ನಿತ್ಯ ಭವಿಷ್ಯ: ಜನವರಿ 2, 2018

0
1123
ದಿನ ಭವಿಷ್ಯ

ಮೇಷ:

ಮಹಿಳೆಯರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಾಭ. ಅಧಿಕ ಪ್ರಯತ್ನದಿಂದ ವೈದ್ಯರಿಗೆ ಅರ್ಥ ಲಾಭ. ಸಂಶೋಧಕರಿಗೆ ಜಯ.

ವೃಷಭ:

ಭೂ ವ್ಯವಹಾರದಲ್ಲಿ ಸಣ್ಣ ವ್ಯಾಪಾರದಲ್ಲಿ ಕೊಂಚ ಹಿನ್ನಡೆ. ಆಕಸ್ಮಿಕ ಪ್ರಯಾಣದಿಂದ ತುರ್ತು ಖರ್ಚು. ಬೇಸರ.

ಮಿಥುನ:

ನಿರೀಕ್ಷಿತ ಕಾರ್ಯದಲ್ಲಿ ಜಯ ಲಭಿಸಿ ಆಪತ್ತು ನಿವಾರಣೆ. ಮಕ್ಕಳ ಅಧ್ಯಯನದಲ್ಲಿ ಪ್ರಗತಿ. ಸರಳ ಜೀವನ.

ಕಟಕ:

ಮಿತ್ರರ ಭೇಟಿಯಿಂದ ಮಡದಿ ಮಕ್ಕಳ ಬಯಕೆ ಈಡೇರಿಕೆ. ಉದ್ಯಮಿಗಳಿಗೆ ಯಂತ್ರ ಖರೀದಿಯಲ್ಲಿ ಉತ್ತಮ ಲಾಭ.

ಸಿಂಹ:

ಮನೆಯಲ್ಲಿ ಮಂಗಳ ಕಾರ್ಯಗಳಿಗಾಗಿ ಬಂಧುಗಳ ಆಗಮನ. ಸಂಗಾತಿಗೆ ಸಹಾಯ ಲಾಭ. ಇದ್ದ ಬಿದ್ದ ಚಿಂತೆ ನಿವಾರಣೆ.

ಕನ್ಯಾ:

ಲೇಖಕರು, ಕಲಾವಿದರಿಗೆ ಸಾಹಿತ್ಯ ಚಟುವಟಿಕೆಗಳಿಂದ ಉಲ್ಲಾಸ. ಪತ್ನಿ ಬೆಂಬಲದಿಂದ ಹೊಸ ಭರವಸೆ ಹರ್ಷ.

ತುಲಾ:

ಹಿಂದಿನ ಸಾಧನೆಯಿಂದ ಉತ್ತಮ ಫಲ ಪ್ರಾಪ್ತಿ. ಮಕ್ಕಳಿಗೆ ವಿದ್ಯೆಯಲ್ಲಿ ಕೊಂಚ ಹಿನ್ನಡೆ, ಬೇಸರ. ಆಪ್ತರಿಂದ ಸಾಂತ್ವನ.

ವೃಶ್ಚಿಕ:

ಶ್ರೀಮತಿಗೆ ಉದ್ಯೋಗದಲ್ಲಿ ಸುಧಾರಣೆ, ಅಧಿಕಾರಿಗಳಿಂದ ಪ್ರಶಂಸೆ. ಹೊಸ ಮನೆ ಖರೀದಿಗೆ ಯತ್ನ, ಉಲ್ಲಾಸ.

ಧನಸ್ಸು:

ರಾಜಕಾರಣಿಗಳು, ಸಮಾಜ ಸೇವಕರಿಗೆ ಉತ್ತಮ ಗೌರವ ಲಾಭ. ಕುಲದೇವರು, ಕ್ಷೇತ್ರದೇವರ ದರ್ಶನದಿಂದ ನೆಮ್ಮದಿ.

ಮಕರ:

ತೃಪ್ತಿಕರ ಆರೋಗ್ಯದಿಂದ ಉದ್ಯೋಗದಲ್ಲಿ ತೃಪ್ತಿಕರ ಬೆಳವಣಿಗೆ, ಹೊಸ ಆದಾಯಕ್ಕೆ ನೂತನ ತಂತ್ರ ಬಳಕೆ.

ಕುಂಭ:

ಉನ್ನತ ವ್ಯಾಸಂಗಿಗಳಿಗೆ ವಿದೇಶಾಗಮನ ಯೋಗ. ನ್ಯಾಯವಾದಿಗಳು, ತಾರ್ಕಿಕರುಗಳಿಗೆ ಪ್ರಗತಿ. ಗುರುದರ್ಶನದಿಂದ ಸಂತಸ.

ಮೀನ:


ವಿದೇಶಿ ಮಿತ್ರನ ಆಗಮನದಿಂದ ಆಕಸ್ಮಿಕ ಸುಖ ಭೋಜನ. ವ್ಯಾಪಾರಿಗಳು, ಉದ್ಯಮಿಗಳಿಗೆ ಅಧಿಕ ಶ್ರಮದಿಂದ ಲಾಭ.