3 ವರ್ಷದ ನಂತರ ಕಾರ್ಪೋರೇಷನ್ ಎಟಿಎಂ ಹಂತಕನ ಬಂಧನ

0
786

ಬೆಂಗಳೂರು: ಕಾರ್ಪೋರೇಷನ್ ಎಟಿಎಂ ನಲ್ಲಿ ಜ್ಯೋತಿ ಉದಯ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮೂರುವರೆ ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ಆರೋಪಿ ಮಧುಕರ್ ರೆಡ್ಡಿ 2011 ರಿಂದ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.

ಹಣಕ್ಕಾಗಿ ಆರು ವರ್ಷಗಳಲ್ಲಿ ಐದು ಕೊಲೆ ಮಾಡಿದ್ದ ಈತ ಎರಡು ಕೊಲೆ ಯತ್ನಗಳಲ್ಲೂ ಭಾಗಿಯಾಗಿದ್ದಾನೆ.

ಅತನ ಬಳಿಯಿದ್ದ ಹಣವೆಲ್ಲಾ ಖಾಲಿಯಾದ ಮೇಲೆ ಬೆಂಗಳೂರಿಗೆ ಬಂದಿದ್ದ ಆರೋಪಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದ. ಪ್ರಕರಣದ ನಂತರ ಮುಳಬಾಗಿಲು, ಚಿತ್ರದುರ್ಗಗಳಲ್ಲಿ ತಲೆ ಮರೆಸಿಕೊಂಡಿದ್ದ ಮಧುಕರ್ ರೆಡ್ಡಿ ಕೇರಳಗೆ ತೆರಳಿ ಅಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ.

-2005ರಲ್ಲಿ ತನ್ನದೇ ಗ್ರಾಮದ ಆನಂದ್ ರೆಡ್ಡಿ ಎಂಬುವರ ಜತೆ ನೀರಿನ ವಿಚಾರಕ್ಕೆ ಜಗಳ ಮಾಡಿ ಕಚ್ಚಾ ಬಾಂಬ್ ಹಾಕಿ ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಆರೋಪಿ ಕಡಪಾ ಕೇಂದ್ರ ಕಾರಾಗೃಹದಲ್ಲಿದ್ದ.

– 2011ರಲ್ಲಿ ಹಲ್ಲು ನೋವೆಂದು ಹೇಳಿದ್ದ ಈತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ತಪ್ಪಿಸಿಕೊಂಡಿದ್ದ. ಬಳಿಕ ಚಿತ್ತೂರು ಪೊಲೀಸರಿಗೆ ಸೆರೆ ಸಿಕ್ಕಿ, ಪರಾರಿಯಾಗಿದ್ದ.

-„ 2011 ರಿಂದ 2015 ರವರೆಗೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈ ವೇಳೆ ಹಣಕ್ಕಾಗಿ ಹೈದ್ರಾಬಾದ್ನ ಮಾಲ್ವೊಂದರ ಬಳಿ ರಾತ್ರಿ ವೇಳೆ ಯುವಕ-ಯುವತಿಯನ್ನು ಕೊಲೆಗೈದು ಹಣ, ಎಟಿಎಂ ಕಾರ್ಡ್ ಕಳವು ಮಾಡಿದ್ದ.

-„ 2013 ನವೆಂಬರ್ನಲ್ಲಿ ಮದ್ಯದ ವಿಚಾರವಾಗಿ ಹೈದ್ರಾಬಾದ್ನ ಮೆಹಬೂಬ್ ನಗರದಲ್ಲಿ ವ್ಯಕ್ತಿಯೊಬ್ಬರ ಜತೆ ಜಗಳವಾಡಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ.

-„ 2013ರಲ್ಲಿ ಧರ್ಮಾವರಂಗೆ ತೆರಳಿದ್ದ ಆರೋಪಿ ಒಂಟಿ ಮನೆಯಲ್ಲಿ ವೃದ್ಧೆ ಹತ್ಯೆ ಮಾಡಿ ಹಣ, ಚಿನ್ನಾಭರಣ ಹಾಗೂ ಎಟಿಎಂ ಕಾರ್ಡ್ ಕಳವು ಮಾಡಿಕೊಂಡು ಹೋಗಿದ್ದ. ಧರ್ಮಾವರಂನಿಂದ ಅನಂತಪುರ ಜಿಲ್ಲೆ ಕದಿರಿಗೆ ಹೋಗಿ ಎಟಿಎಂನಲ್ಲಿ 4 ಸಾವಿರ ಡ್ರಾ ಮಾಡಿದ್ದ. ಎಟಿಎಂ ಕಾರ್ಡಲ್ಲಿ ಹಣ ಖಾಲಿಯಾದ ನಂತರ ಕದಿರಿಯ ಕೆಲವೆಡೆ ಕಳವು ಮಾಡಿದ್ದ.

2015 ರ ಡಿಸೆಂಬರ್ ನಲ್ಲಿ ಅನಾರೋಗ್ಯದ ಕಾರಣ ಆರೋಪಿ ರೆಡ್ಡಿ ತನ್ನ ಹುಟ್ಟೂರಿಗೆ ತೆರಳಿದ್ದ. ಫೆಬ್ರವರಿ 2 ರಂದು ಆಭರಣ ಮಳಿಗೆಯೊಂದರಲ್ಲಿ ದರೋಡೆ ನಡೆಸಲು ಸ್ಕೆತ್ ಆಗಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇಷ್ಟು ವರ್ಷಗಳಲ್ಲಿ ರೆಡ್ಡಿ ಸತತವಾಗಿ ತನ್ನ ಮೊಬೈಲ್ ನಂಬರ್ ಗಳನ್ನು ಬದಲಾಯಿಸಿಕೊಂಡಿದ್ದ.