ಲಿನ ಪ್ರಯತ್ನಕ್ಕೆ ಜಯ.

ಸಿಂಹ:

ವಾಹನ ವಹಿವಾಟುದಾರರಿಗೆ ಅಧಿಕ ಪ್ರಸಂಗಿಗಳ ಅಬ್ಬರ. ಹಿರಿಯ ವ್ಯಕ್ತಿಯ ಬೆಂಬಲದಿಂದ ಸತ್ಕಾರ್ಯ ಗಳಿಗೆ ಚಾಲನೆ. ಸಂತಸ.

ಕನ್ಯಾ:

ವೈಯಕ್ತಿಕ ಸಮಸ್ಯೆಗಳ ಉಲ್ಬಣದಿಂದ ಮನಸ್ಸಿನಲ್ಲಿ ಉದ್ವೇಗ ಕೈಗೊಂಡ ಕಾರ್ಯಗಳಲ್ಲಿ ಹೆಚ್ಚು ಕಡಿಮೆ ಅನುಕೂಲ, ಕಚೇರಿ ಕೆಲಸದಲ್ಲಿ ಜಯ.

ತುಲಾ:

ಆರ್ಥಿಕ ಬವಣೆ ಇನ್ನಷ್ಟು ಹೆಚ್ಚಾಗುವ ಸಂಭದಿಂದ ಹೊಸಕಾರ್ಯಕ್ರಮಗಳಿಗೆ ವಿರಾಮ. ಅನಗತ್ಯಗೊಂದಲಗಳಿಂದ ಅಶಾಂತಿ.

ವೃಶ್ಚಿಕ:

ಆರ್ಥಿಕ ವಿಚಾರದಲ್ಲಿನ ಕೆಲ ಕಾರ್ಯಗಳಿಗೆ ಅಡೆ ತಡೆ. ಮುಂದೂಡಿಕೆ. ಬಂಧುವರ್ಗದವರ ತಾರತಮ್ಯ ಧೋರಣೆಯಿಂದ ಸ್ವಲ್ಪ ಬೇಸರ.

ಧನಸ್ಸು:

ಸಮಾಜಸೇವೆಯಲ್ಲಿ ಅಗ್ರಪಾತ್ರ ವಹಿಸುವುದರಿಂದ ಗಣ್ಯವ್ಯಕ್ತಿಗಳಿಂದ ಮೆಚ್ಚುಗೆ. ಆಪ್ತಮಿತ್ರರ ಸಹಕಾರದಿಂದ ಕಾರ್ಯ ಸುಗಮ.

ಮಕರ:

ಹಳೆಯ ವ್ಯವಹಾರಗಳಲ್ಲಿನ ನಿಮ್ಮ ಕಾರ್ಯ ವೈಖರಿ ಬಗ್ಗೆ ಅನುಮಾನ ಮೂಡುವುದರಿಂದ ಬೇಸರ. ಸಹೋದರರಿಂದ ದ್ರವ್ಯಾನುಕೂಲ ನೆಮ್ಮದಿ.

ಕುಂಭ:

ಸರಕಾರಿ ನೌಕರರಿಗೆ ಲಾಭದಾಯಕ ಆದಾಯ ವಿದ್ದರೂ ಮುನ್ನಡೆಗೆ ಆಗಾಗ ತೊಡಕು ಸಂಭವ. ರಾಜಕಾರಣಿಗೆ ಶತ್ರುಭೀತಿ.

ಮೀನ:


ಸೋದರರಿಬ್ಬರಿಗೆ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಸಂಭವ. ಉದ್ಯೋಗ, ಆರೋಗ್ಯ, ಆರ್ಥಿಕ ಸಮಾಧಾನ.