ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಯಾವಾಗ?

0
961

Kannada News | kannada Useful Tips

ಬೆಂಗಳೂರು ದಿನೇ ದಿನೇ ವಿಸ್ತಾರವಾಗಿ ಬೆಳಿಯುತ್ತಿರುವ ನಗರ. ಐಟಿ, ಬಿಟಿ, ಕಂಪನಿಗಳನ್ನು ಹೊಂದಿರುವ ಉದ್ಯಾನ ನಗರಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ ಬೆಂಗಳೂರಿನ ಟ್ರಾಫೀಕ್ ಸಮಸ್ಯೆ ನುಂಗಲಾರದ ತುತ್ತಾಗುತ್ತಿದೆ.

Image result for bangalore traffic

ನಗರಗಳು ಬೆಳೆದಂತೆ ಸೌಕರ್ಯಗಳು ಬೆಳೆಯುತ್ತವೆ. ರಸ್ತೆ, ಚರಂಡಿ, ನೀರು, ವಿದ್ಯುತ್, ಜನರಿಗೆ ಹೇರಳವಾಗಿ ಬೇಕು. ಕರ್ನಾಟಕದ ಜನಸಂಖ್ಯೆಯಲ್ಲಿ, ರಾಜಧಾನಿಯ ಕೊಡುಗೆ ಇದೆ. ಭಾರತದಲ್ಲಿ ಮುಂಬೈ, ದೆಹಲಿ, ಕೋಲ್ಕೊತಾ ನಗರಗಳು ಬೆಳೆದು ಜಾಗತಿಕ ಹೂಡಿಕೆದಾರರನ್ನು ಕೈ ಬೀಸಿ ಕರೆಯುತ್ತವೆ. ಆ ನಗರದಲ್ಲಿ ಸೌಲಭ್ಯಗಳು ಸಹ ಉದ್ಯಮಿಗಳನ್ನು ತನ್ನತ್ತವಾಲುವಂತೆ ಮಾಡಿದೆ. ಬೆಂಗಳೂರು ಸಹ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಟ್ರಾಫೀಕ್ ಸಮಸ್ಯೆ ನಗರವಾಸಿಗಳನ್ನು ಬೆಂಬಿಡದೆ ಕಾಡುತ್ತದೆ.

3

ವಾಯುಮಾಲಿನ್ಯ ಜನರ ನಿದ್ದೇ ಗೆಡಿಸಿದೆ. ಇದರಿಂದ ಜನ ಒಂದಿಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಬೆಂಗಳೂರಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮುಂಬೈ, ಟ್ರಾಫಿಕ್ ಸಮಸ್ಯೆಗೆ ಹಲವು ನಿವಾರಣೆಗಳನ್ನು ಕಂಡುಕೊಂಡಿದೆ. ಮುಂಬೈ ಲೋಕಲ್ ರೈಲ್ವೆ ಸೇವೆಗಳಿಂದಲೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನರನ್ನು ತಲುಪಿಸುತ್ತದೆ. ಇದರಿಂದ ಮಾಯಾನಗರಿಯಲ್ಲಿ ದ್ವಿಚಕ್ರವಾಹನಗಳ ಸಂಖ್ಯೆ ಕೊಂಚ ಕಡಿಮೆ.

ನಮ್ಮ ಬೆಂಗಳೂರಿನಲ್ಲೂ ಸರ್ಕಾರ ಏಕೆ, ಸ್ಥಳೀಯ ರೈಲುಗಳನ್ನು ಓಡಿಸುವ ಚಿಂತನೆಯನ್ನು ನಡೆಸಬಾರದು. ಹೀಗೆ ಆದಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತದೆ. ಮೆಟ್ರೋ ಸೌಲಭ್ಯವಿದ್ದರೂ, ಇದರ ಲಾಭ ಬೆಂಗಳೂರಿನ ಎಲ್ಲ ನಿವಾಸಿಗಳಿಗೆ ಸಿಗುವುದು ಕಷ್ಟ. ಸರ್ಕಾರ ಸಹ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಲ್ಲಿ ಮಾತ್ರ ಭವಿಷ್ಯದ ಯೋಜನೆಗಳಿಗೆ ನಾಂದಿ ಹಾಡಿದಂತೆ ಆಗುತ್ತದೆ.

Also Read: ಮಹಾಭಾರತದ ಕಾಲಾವಧಿಯಲ್ಲಿ ಗಗನಯಾನ ಸರ್ವೇ-ಸಾಮಾನ್ಯವಾಗಿತ್ತ??