ಮೊಡವೆಗೆ ಮನೆ ಮದ್ದು ಈ “ಬೆಣ್ಣೆ ಹಣ್ಣು”

0
7589

ಬೆಣ್ಣೆ ಹಣ್ಣಿನಲ್ಲಿ ಆರೋಗ್ಯದ ಜೊತೆಗೇ ತ್ವಚೆಗೂ ಹಲವಾರು ಪ್ರಯೋಜನಗಳಿವೆ. ಹೌದು ಬೆಣ್ಣೆಹಣ್ಣಿನಲ್ಲಿ ಕೊಬ್ಬಿನ ಆಮ್ಲಗಳು ಹೇರಳವಾಗಿದ್ದು ಇವು ಚರ್ಮದ ಸೂಕ್ಷ್ಮರಂಧ್ರದೊಳಕ್ಕಿಳಿದು ಆರ್ದ್ರತೆ ನೀಡುವ ಮೂಲಕ ಚರ್ಮದ ಕಾಂತಿ ಹೆಚ್ಚಿಸುತ್ತವೆ. ಅತಿ ಹೆಚ್ಚಿನ ಪೋಷಕಾಂಶವುಳ್ಳ ಹಣ್ಣಾಗಿದ್ದು ಇದರ ಸೇವನೆಯಿಂದ ಹತ್ತು ಹಲವು ರೀತಿಯಲ್ಲಿ ಆರೋಗ್ಯ ಉತ್ತಮಗೊಳ್ಳುತ್ತದೆ.

avocado-on-a-wooden-table

ಬೆಣ್ಣೆ ಹಣ್ಣಿನ ಉಪಯೋಗಗಳತ್ತ ಕಣ್ಣಾಡಿಸೋಣ :

  • ಇದರಲ್ಲಿ ಈ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೂಲಕವೂ ಥಟ್ಟನೇ ಮುಖದ ಕಾಂತಿಯನ್ನು ಹೆಚ್ಚಿಸಬಹುದು.
  • ಮೊಸರಿನ ಲ್ಯಾಕ್ಟಿಕ್ ಆಮ್ಲ ಮತ್ತು ಬೆಣ್ಣೆಹಣ್ಣಿನ ವಿಟಮಿನ್ ಬಿ ಯ ಜೋಡಿ ಚರ್ಮಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಿ ಆರ್ದ್ರತೆ ನೀಡುವ ಮೂಲಕ ಚರ್ಮಕ್ಕೆ ತಕ್ಷಣವೇ ಸಹಜವರ್ಣ ಮತ್ತು ಕಾಂತಿಯನ್ನು ಪಡೆಯಲು ನೆರವಾಗುತ್ತವೆ.
  • ಸತ್ತ ಜೀವಕೋಶಗಳನ್ನು ನಿವಾರಿಸುವ ಗುಣ ಚರ್ಮದ ಹೊರಪದರಲ್ಲಿ ಅಂಟಿಕೊಂಡಿದ್ದ ಪದರವನ್ನು ನಿವಾರಿಸುತ್ತದೆ.
  • ಇತರ ಮುಖಲೇಪಗಳಂತೆ ಇದು ಚರ್ಮಕ್ಕೆ ಉರಿಯನ್ನೂ ತರುವುದಿಲ್ಲ, ಬದಲಿಗೆ ತಣ್ಣನೆಯ ಮತ್ತು ಆರಾಮದಾಯಕ ಅನುಭವ ನೀಡುತ್ತದೆ.
  • ವಿಶೇಷವಾಗಿ ಸೂಕ್ಷ್ಮ ಚರ್ಮದವರಿಗೂ ಇದು ಸುರಕ್ಷಿತವಾಗಿದ್ದು ಯಾವುದೇ ಅಡ್ಡಪರಿಣಾಮವನ್ನು ಹೊಂದಿಲ್ಲವಾದ ಕಾರಣ ಎಲ್ಲಾ ವಿಧದ ಚರ್ಮದವರು ಬಳಸಲು ಯೋಗ್ಯವಾಗಿದೆ.

avocado-on-a-wooden-table

ಬನ್ನಿ, ಚರ್ಮತಜ್ಞರು ಈ ಹಣ್ಣನ್ನು ಹೇಗೆ ಬಳಸಬಹುದು ಎಂದು ಹೇಳಿರುವ ಮಾಹಿತಿಯನ್ನು ನೋಡೋಣ:

ಉಪಯೋಗ ಹೇಗೆ…?

  • ಒಂದುವರೆ ಕಪ್ ಬೆಣ್ಣೆಹಣ್ಣಿನ ತಿರುಳು ಮತ್ತು ಕಾಲು ಕಪ್ ಗಟ್ಟಿಮೊಸರನ್ನು ಬೆರೆಸಿ ಈಗತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ. ಸುಮಾರು ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
  • ಮೊಸರಿನೊಂದಿಗೆ ಬೆಣ್ಣೆ ಹಣ್ಣನ್ನು ಸೇರಿಸಿ ಹಚ್ಚಬೇಕು.

ಎಣ್ಣೆಪಸೆ ಇರುವ ತ್ವಚೆಗಾಗಿ:

  • ಎಣ್ಣೆ ಪಸೆ ಮತ್ತು ಚರ್ಮದ ಆಳದಲ್ಲಿರುವ ಎಣ್ಣೆ ಜಿಡ್ಡು ಮೊಡವೆಗಳಿಗೆ ಮೂಲವಾಗಿದೆ. ಈ ಚರ್ಮದವರಿಗಾಗಿ ಲೋಳೆಸರ ಮತ್ತು ಕೊಬ್ಬರಿ ಎಣ್ಣೆಯ ಜೊತೆಯೂ ಅಗತ್ಯ. ಅರ್ಧ ಬೆಣ್ಣೆಹಣ್ಣಿನ ತಿರುಳನ್ನು ಚೆನ್ನಾಗಿ ಗೊಟಾಯಿಸಿ ಇದಕ್ಕೆ ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆ ಮತ್ತು ಒಂದು ಚಿಕ್ಕ ಚಮಚ ಲೋಳೆಸರದ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹೆಚ್ಚಿ. ಮೊಡವೆಗಳಿರುವಲ್ಲಿ ಅಥವಾ ಮೊಡವೆ ಮೂಡುತ್ತಿರುವ ಸ್ಥಳಗಳಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ. ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ದಪ್ಪನೆಯ ಟವೆಲ್ ಉಪಯೋಗಿಸಿ ಒತ್ತಿ ಒಣಗಿಸಿ. ಒರೆಸಲು ಹೋಗಬೇಡಿ, ಇದರಿಂದ ಮೊಡವೆಗಳ ಮೇಲಿನ ಚರ್ಮ ಕಿತ್ತು ಬರಬಹುದು.