ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಗಾಯಕ, ವಾಗ್ಗೇಯಕಾರ, ಸಂಗೀತ ಸಂಯೋಜಕರು, ಗೀತ ರಚನೆಕಾರ ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೂಲತಃ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಶಂಕರಗುಪ್ತಮ್ ನವರಾದ ಬಾಲಮುರಳಿಕೃಷ್ಣ, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲಿ ಸಂಧ್ಯಾರಾಗ, ಸುಬ್ಬಾಶಾಸ್ತ್ರಿ , ಹಂಸಲೇಖ, ಚಿನ್ನಾರಿ ಮುತ್ತ, ಮುತ್ತಿನ ಹಾರ ಚಿತ್ರ ಗೀತೆಗಳನ್ನು ಹಾಡಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ ಪದ್ಮ ವಿಭೂಷನ ಬಾಲಮುರಳಿ ಕ್ರೃಷ್ಣ
ಜುಲೈ 6, 1930 ರಂದು ಜನಿಸಿದ್ದರು. ಮೃದಂಗ, ಕಂಜಿರ, ಪಿಟೀಲು ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ಜಗತ್ತಿನಾದ್ಯಂತ 25 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ.
ಕನ್ನಡದ ಹಂಸಗೀತೆ ಚಿತ್ರದಲ್ಲಿನ ಹಿನ್ನೆಲೆ ಗಾಯನಕ್ಕೆ 1976ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ್ದಿದರು. ‘ಮುತ್ತಿನಹಾರ’ ಚಿತ್ರದಲ್ಲಿ ಅವರು ಹಾಡಿದ ‘ದೇವರು ಹೊಸೆದ ಪ್ರೇಮದ ದಾರ’ ಅವರ ಪ್ರಸಿದ್ದ ಗೀತೆಯಲ್ಲಿ ಒಂದು…