ದೇಶದಲ್ಲಿ ನೀರು ವ್ಯರ್ಥ ಮಾಡುವ ಮೆಗಾ ಸಿಟಿಗಳಲ್ಲಿ ಬೆಂಗಳೂರು ಎರಡನೇ ಸ್ಥಾನಕ್ಕೆ; ಬರಿ ಕಾರ್ ವಾಶ್ ಮಾಡಲು 50 ಬೆಲ್ಲಂದೂರು ಸರೋವರದಷ್ಟು ನೀರು ಬೇಕಂತೆ.!

0
237

ದೇಶದಲ್ಲಿ ಸಾಕಷ್ಟು ನೀರು ಬಳಕೆಗಿಂತ ವ್ಯರ್ಥವಾಗುತ್ತಿರುವುದು ಬೇಸರದ ಸಂಗತಿ, ಮನೆಗೆ ಬೇಕಾಗುವಷ್ಟು ನೀರನ್ನು ಬಿಟ್ಟು ಇತರೆ ಕೆಲಸಕ್ಕೆ ಸಾಕಷ್ಟು ನೀರು ವ್ಯರ್ಥವಾಗಿ ಹೋಗುತ್ತಿದೆ. ಅದರಲ್ಲಿ ಹೆಚ್ಚು ವಾಹನಗಳ ಸ್ವಚ್ಚತ್ತೆಗೆ ಹಾಳಾಗುತ್ತಿದೆ. ಇದು ದೇಶದ ಎಲ್ಲ ನಗರಗಳಲ್ಲಿ ಆಗುತ್ತಿರುವ ನೀರು ವ್ಯರ್ಥ ಎಂದೇ ಹೇಳಬಹುದು. ಅದರಲ್ಲಿ ಮೆಗಾ ಸಿಟಿ ಎಂದು ಕರೆಸಿಕೊಳ್ಳುವ ಹಲವು ನಗರಗಳ ಪರಿಸ್ಥಿತಿ ಹೇಗಿದೆ ಎಂದರೆ ಕೆಲವೇ ವರ್ಷಗಳಲ್ಲಿ ಕುಡಿಯಲು ನೀರು ಸಿಗದ ಪರಿಸ್ಥಿತಿಯಲ್ಲಿವೆ. ಈ ಕುರಿತು ಹಲವು ಜಾಗೃತಿ ತಿಳಿಸಿದರು ನೀರು ಉಳಿಸಲು ಯೋಚನೆಗ ಮಾಡದೇ ಇರುವುದು ಇನ್ನಷ್ಟು ಬೇಸರದ ಸಂಗತಿ. ಈ ಕುರಿತು ಅಧ್ಯಯನಯೊಂದು ನಡೆದಿದ್ದು ದೇಶದಲ್ಲೇ ನೀರು ವ್ಯರ್ಥ ಮಾಡುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಅಂತೆ.

Also read: ಕರ್ನಾಟಕ ಉಪ ಚುನಾವಣೆ ದಿನಾಂಕ ಫಿಕ್ಸ್; ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಹಾಗಾದ್ರೆ ಅನರ್ಹ ಶಾಸಕರ ಗತಿ ಏನು??

ನೀರು ವ್ಯರ್ಥದಲ್ಲಿ ಬೆಂಗಳೂರು ಎರಡನೇ ಸ್ಥಾನ?

ಹೌದು ಬೆಂಗಳೂರಿನಲ್ಲಿ ನೀರು ಸಾಕಷ್ಟು ವ್ಯರ್ಥವಾಗುತಿದೆ. ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ರತಿಯೊಬ್ಬರೂ ಯಾವುದಕ್ಕೆ ಎಷ್ಟು ನೀರು ವ್ಯರ್ಥ ಮಾಡುತ್ತಿದ್ದಾರೆ ಎನ್ನುವುದು ಸುಲಭವಾಗಿ ಕಂಡು ಬರುತ್ತಿದೆ ಅದರಂತೆ ಲೆಕ್ಕಹಾಕಿದರೆ ಸಾಕಾಗುವಷ್ಟು ನೀರು ಸಿಗಬಹುದು ಆದರೆ ಇತರೆ ಕೆಲಸಕ್ಕೆ ಬಳಸುವ ನೀರೆ ಹೆಚ್ಚು ವ್ಯರ್ಥವಾಗುತ್ತಿದೆ ಎನ್ನಬಹುದು. ಈ ಕುರಿತು ಕಾರ್ಟಿಸನ್, ಆಟೋಮೋಟಿವ್ ಸರ್ವೀಸಸ್ ಮಾರ್ಕೆಟ್‌ಪ್ಲೇಸ್ ಸ್ಟಾರ್ಟ್ಅಪ್, ಅಧ್ಯಯನ ನಡೆಸಿದ್ದು. ಭಾರತದ ಮೆಗಾ ನಗರಗಳಲ್ಲಿ, ಬೆಂಗಳೂರು ಅತಿ ಹೆಚ್ಚು ನೀರು ವ್ಯರ್ಥ ಮಾಡುವ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.

