ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಬ್ರ್ಯಾಂಡೆಂಡ್ ವಸ್ತುಗಳ ಖರಿಧಿಸಲು ಮುಂದಾಗುತ್ತಿದ್ದಾರೆ. ಹೀಗೆ ಹೆಚ್ಚು ಹಣ ಕೊಟ್ಟು ವಸ್ತುಗಳನ್ನು ಖರಿಧಿಸುವ ಮುನ್ನ ಹಣದ ಬಗ್ಗೆ ಸ್ವಲ್ಪ ಯೋಚನೆಯನ್ನು ಮಾಡುವ ಜನರು ಬ್ರ್ಯಾಂಡೆಂಡ್ ವಸ್ತುಗಳನ್ನೇ ಕಡಿಮೆ ಹಣಕ್ಕೆ ಕೊಳ್ಳಲು ಇಚ್ಚಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಇಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ದಿನಚರಿ ಬಳಸುವ ಪ್ರತಿಯೊಂದು ವಸ್ತುಗಳನ್ನು ನಕಲಿ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಂತಹ ವಸ್ತುಗಳು ಹೆಚ್ಚಾಗಿ ಬೆಂಗಳೂರಿನ ಮೆಜೆಸ್ಟಿಕ್ ಸೇರಿದಂತೆ ರಾಜ್ಯದ ಎಲ್ಲ ಕಡೆಯಲ್ಲಿ ಸಿಗುತ್ತಿವೆ. ಜನರು ಬರಿ ಹೆಸರು ನೋಡಿ ಸಾವಿರಕ್ಕೆ ಸಿಗುವ ವಸ್ತುವನ್ನು ನೂರು ರೂ. ಕೊಟ್ಟು ಖರಿಧಿಸುತ್ತಿದ್ದಾರೆ.
ಹೌದು ಕಡಿಮೆ ಬೆಲೆ ಸಿಗುವ ಬ್ರ್ಯಾಂಡೆಂಡ್ ವಸ್ತುಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಈ ಹಾವಳಿ ಈಗ ಆನ್ಲೈನ್ ಶಾಪಿಂಗ್-ಗೂ ಕೂಡ ಕಾಲಿಟ್ಟಿದ್ದು ಎಲ್ಲ ವಸ್ತುಗಳು ಒರಿಜಿನಲ್ ಎಂದು ಹೇಳಲು ಸಾಧ್ಯವಾಗುತ್ತಿಲ್ಲ, ಅದರಲ್ಲಿ ಟೂತ್ಪೇಸ್ಟ್, ಬ್ರೇಶ್-ನಿಂದ ಹಿಡಿದು ಬಟ್ಟೆ, ಎಲೆಕ್ಟ್ರಿಕಲ್ ವಸ್ತುಗಳು ಕೂಡ ಮುಖ್ಯವಾಗಿ ಡುಬ್ಲಿಕೆಟ್ ಆಗಿವೆ. ಇಂತಹ ನಕಲಿ ಜಾಲವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದ್ದು, ಮಾರುಕಟ್ಟೆಯಲ್ಲಿ ಚೀಪ್ರೇಟ್, ಹಾಫ್ರೇಟ್ ಎಂದು ಕೂಗುವ ಅನೇಕ ವ್ಯಾಪಾರಿಗಳ ಬಳಿ ಸ್ಟ್ಯಾಂಡರ್ಡ್ ಬ್ರ್ಯಾಂಡೆಡ್ ವಸ್ತುಗಳು ಕಾಣುತ್ತವೆ. ಆದರೆ ಕಡಿಮೆ ಬೆಲೆಗೆ ಸಿಗುತ್ತವೆ ಅಂತ ಖರೀದಿಸಿದರೆ ಭಾರೀ ದೋಖಾಗೆ ಗುರಿಯಾಗಬೇಕಾಗುತ್ತದೆ.
Also read: ಫೇಸ್ಬುಕ್ ಬಳಕೆದಾರರೇ ಎಚ್ಚರ; ಚಂದದ ಹುಡುಗಿಯರ ಫೋಟೋ ಬಳಸಿಕೊಂಡು ಹಣ ವಂಚನೆ ಮಾಡುತ್ತಿದ್ದಾರೆ ಎಚ್ಚರ.!
