ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ಹಾಗೂ ರುಚಿಕರವಾದ ಬಾಳೇಕಾಯಿ ಪಲ್ಯ ಮಾಡೋ ವಿಧಾನ !!

0
1750

ಬಾಳೆಹಣ್ಣು ಎಂದರೆ ಪೂಜೆಗೆ ಅತಿ ಶ್ರೇಷ್ಠವಾಗಿದೆ. ಹಾಗೆಯೇ ಈ ಬಾಳಿಹಣ್ಣು ಸದೃಡ ಆರೋಗ್ಯೇಕೆ ಬೇಕೇಬೇಕು ಇಂತಹ ಹಣ್ಣು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ನೆಚ್ಚಿನ ಹಣ್ಣು ಮತ್ತು ಎಲ್ಲ ಸ್ಥಳಗಳಲೂ ಕೈಗೆ ಸಿಗುವ ಬೆಲೆಯಲ್ಲಿರುವ ಹಣ್ಣು ಅಂದ್ರೆ ಇದೆ ಹಣ್ಣು, ಇನೊಂದು ವಿಶೇಷ ಅಂದ್ರೆ ಬಾಳೆಹಣ್ಣು ಎಷ್ಟೇ ಮಾಗಿದರು ಎಷ್ಟೇ ಕೆಟ್ಟರು ಇದರಲ್ಲಿ ಹುಳವಾಗುವುದಿಲ್ಲವಂತೆ, ಅದಕ್ಕೇನೆ ಎಲ್ಲರು ಇಷ್ಟೊಂದು ಇಷ್ಟ ಪಡುವ ಹಣ್ಣಾಗಿದೆ. ಇದೆಲ್ಲ ಹಣ್ಣಿನ ಕರಾಮತ್ತು ಆದ್ರೆ ಇನ್ನೂ ಬಾಳೆಕಾಯಿಂದ ಹಲವಾರು ತರಹದ ತಿಂಡಿ ತಿನಿಸುಗಳನ್ನೂ ಮಾಡುತ್ತಾರೆ. ಮಲೆನಾಡಿನಲ್ಲಿ ಹಲವಾರು ತರಹದ ಖಾದ್ಯಗಳನ್ನು ಮಾಡುತ್ತಾರೆ.

Also read:
“ಬಾಳೆ ಹಣ್ಣಿನಲ್ಲಿರೋ ಆರೋಗ್ಯಕರ ಗುಣ ಗೊತ್ತಾದ್ರೆ ಮನೇಲಿ ಬಾಳೆಗೊನೆ ಕಟ್ಟೋದಂತೂ ಗ್ಯಾರಂಟೀ..”

ಬಾಳಿಕಾಯಿಂದ ಮಾಡಿದ ಅಡುಗೆ ತಿಂದರೆ ತುಂಬಾನೇ ಉಪಯೋಗಳು, ಆರೋಗ್ಯದ ದೃಷ್ಟಿಯಿಂದ ವೈದ್ಯರು ಹೇಳುವ ಪ್ರಕಾರ ಪ್ರಿಸ್ಕ್ರೈಬ್ ಮಾಡದೆ ತಿನ್ನಬಹುದಾದ ಖಾದ್ಯ. ಅತ್ಯಧಿಕ ಕ್ಯಾಲೋರಿ ಇರುವ ಬಾಳೆಯಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್ ಗಳು ಕೂಡ ಅಧಿಕವಾಗಿದೆ, ಮತ್ತು ಬಾಳೆಕಾಯಿ ಯೌವನ ಪುಟಿದೇಳುವಂತೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅತ್ಯಧಿಕ ಪ್ರಮಾಣದಲ್ಲಿರುವ ಪೋಷಕಾಂಶಗಳಿಂದ ಆರೋಗ್ಯವನ್ನು ನೋಡಿಕೊಳ್ಳುತ್ತದೆ. ಇಷ್ಟೆಲ್ಲ ಇರುವ ಬಾಳೆಕಾಯಿ ಬಳಸಿ ರುಚಿಕಟ್ಟಾದ ಪಲ್ಯ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