Also read: ಯಡಿಯೂರಪ್ಪ ಪತ್ನಿ ಅನುಮಾನಾಸ್ಪದ ಸಾವಿನ ಬಗ್ಗೆ ಎಚ್ ಡಿಕೆ ಪ್ರಸ್ತಾಪ; ಇನ್ನು ಎರಡ್ಮೂರು ತಿಂಗಳಲ್ಲಿ ಬಿಎಸ್‌ವೈ ಸರ್ಕಾರ ಪತನ ಕುಮಾರಸ್ವಾಮಿ ಭವಿಷ್ಯ.!

ಕಾರ್ಟಿಸನ್ ತನ್ನ ಇತ್ತೀಚಿನ ಅಧ್ಯಯನದಲ್ಲಿ, “ಒಟ್ಟು 1,300 ಎಮ್‌ಎಲ್‌ಡಿ (ದಿನಕ್ಕೆ ಮಿಲಿಯನ್ ಲೀಟರ್) ನೀರು ಸರಬರಾಜಿನಲ್ಲಿ, ನಗರದ ಶೇಕಡಾ 40 ಕ್ಕಿಂತ ಹೆಚ್ಚು ನೀರು ವ್ಯರ್ಥವಾಗುತ್ತಿದೆ, ಅದರಲ್ಲಿ 250 ಎಂಎಲ್‌ಡಿಗಿಂತ ಹೆಚ್ಚು ಸೋರಿಕೆ ಮತ್ತು ಮನೆಯ ವ್ಯರ್ಥದಿಂದಾಗಿ ಕಳೆದುಹೋಗಿದೆ, ಆದರೆ ನಗರವು ಇನ್ನೂ 150 ಎಂಎಲ್‌ಡಿ ಕೊರತೆಯನ್ನು ಎದುರಿಸುತ್ತಿದೆ. ಅದರಲ್ಲಿ ಕಾರ್ ವಾಶ್ ಸಮಯದಲ್ಲಿ ವ್ಯರ್ಥವಾಗುವ ನೀರು ಲೆಕ್ಕಿಸಿದ ಕಾರ್ಟಿಸನ್ ಸಂಸ್ಥಾಪಕ ವೆಂಕಟ್ ಶ್ರೀರಾಮ್ ಅವರು ಕಳವಳ ವ್ಯಕ್ತ ಪಡಿಸಿದ್ದಾರೆ.

Also read: ಇನ್ಮುಂದೆ BMTC ಬಸ್-ಗಳಲ್ಲಿ ಮೊಬೈಲ್ ಬಳಸುವಂತಿಲ್ಲ; ಏನಿದು ಹೊಸ ನಿಯಮ ಇಲ್ಲಿದೆ ನೋಡಿ ಮಾಹಿತಿ.!

ಹೌದು “ನೀವು ಎಂದಾದರೂ ಕಾರನ್ನು ತೊಳೆಯುವಾಗ ಎಷ್ಟು ನೀರನ್ನು ಸೇವಿಸುತ್ತೀರಿ? ಸಾಮಾನ್ಯವಾಗಿ ವಾಟರ್ ವಾಶ್ ಮಾಡುವಾಗ ತಲಾ 10 ಲೀಟರ್ ಹಿಡಿಸುವ 10 ಬಕೆಟ್ ನೀರನ್ನು ತೆಗೆದುಕೊಳ್ಳುತ್ತದೆ ಅಂದರೆ ಸರಾಸರಿ 100 ಲೀಟರ್ ನೀರು, ಹಾಳಾಗುತ್ತೆ. ಎಂದು ತಿಳಿದಿದೆ. ಅದರಂತೆ ಬೆಂಗಳೂರಿನಲ್ಲಿ 10 ಲಕ್ಷ ಕಾರುಗಳಿದ್ದು, ವಾರಕ್ಕೆ 10 ಕೋಟಿ ಲೀಟರ್ ನೀರನ್ನು ಕಾರು ತೊಳೆಯಲು ಬಳಸಲಾಗುತ್ತದೆ ಎಂದು ಅಂದಾಜಿಸಲಾಗಿದೆ, ಇದು ಬೆಲ್ಲಂದೂರು ಸರೋವರವನ್ನು 50 ಬಾರಿ ಖಾಲಿ ಮಾಡಲು ಸಮನಾಗಿರುತ್ತದೆ. ಅದಕ್ಕಾಗಿ “ಪ್ರತಿದಿನ 14 ಮಿಲಿಯನ್ ಲೀಟರ್ ನೀರನ್ನು ವ್ಯರ್ಥವಾಗದಂತೆ ಉಳಿಸಲು, ಕಾರ್ಟಿಸನ್ ಪರಿಸರ ಸ್ನೇಹಿ ಕಾರ್ ವಾಶ್ ಅಭಿಯಾನವನ್ನು ಉತ್ತೇಜಿಸಲು ಪ್ರಾರಂಭಿಸಿದೆ. ಇದು ನೀರನ್ನು ಉಳಿಸುವುದಲ್ಲದೆ ನಿಮ್ಮ ಕಾರಿನ್ನು ಕೂಡಾ ಉತ್ತಮ ಸ್ಥಿತಿಯಲ್ಲಿರಿಸುತ್ತದೆ ”ಎಂದು ವೆಂಕಟ್ ಶ್ರೀರಾಮ್ ತಿಳಿದ್ದಾರೆ.