ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸುತ್ತಿರುವ ನಮ್ಮ ಬೆಂಗಳೂರು. ಈಗ ಇಡೀ ವಿಶ್ವದಲ್ಲೇ ನಂಬರ್ ಒನ್…

0
846

ಬೆಂಗಳೂರು ಅಭಿವೃದ್ಧಿ ವಿಷಯದಲ್ಲಿ ಭಾರತದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರ. ಗಾರ್ಡನ್ ಸಿಟಿ , ಸಿಲಿಕಾನ್ ಸಿಟಿ , ಐಟಿ ಹಬ್ ಅಂತಾನೆ ಸಾಕಷ್ಟು ಹೆಸರು ಮಾಡಿರೋ ಈ ಮಹಾನಗರಕ್ಕೆ ಸರಿಸಾಟಿ ಮತ್ತೊಂದಿಲ್ಲ ಅಂತ ಈ ಹೊಸ ಸಾಧನೆಯ ಮೂಲಕ ವಿಶ್ವಕ್ಕೆ ಸಾರಿಹೇಳುತ್ತಿದೆ. ಆ ಸಾಧನೆಯಾದ್ರೂ ಯಾವುದು ಅಂತೀರಾ , ಇಲ್ಲಿದೆ ನೋಡಿ , ಗಾರ್ಡನ್ ಸಿಟಿ ಬೆಂಗಳೂರು ಈಗ ಡಿಜಿಟಲ್ ಟ್ರಾನ್ಸ್ಫರ್ಮೆಶನ್ ವಿಷಯದಲ್ಲಿ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋವನ್ನು ನಗರವನ್ನೇ ರೇಸ್ನಲ್ಲಿ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

” The Economist Intelligency Unit ” ಬಿಡುಗಡೆ ಮಾಡಿದ ವಿಶ್ವದ ೪೫ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಸಿಕ್ಕಿದೆ. ಡಿಜಿಟಲ್ ಪರಿಸರದಲ್ಲಿ ಉದ್ಯಮ ವಿಶ್ವಾಸ ವಿಷಯಕ್ಕೆಸಂಬಂಧಪಟ್ಟಂತೆ ಪ್ರಸ್ತುತ ಈಗ ಇರುವ ಪರಿಸರದಲ್ಲಿ ಕೌಶಲ್ಯ ಮತ್ತು ಮೂಲಭೂತ ಸೌಕರ್ಯಗಳ ಆಧಾರದ ಮೇಲೆ ಈ ಪಟ್ಟಿಯನ್ನು ಪ್ರಕಟಿಸಿದೆ.

ಎರಡು , ಮೂರು , ಮತ್ತು ನಾಲ್ಕನೇ ಸ್ಥಾನವನ್ನು ಕ್ರಮವಾಗಿ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ , ಭಾರತದ ವಾಣಿಜ್ಯ ನಾಗರಿಯೆಂದೇ ಪ್ರಸಿದ್ದಿ ಹೊಂದಿರೋ ಮುಂಬೈ , ರಾಜಧಾನಿ ದೆಹಲಿ ಪಡೆದುಕೊಂಡಿದೆ. ಚೀನಾದ ರಾಜಧಾನಿ ಬೀಜಿಂಗ್ ಈ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜರ್ಮನಿಯ ಬರ್ಲಿನ್ ,ಜಪಾನ-ನ ಯೋಕೋಹಾಮಾ ಹಾಗೂ ಟೋಕಿಯೋ, ತೈವಾನ್-ನ ತೈಪೆ , ನೆದರ್‍ಲ್ಯಾಂಡ್-ನ ರೋಟರ್ಡಮ್ , ಇಂಗ್ಲೆಂಡ್-ನ ಲಂಡನ್ , ಮತ್ತು ಸ್ಪೇನ್-ನ ಮ್ಯಾಡ್ರಿಡ್ ಮಹಾನಗರಗಳು ನಂತರದ ಸ್ಥಾನದಲ್ಲಿವೆ.

ಅಂದಹಾಗೆ ಈ ಸಮೀಕ್ಷೆ ಜೂನ್ ಮತ್ತು ಜುಲೈ ತಿಂಗಳಲ್ಲಿ ೪೫ ಮಹಾ ನಗರಗಳ ೨೬೪೦ ಕಾರ್ಯನಿರ್ವಹಣಾಧಿಕಾರಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. Employment , Invention , Skill ಹೊಂದಿರುವ ಜನ, ಹೊಸ ತಂತ್ರಜ್ಞಾನ ಬೆಳವಣಿಗೆ, ಆರ್ಥಿಕ ವಾತಾವರಣ, ಮಾಹಿತಿ ಸಂವಹನ ತಂತ್ರಜ್ಞಾನ(ಐಸಿಟಿ) ಸೌಕರ್ಯಗಳ ವಿಚಾರಗಳನ್ನು ಅಧ್ಯಯನಕ್ಕೆ ಪರಿಗಣಿಸಿ ನಗರಗಳಿಗೆ ಶ್ರೇಯಾಂಕ ಪಟ್ಟಿಯನ್ನು ನೀಡಲಾಗಿದೆ.

ಬೆಂಗಳೂರಿನ ಈ ಸಾಧನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಗೆ ಒಂದು ದೊಡ್ಡ ಕೊಡುಗೆಯಾಗಿದೆ.