ಎಟಿಎಮ್ ಗೆ ಹೋಗಬೇಕೆಂದರೆ ಲೆಕ್ಕಹಾಕುವ ಪರಿಸ್ಥಿತಿ ಇಷ್ಟು ದಿನ ನಿರ್ಮಾಣವಾಗಿತ್ತು, ಏಕೆಂದರೆ ಮಿತಿ ಮಿರಿ ATM ಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ತಿಳಿಯಲು, ಮಿನಿ ಸ್ಟೇಟ್ಮೆಂಟ್ ಪಡೆಯಲು ದಿನದ ಮೂರು ಹೊತ್ತು ಪದೇ ಪದೇ ಕಾರ್ಡ್ ಸ್ವೈಪ್ ಮಾಡಿದರೆ, ಪ್ರತಿ ವಹಿವಾಟಿಗೂ ನೀವು 20 ರೂ. ವರೆಗೆ ಶುಲ್ಕ ತೆರಬೇಕಾಗಿತ್ತು. ಇದಕ್ಕೆಲ್ಲ ಭಾರತೀಯ ರಿಸವ್ರ್ ಬ್ಯಾಂಕ್ ಹೊಸ ನಿಯಮ ಜಾರಿ ಮಾಡಿದ್ದು, ಬ್ಯಾಲೆನ್ಸ್ ಚೆಕ್, ಚೆಕ್ ಬುಕ್ ಕೋರಿಕೆ, ತೆರಿಗೆ ಪಾವತಿ, ಹಣ ವರ್ಗಾವಣೆಯನ್ನೂ ಸಹ ಉಚಿತ ಎಟಿಎಂ ವಹಿವಾಟಿನ ಲೆಕ್ಕಕ್ಕೆ ಸೇರಿಸದಂತೆ ಆರ್ಬಿಐ ತಿಳಿಸಿದೆ.
ಏನಿದು ಹೊಸ ನಿಯಮ?
ಎಟಿಎಂಗಳಲ್ಲಿ ತಾಂತ್ರಿಕ ಕಾರಣದಿಂದ ವಿಫಲಗೊಳ್ಳುವ ವಹಿವಾಟನ್ನು ಉಚಿತ ವಹಿವಾಟಿನ ಜತೆ ಸೇರಿಸಬಾರದು ಎಂದು ಭಾರತೀಯ ರಿಸವ್ರ್ ಬ್ಯಾಂಕ್ ಬುಧವಾರ ಇತರ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಅಲ್ಲದೇ ಬ್ಯಾಲೆನ್ಸ್ ಚೆಕ್, ಚೆಕ್ ಬುಕ್ ಕೋರಿಕೆ, ತೆರಿಗೆ ಪಾವತಿ, ಹಣ ವರ್ಗಾವಣೆಯನ್ನೂ ಸಹ ಉಚಿತ ಎಟಿಎಂ ವಹಿವಾಟಿನ ಲೆಕ್ಕಕ್ಕೆ ಸೇರಿಸದಂತೆ ಆರ್ಬಿಐ ತಿಳಿಸಿದೆ. ಎಟಿಎಂಗಳಲ್ಲಿ ಹಣ ಇಲ್ಲದೇ ಇರುವಿಕೆ, ಸಾಫ್ಟ್ವೇರ್, ಹಾರ್ಡ್ವೇರ್ ಸಮಸ್ಯೆ, ತಪ್ಪಾಗಿ ಪಿನ್ ನಮೂದಿಸುವಿಕೆ ಮತ್ತಿತರ ಕಾರಣದಿಂದ ಎಟಿಎಂ ವಹಿವಾಟು ವಿಫಲಗೊಳ್ಳುವುದಕ್ಕೆ ಬ್ಯಾಂಕುಗಳು ಶುಲ್ಕ ವಿಧಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಹೀಗೆ ತಾಂತ್ರಿಕ ಕಾರಣದಿಂದ ವಿಫಲವಾದ ಎಟಿಎಂ ವಹಿವಾಟಿಗೆ ಶುಲ್ಕ ವಿಧಿಸದಂತೆ ಸ್ಪಷ್ಟನೆ ನೀಡುತ್ತಿದ್ದೇವೆ ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ನಗರಗಳಲ್ಲಿ ಸ್ವಂತ ಬ್ಯಾಂಕಿನ ಎಟಿಎಂ ಬಳಕೆಗೆ ತಿಂಗಳಿಗೆ 5 ಬಾರಿ ಹಾಗೂ ಬೇರೆ ಬ್ಯಾಂಕುಗಳ ಎಟಿಎಂಗಳಿಂದ ಮೂರು ಬಾರಿ ಉಚಿತವಾಗಿ ವಹಿವಾಟು ನಡೆಸಲು ಅವಕಾಶವಿದೆ. ಆದರೆ ಬ್ಯಾಲೆನ್ಸ್ ಚೆಕ್, ಚೆಕ್ ಬುಕ್ ಕೋರಿಕೆ, ತೆರಿಗೆ ಪಾವತಿ, ಹಣ ವರ್ಗಾವಣೆಯನ್ನೂ ಸಹ ಉಚಿತ ಎಟಿಎಂ ವಹಿವಾಟಿನ ಲೆಕ್ಕಕ್ಕೆ ಸೇರಿಸದಂತೆ ಆರ್ಬಿಐ ತಿಳಿಸಿದೆ.
