ನಿಜಕ್ಕೂ ಮಕ್ಕಳು ಮೋಬೈಲ್ನಿಂದ ದೂರವಿರುವುದು ಶೈಕ್ಷಣಿಕ ಬೆಳವಣಿಗೆಯ ಉದ್ದೇಶದಿಂದ ಒಳಿತು. ಇದೊಂದು ತಾಜಾ ಉದಾಹರಣೆ ಅಷ್ಟೇ. ಈ ಮೊಬೈಲ್ ಎಂಬ ಮಾಯಾಜಾಲಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಪುಸ್ತಕದ ಬದಲಾಗಿ ಸದಾ ಮೊಬೈಲ್, ಟಿ.ವಿ., ಕಂಪ್ಯೂಟರ್ ಸಂಗಾತಿಯಾಗಿವೆ. ಓದುವ ಹೊತ್ತಿನಲ್ಲಿ ಫೋನ್ನ ಬಟನ್ ಕುಟ್ಟುತ್ತಾ, ಸ್ಕ್ರೀನ್ ಮೇಲೆ ಕೈಯಾಡಿಸುತ್ತಾ ಕುಳಿತಿರುತ್ತಾರೆ.
ಮೊಬೈಲ್ ಬಳಕೆಯ ಅಡ್ಡ ಪರಿಣಾಮಗಳು:
1.ಅತಿಯಾದ ಮೋಬೈಲ್ ಬಳಕೆ ಶ್ರವಣ ಮತ್ತು ದೃಷ್ಠಿ ದೋಷಕ್ಕೆ ಕಾರಣವಾಗುತ್ತದೆ.
2.ಮೊಬೈಲ್ನ ಮೈಕ್ರೋವೇವ್ಸ್ ಮೆದುಳಿನ ಮಂದತನ ಮತ್ತು ನಿಷ್ಕ್ರಿಯತೆಗೆ ಕಾರಣವಾಗುತ್ತವೆ.
3.ಇದರ ಹೆಚ್ಚಿನ ಬಳಕೆ `ನಪುಂಸಕತ್ವ’ಕ್ಕೂ ಮೂಲವಾಗುತ್ತದೆ.
4.ಇಂದು 100 ರಲ್ಲಿ 90ರಷ್ಟು ಬೈಕ ಅಪಘಾತಗಳು ‘ಬೈಕ್ ಸವಾರಿ’ ಸಮಯದಲ್ಲಿ ಮೋಬೈಲ್ ಬಳಕೆಯಿಂದಲೇ ಆಗುತ್ತಿವೆ.
5.ಇದರ ಹೆಚ್ಚಿನ ಬಳಕೆಯಿಂದ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಉದ್ಭವವಾಗುತ್ತವೆ.
6.ಕೆಲಸದಲ್ಲಿ ಖಿನ್ನತೆ ಮತ್ತು ನಿರುತ್ಸಾಹಕ್ಕೆ ಇದು ಕಾರಣ.
7.ಮನಸ್ಸಿನಲ್ಲಿ ಇಲ್ಲ-ಸಲ್ಲದ ಭಾವನೆಗಳ ಹುಟ್ಟು ಇದರಿಂದಾಗುತ್ತದೆ.
8.ವಿದ್ಯಾಭ್ಯಾಸ ಮತ್ತು ವರ್ಗಕೋಣೆಯಲ್ಲಿ ಸರಿಯಾದ ಕಲಿಕೆಯಾಗುವುದಿಲ್ಲ.
ಹೀಗೆ ಅನೇಕ ಅಡ್ಡ ಪರಿಣಾಮಗಳು ಮೊಬೈಲ್ನ ಅತಿಯಾದ ಬಳಕೆಯಿಂದ ಆಗುತ್ತವೆ. ಹಾಗಂತ ‘ಮೊಬೈಲ್’ ಅನ್ವೇಷಣೆಯೇ ತಪ್ಪು ಎಂದು ಭಾವಿಸುವುದು ತಪ್ಪು. ಇದು ಎಷ್ಟು ಅನನುಕೂಲಗಳನ್ನು ಹೊಂದಿದೆವೋ, ಅದಕ್ಕಿಂತ ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಇಂದು ಮೊಬೈಲ್ನಿಂದಲೇ ಇಡೀ ಪ್ರಪಂಚ ಸಣ್ಣ ಮನೆಯಂತಾಗಿದೆ. ದೇಶದ ಯಾವುದೋ ಮೂಲೆಯಲ್ಲಿರುವ ನಾವುಗಳು, ಪ್ರಪಂಚದ ಇನ್ಯಾವುದೋ ಮೊಲೆಯಲ್ಲಿರುವ ನಮ್ಮವರ ಜೊತೆ ಮಾತನಾಡಬಹುದು. ಹಾಗೆಯೇ ಇದರಿಂದಲೇ ವ್ಯಾಪಾರ ವಹಿವಾಟು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಹೀಗೆ ಸಾಕಷ್ಟು ಪ್ರಯೋಜನೆಗಳನ್ನು ಮೋಬೈಲ್ ನಿಂದ ಮಾನವನಿಗೆ ಆಗುತ್ತಿವೆ. ಅದೇನೇ ಇರಲಿ, ಅಲ್ಬರ್ಟ ಐನಸ್ಟೀನ್ ಹೇಳುತ್ತಾರೆ “ Intellectuals solve problems, genius prevent them” ಎಂದು. ಹಾಗಾಗಿ ಜಾಣರಾದ ನೀವುಗಳು ಈ “magic device ನಿಂದ ದೂರವಿರುವುದು, ನಿಮ್ಮ ಭವಿಷ್ಯ ಮತ್ತು ಆರೋಗ್ಯದ ದೃಷ್ಠಿಯಿಂದ ಒಳಿತು.