Also read: ಬಾಳೆಕಾಯಿ ಮಂಚುರಿ ಮಾಡುವ ವಿಧಾನ

* ಎರಡರಿಂದ ಮೂರೂ ಬಾಳೆಕಾಯಿ
* ಎರಡು ಈರುಳ್ಳಿ
* ನಾಲ್ಕು ಎಸಳು ಬೆಳ್ಳುಳ್ಳಿ
* ಸ್ವಲ್ಪ ಹಸಿ ಶುಂಠಿ
* ಸ್ವಲ್ಪ ಎಣ್ಣೆ
* 50 ಗ್ರಾಂ ಹಸಿ ಮೆಣಸಿನಕಾಯಿ
* ಕಾಲು ಬಟ್ಟಲು ಹಸಿ ಕೊಬ್ಬರಿ
* ಒಂದು ಚಮಚೆ ಅಕ್ಕಿಹಿಟ್ಟು
* ಕರಿಬೇವು, ಸಾಸಿವೆ, ಅರಿಷಿಣ

ತಯಾರಿಸುವ ವಿಧಾನ:

1. ಬಾಳೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಗಾಲಿಗಾಲಿಗಳಾದ ಕತ್ತರಿಸಿಕೊಳ್ಳಿ.
2. ಮಿಕ್ಸಿಯಲ್ಲಿ ಬೆಳ್ಳುಳ್ಳಿ ಎಸಳು ಮತ್ತು ಹಸಿ ಶುಂಠಿ ಪೇಸ್ಟ್ ತಯಾರಿಸಿಕೊಳ್ಳಿ. ಜೊತೆಗೆ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಅದರ ಪೇಸ್ಟ್ ಕೂಡ ತಯಾರಿಸಬಹುದು ಅಥವಾ ಹಾಗೆಯೇ ಬಳಸಬಹುದು,
3. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಕರಿಬೇವು ಹಾಕಿ, ಅರಿಷಿಣ ಮತ್ತು ಮೆಣಸಿನಕಾಯಿ ಬೆರೆಸಿ. ಕತ್ತರಿಸಿಕೊಂಡ ಈರುಳ್ಳಿ, ತುರಿದ ಹಸಿಕೊಬ್ಬರಿಯನ್ನೂ ಹಾಕಿ ಈರುಳ್ಳಿ ತುಸು ಕೆಂಪಾಗಿ ಘಮ್ಮನೆ ವಾಸನೆ ಬರುವವರೆಗೆ ಹುರಿಯರಿ.
4. ಇದಕ್ಕೆ ಗಾಲಿಯಾಕಾರದಲ್ಲಿ ಕತ್ತರಿಸಿಟ್ಟುಕೊಂಡ ಬಾಳೆಕಾಯಿಗಳನ್ನು ಸುರಿದು, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಮಿಶ್ರಣ ಮಾಡಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಲು ಮರೆಯಬೇಡಿ. ಮತ್ತೆ ಎರಡು ನಿಮಿಷ ಹುರಿಯರಿ.
5. ನಂತರ ಒಂದು ಸಣ್ಣ ಪಾತ್ರೆಯಲ್ಲಿ ಸ್ವಲ್ಪವೇ ನೀರು ಹಾಕಿ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ ಕಲಿಸಿಕೊಳ್ಳಿ. ಇದನ್ನು ಬಾಳೆಕಾಯಿ ಹಾಕಿದ್ದ ಪಾತ್ರೆಗೆ ಸುರುವಿ ಐದರಿಂದ ಹತ್ತು ನಿಮಿಷ ಕುದಿಯಲು ಬಿಡಿ. ಈಗ ಬಾಳಿಕಾಯಿ ಪಲ್ಯ ತಯಾರಾಗಿದೆ.
ಇದನ್ನು ಚಪಾತಿ, ದೋಸೆ, ರೊಟ್ಟಿ ಮುಂತಾದುವುಗಳೊಂದಿಗೆ ಸೇರಿಸಿ ತಿನ್ನಬಹುದು.