ಈ ಹಿಂದೆ ಏನಿತ್ತು?
ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಗ್ರಾಹಕ ಖಾತೆಹೊಂದಿರುವ ಬ್ಯಾಂಕ್ನ ಎಟಿಎಂಗಳಲ್ಲೇ ನಡೆಸುವ ಮಾಸಿಕ 5 ವಹಿವಾಟು ಮತ್ತು ಇತರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ನಡೆಸುವ ಮಾಸಿಕ 3 ವಹಿವಾಟು ಮಾತ್ರ ಉಚಿತವಾಗಿ ಸಿಗುತ್ತಿತ್ತು. ಅದರಂತೆ ನೀವು ಬೇರೆ ಬ್ಯಾಂಕ್ ಎಟಿಎಂಗಳಲ್ಲಿ 3ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಪ್ರತಿ ವಹಿವಾಟಿಗೆ 20 ರೂ. ವರೆಗೆ ಶುಲ್ಕ ನೀಡಬೇಕಾಗಿತ್ತು. ಅದೇರೀತಿ, ನಿಮ್ಮ ಖಾತೆ ಇರುವ ಬ್ಯಾಂಕ್ನ ಎಟಿಎಂಗಳಲ್ಲೇ ಮಾಸಿಕ 5ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಪ್ರತಿ ವಹಿವಾಟಿಗೆ ಶುಲ್ಕ ವಿಧಿಸಲು ಆರ್ಬಿಐ, ಬ್ಯಾಂಕ್ಗಳಿಗೆ ಅನುಮತಿ ಕೂಡ ನೀಡಿತ್ತು.
ಹಿಂದೆ ಜಾರಿಯಲ್ಲಿದ್ದ ನಿಯಮದಿಂದ ಪದೇಪದೇ ಎಟಿಎಂ ಬಳಕೆಯನ್ನು ತಡೆಯಲು ಸಾಧ್ಯವಾಗಿತ್ತು. ಜತೆಗೆ, ಎಲ್ಲೆಂದರಲ್ಲಿ ಕಾಣುವ ಇತರೆ ಬ್ಯಾಂಕ್ಗಳ ಎಟಿಎಂಗಳಿಗೆ ಹೋಗುವ ಪ್ರವೃತ್ತಿಯನ್ನು ನಿಯಂತ್ರಣಕ್ಕೆ ಬಂದಿತ್ತು. ಎಟಿಎಂಗಳಿಗೆ ಹೋದಾಗ ತಕ್ಷಣದ ಅಗತ್ಯಕ್ಕಿಂತ ಹೆಚ್ಚಿನ ಹಣ ಹಿಂಪಡೆದು, ಅಗತ್ಯ ಬಿದ್ದಾಗ ಬಳಸುವ ಅಭ್ಯಾಸ ರೂಢಿಗೆ ಬಂದಿತ್ತು. ಆದರೆ ಜನರಿಗೆ ಅಗ್ಯತ್ಯಕ್ಕಿಂತ ಹೆಚ್ಚಿನ ಹಣವನ್ನು ಪಡೆಯುವುದು ಹೆಚ್ಚಾಗಿದ್ದರಿಂದ ಬ್ಯಾಂಕ್-ಗಳಿಗೆ ದಂಡ ಕಟ್ಟುವುದು ಹೆಚ್ಚಾಗಿತ್ತು ಇದರಿಂದ ಕೆಲವರು ATM ಬಳಕೆಯನ್ನೇ ಬಿಟ್ಟಿದ್ದರು ಈಗ ತಂದ ಹೊಸ ನಿಯಮ ಸ್ವಲ್ಪ ನೆಮ್ಮದಿ ತಂದಿದೆ ಎಂದು ಗ್ರಾಹಕರು ನಿರಾಳವಾಗಿದ್ದಾರೆ.