https://youtu.be/sxRG76nRzYk
ಮುಂಬೈ: ನಿಷೇಧಗೊಂಡಿರುವ 500, 1000 ರೂ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮಾ ಮಾಡುವ ಅವಧಿ ಡಿ.30 ಕ್ಕೆ ಮುಕ್ತಾಯಗೊಂಡಿದ್ದು, ಕೇಂದ್ರ ಸರ್ಕಾರ ಎಟಿಎಂಗಳಲ್ಲಿ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಿದೆ.
ಕೇಂದ್ರ ಸರ್ಕಾರ ಈ ಹಿಂದಿದ್ದ ರೂ ವಿತ್ ಡ್ರಾ ಮಿತಿಯನ್ನು 4,500 ರೂ ಕ್ಕೆ ಏರಿಕೆ ಜ.1 ರಿಂದ ಜಾರಿಗೆ ಮಾಡಿದ್ದರು. ಈಗ ಕೇಂದ್ರ ಸರ್ಕಾರದ ಮೂಲಕ ದೇಶದ ಜನತೆಗೆ ಸಂತಸ ಸುದ್ದಿಯಾಗಿದೆ.
ಈ ಹಿಂದೆ 4,500 ರೂ. ವಿತ್-ಡ್ರಾ ಮಾಡಲು ಅವಕಾಶವಿತ್ತು ಈಗ ನಿತ್ಯ ಎಟಿಎಂನಿಂದ 10 ಸಾವಿರ ರೂ. ಡ್ರಾ ಮಾಡಬಹುದು ಎಂದು RBI ತಿಳಿಸಿದೆ.
ಎಟಿಎಂಗಳಿಂದ ದಿನಕ್ಕೆ 10 ಸಾವಿರ ರೂ. ವಿತ್ ಡ್ರಾ ಮಾಡಬಹುದು. ಹಾಗೆಯೇ ವಾರದ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಾರದ ಮಿತಿ 25 ಸಾವಿರ ರೂ. ಗೆ ಮಾತ್ರ ಮಿತಿ ಹೆಚ್ಚಳ ಮಾಡಿದ್ದಾರೆ. ಇನ್ನು ಕರೆಂಟ್ ಅಕೌಂಟ್ ನಿಂದ ವಾರಕ್ಕೆ 1 ಲಕ್ಷ ರೂ. ವಿತ್-ಡ್ರಾ ಮಾಡಬಹುದಾಗಿದೆ.
ಕೆಲವರಿಗೆ ಏಟಿಎಂನಲ್ಲಿ ಕೇವಲ ೨೦೦೦ರುಪಾಯಿ ನೋಟ್ ಸಿಗ್ಗುತ್ತಿದೆ ಎಂದು ಹಲವಾರು ಗ್ರಾಹಕರು ಅರ್ಬಿಯನ್ನು ದೂರುತ್ತಿದ್ದರು… ಈಗ ಹೆಚ್ಚು ೫೦೦ ರೂಗಳ ನೋಟನ್ನು ಏಟಿಎಂಗಳಲ್ಲಿ ತುಂಬಲಾಗಿದೆ.. ಗ್ರಾಹಕರಿಗೆ ಇನ್ನು ಮುಂದೆ ಹೆಚ್ಚು ತೊಂದರೆ ಆಗಬಾರದು ಎಂದು RBI ಅಭಿಪ್ರಾಯ ಪಟ್ಟಿದೆ
ಅಂತೂ ಇಂತೂ ಈ ಡೆಮೊನೆಟಿಝಷನ್ನಿಂದ ಭಾರತ ಹೊರ ಬರುವ ಎಲ್ಲ ಸೂಚನೆ ಕಾಣುತ್ತಿದೆ…