ಮೇಷ:
ಅನುಕೂಲ ಸ್ಥಿತಿಯಿಂದ ಮುನ್ನಡೆಯ ಓಟ, ವಿವಿಧ ರೀತಿಯಲ್ಲಿ ಪರಿವರ್ತನೆ. ಲಾಭದಾಯಕ ಕಲೆಸಗಳಿಗೆ ಚಾಲನೆ, ಸಂತಸ.
ವೃಷಭ:
ದಾಯಾದಿಗಳ ಹುಳಿ ಹಿಂಡುವಿಕೆಯಿಂದ ಕೌಟುಂಬಿಕ ನೆಮ್ಮದಿಗೆ ಭಂಗ. ರಾಜಕೀಯ ವ್ಯಕ್ತಿಗಳಿಗೆ ಕೊಂಚ ಪ್ರಗತಿ. ಕ್ಷೇತ್ರದ ಅಭಿವೃದ್ಧಿ.
ಮಿಥುನ:
ಮಾನಸಿಕ ಚಂಚಲತೆ ದೇಹಾಯಾಸದಿಂದ ಬಳಲಿಕೆ, ನಿರುತ್ಸಾಹ. ಆರ್ಥಿಕ ಖರ್ಚು, ವಿದ್ಯಾರ್ಥಿಗಳಿಗೆ ಪ್ರಯತ್ನದಿಂದ ಬಲ.
ಕಟಕ:
ಸಾಹಿತಿ, ಕಲಾವಿದರಿಗೆ ಸೂಕ್ತ ಗೌರವ. ಹಾಗೆಯೇ ವಿರೋಧಿಗಳ ದಮನ. ಸಾಧಕರಿಗೆ ಅವಕಾಶಗಳ ಸದುಪಯೋಗ.
ಸಿಂಹ:
ಆರ್ಥಿಕ ದಃಸ್ಥಿತಿಯಿಂದಾಗಿ ಕೆಲಸ ಕಾರ್ಯಗಳಿಗೆ ವಿಳಂಬ. ನಿರುದ್ಯೋಗಿಗಳಿಗೆ ಶತ್ರುಪೀಡೆ, ಅಧಿಕಾರಿಗಳಿಗೆ ಕಿರಿಕಿರಿ.
ಕನ್ಯಾ:
ತಾತ್ಕಾಲಿಕ ವೃತ್ತಿಯವರಿಗೆ ಕೊಂಚ ಸಮಾಧಾನ. ಮಕ್ಕಳ ಶಿಕ್ಷಣದಲ್ಲಿ ಒಳ್ಳೆಯ ಫಲಿತಾಂಶ. ಉದ್ದಿಮೆದಾರರಿಗೆ ಹರ್ಷ.
ತುಲಾ:
ನೌಕರ ವರ್ಗದವರಿಗೆ ದುಡಿಮೆಯಲ್ಲಿ ಲಾಭ. ಕುಟುಂಬ ಸದಸ್ಯರಲ್ಲಿ ಅನಾರೋಗ್ಯದ ಬಾಧೆ, ಕೈಯಿಂದ ಹಣ ಖರ್ಚು.
ವೃಶ್ಚಿಕ:
ಸರಕಾರಿ ನೌಕರರಿಗೆ ಶ್ರಮ ಅಧಿಕವಾದರೂ ಧನಾಗಮನ, ಸಮಾಧಾನ. ವಾಹನ ಭೂಮಿ ಖರೀದಿಗೆ ಅನುಕೂಲ.
ಧನಸ್ಸು:
ಅಶುಭ ವಾರ್ತೆಯಿಂದ ಮನಸ್ಸಿಗೆ ಕೊಂಚ ಬೇಸರ. ಕಟ್ಟಡ ಕಾರ್ಯಗಳಿಗೆ ಅಡೆತಡೆ. ಹೆಂಡತಿ ಸಹಾಯ ಸ್ವಲ್ಪ ನೆಮ್ಮದಿ.
ಮಕರ:
ಹೊಸ ಕಾರ್ಯ ರಂಗದಲ್ಲಿ ಉತ್ಸಾಹದಾಯಕ ಚಟುವಟಿಕೆ ಆರಂಭ. ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ ಸಂಭವ. ಕೊಂಚ ಬೇಸರ.
ಕುಂಭ:
ಅನಿರೀಕ್ಷಿತ ಪ್ರಯಾಣದಿಂದ ಅನವಶ್ಯಕ ಖರ್ಚು. ಸತಿ ಪತಿಯರ ನಡುವೆ ಅನ್ಯೋನ್ಯತೆಗೆ ಭಂಗ. ಮನಸ್ಸಿಗೆ ಅಸಮಾಧಾನ.
ಮೀನ:
ವಿದ್ಯಾರ್ಥಿಗಳಿಗೆ ಕಿರಿಕಿರಿ ಇದ್ದರೂ ಮಾನಸಿಕ ದೃಢತೆ ವೃದ್ಧಿ. ನೌಕರರಿಗೆ ಮುನ್ನಡೆ. ಕೃಷಿಕರಿಗೆ ಕೂಡಿಟ್ಟ ಧಾನ್ಯದಿಂದ ಲಾಭ.