ರಾಜಧಾನಿಯ ಕೆಲವು ಶಾಪಿಂಗ್ ಸ್ಪಾಟ್ ಅಂದರೆ ಚಿಕ್ಕಪೇಟೆ. ಇಲ್ಲಿ ನಡೆಯುವ ಸಂಡೆ ಬಜಾರ್ ನಲ್ಲಿ ಗುಂಡು ಪಿನ್ನಿನಿಂದ ಹಿಡಿದು ಲಿಫ್ಟ್ ಬಿಡಿಭಾಗಗಳವರೆಗೂ ಎಲ್ಲಾ ವಸ್ತುಗಳು ಸಿಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಬ್ರ್ಯಾಂಡ್ ವಸ್ತುಗಳೇ ಸಿಗುತ್ತವೆ. ಇಷ್ಟು ಕಡಿಮೆ ದರದಲ್ಲಿ ಅಸಲಿ ಉತ್ಪನ್ನ ಸಿಗುವುದಿಲ್ಲ. ಕಡಿಮೆ ದರಕ್ಕೆ ಸಿಗುವ ವಸ್ತುಗಳು ಸೆಕೆಂಡ್ ಕಾಪಿ, ಒರಿಜಿನಲ್ ಅಲ್ಲ ಎಂದು ಸ್ವತಃ ವ್ಯಾಪಾರಿಗಳೇ ಒಪ್ಪಿಕೊಳ್ಳುತ್ತಾರೆ. ಬ್ರ್ಯಾಂಡ್ ಕ್ರೇಜ್ ಇರುವ ಗ್ರಾಹಕರಿಗೆ ವ್ಯಾಪಾರಿಗಳು ಮೋಸ ಮಾಡುತ್ತಾರೆ. ದೊಡ್ಡ ಕಂಪನಿಗಳ ಹೆಸರು ಹೊಂದಿರುವ ಮೊಬೈಲ್ ಚಾರ್ಜರ್, ಇಯರ್ ಫೋನ್, ಸ್ಪೀಕರ್, ಹೆಡ್ ಫೋನ್ಗಳನ್ನು ಇಲ್ಲಿ ಸಿಗುತ್ತವೆ. ಸಾಮಾನ್ಯವಾಗಿ ಕಡಿಮೆ ದರಕ್ಕೆ ಸಿಗುವ ಈ ಎಲ್ಲ ವಸ್ತುಗಳು ನಕಲಿಯಾಗಿವೆ. ಶಿವಾಜಿ ನಗರದಲ್ಲಿ 32 ಜಿಬಿ ಪೆನ್ ಡ್ರೈವ್ ಕೇವಲ ನೂರು ರೂಪಾಯಿಗೆ, 2-3 ಸಾವಿರ ರೂ.ಗೆ ಎಲ್ಇಡಿ ಟಿವಿಗಳು, ಸ್ಪೀಕರ್, ಹೋಮ್ ಥೇಂಟರ್ ಗಳು ಸಿಗುತ್ತವೆ.
Also read: ಕಾಫಿ ಕುರಿತು ಹೊಸ ಅಧ್ಯಯನ; ಪ್ರತಿದಿನ ಕಾಫಿ ಕುಡಿದರೆ ಲಿವರ್ ಕ್ಯಾನ್ಸರ್ ಬರೋದಿಲ್ಲವಂತೆ.!
ಅದರಲ್ಲಿ ಕೆಲವು ಬ್ರ್ಯಾಂಡೆಂಡ್ ಮಾಲ್-ನ್ನು ಕಳ್ಳತನ ಮಾಡಿ ಕಡಿಮೆ ಬೆಲೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಎಸ್.ಪಿ.ರೋಡ್, ಕೆ.ಆರ್.ಮಾರ್ಕೆಟ್ ನಲ್ಲಿಯೂ ರಾಶಿ ರಾಶಿ ಎಲೆಕ್ಟ್ರಿಕ್ ವಸ್ತುಗಳನ್ನು ಕಾಣುತ್ತೇವೆ. ಮೆಜೆಸ್ಟಿಕ್ಗೆ ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ. ಇಲ್ಲಿನ ಅಂಡರ್ ಪಾಸ್ನಲ್ಲಿ ಮೊಬೈಲ್ಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಮಾರಾಟವಾಗುತ್ತವೆ. ಇವುಗಳಲ್ಲಿ ಹೆಚ್ಚಿನ ವಸ್ತುಗಳು ನಕಲಿ ವಸ್ತುಗಳೇ ಆಗಿದೆ ಎನ್ನಲಾಗಿದೆ. ಇಂತಹ ವಸ್ತುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿವೆ. ಆರೋಗ್ಯದ ಮೇ ದುಷ್ಪರಿಣಾಮ ಬೀರುತ್ತದೆ. ಸ್ಮಾರ್ಟ್ ಫೋನ್ಗಳ ನಕಲಿ ಚಾರ್ಜರ್ ಗಳು ಸ್ಫೋಟವಾಗುವ ಸಾಧ್ಯತೆ ಹೆಚ್ಚು. ಹೀಗೆ ಸ್ಫೋಟವಾದಾಗ ಕಣ್ಣು ಸೇರಿದಂತೆ ದೇಹದ ಇತರೆ ಭಾಗಗಳಿಗೆ ಗಾಯವಾಗುತ್ತದೆ. ನಕಲಿ ಇಯರ್ ಫೋನ್, ಹೆಡ್ ಫೋನ್ ಹಾಕುವುದರಿಂದ ಕಿವಿಯಲ್ಲಿ ರಕ್ತ ಸೋರಬಹುದು ಎಂದು ವೈದ್ಯರು ತಿಳಿಸಿದ್ದಾರೆ.