ಜೇವನದಲ್ಲಿ ಕಷ್ಟಪಟ್ಟರೆ ಬಡತನದಲ್ಲಿ ಇರುವವರೂ ಮುಂದೊಂದು ದಿನ ಶ್ರೀಮಂತರಾಗಬಹುದು ಅನ್ನೋದಕ್ಕೆ ಉದಾಹರಣೇನೇ ಬನ್ವಾರಿ ಲಾಲ್ ಮಿತ್ತಲ್!!!

1
1318

ಒಂದು ನಯಪೈಸೆಯೂ ಇಲ್ಲದೆ 150 ಕೋಟಿ. ರೂ ಮೌಲ್ಯದ ಕಂಪೆನಿಯಿಯನ್ನು ಸ್ಥಾಪಿಸೋದು ಹೇಗೆ ಎಂಬುದನ್ನು ಜಗತ್ತಿಗೆ ತೋರಿಸಿದರು ಇವರು. ಪರಿಶ್ರಮದ ಜೊತೆ-ಜೊತೆಗೆ ಎಲ್ಲರಿಗಿಂತ ಭಿನ್ನವಾಗಿ ಯೋಚಿಸೋದರಿಂದ ಎಷ್ಟೆಲ್ಲ ಲಾಭ ಆಗುತ್ತದೆ ಅಂತ ಇವರು ತೋರಿಸಿದ್ದಾರೆ. ಹೆಸರು ಬನ್ವಾರಿ ಲಾಲ್ ಮಿತ್ತಲ್, ಹುಟ್ಟಿದ್ದು 1 ಜುಲೈ 1968 , ದಂತ ಗ್ರಾಮ, ಶಿಖರ್ ಜಿಲ್ಲೆ ರಾಜಸ್ಥಾನದ ಒಂದು ಮಧ್ಯಮ ವರ್ಗದ ಪರಿವಾರದಲ್ಲಿ. ಇವರ ತಂದೆ ದಿವಂಗತ ಸನ್ವಾರ್ ಲಾಲ್ ಮಿತ್ತಲ್ ಕೊಲ್ಕತ್ತಾದಲ್ಲಿ ಸಣ್ಣ ಬಟ್ಟೆ ವ್ಯಾಪಾರಿ, ತಾಯಿ ಗೃಹಿಣಿ, ಸನ್ವಾರ್ ಲಾಲ್ ಅವರ 6 ಮಕ್ಕಳಲ್ಲಿ ಬನ್ವಾರಿ ಲಾಲ್ ಮಿತ್ತಲ್ 5 ನೇ ಯವರು.

1988 ರಲ್ಲಿ ದಂತ ಗ್ರಾಮದ ಸರ್ಕಾರಿ ಪ್ರಾಥಮಿಕ ಶಿಕ್ಷಣ ಮುಗಿಸಿದರು ಊರಿನಲ್ಲಿ ಹೆಚ್ಚಿನ ಓದಿಗೆ ಅನುಕೂಲವಿಲ್ಲದ ಕಾರಣ ಕೊಲ್ಕತ್ತಾ-ದಲ್ಲಿ ಕಾಲೇಜಿಗೆ ಸೇರಿದರು, ಇವರ ತಂದೆ ನಿನ್ನ ಖರ್ಚನ್ನು ನೀನೆ ನೋಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಿ, ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ ಏನಾದರು ದೊಡ್ಡದನ್ನು ಸಾಧಿಸು ಎಂದು ಆಶೀರ್ವದಿಸಿದರು. ತಂದೆಯ ಜೊತೆ ಕೊಲ್ಕತ್ತಾ-ದ ಬುರ್ರಾಬಝರ್-ನಲ್ಲಿ ಒಂದು 200 sq.ft ಜಾಗದಲ್ಲಿ ವಾಸಿಸುತ್ತಿದ್ದ ಇವರು, ನಗರದ ಉಮೇಶ್ಚಂದ್ರ ಕಾಲೇಜು-ನಲ್ಲಿ ವಾಣಿಜ್ಯ ವಿಷಯದ ಅಧ್ಯಯನ ಶುರುಮಾಡಿದರು, ಇದರ ಜೊತೆ-ಜೊತೆಗೆ ಚಾರ್ಟೆಡ್ ಅಕೌಂಟೆನ್ಸಿ ವ್ಯಾಸಂಗಕ್ಕಾಗಿ ಟ್ಯೂಷನ್ ಸೇರಿದಲ್ಲದೆ ಖರ್ಚಿಗಾಗಿ ಹಿಂದಿ ಟೈಪಿಂಗ್ ಕೆಲಸ ಸೇರಿದರು, ಆಗ ಕೊಲ್ಕತ್ತಾ-ದಲ್ಲಿ ಹಿಂದಿ ಟೈಪಿಸ್ಟ್-ಗಳ ಅವಶ್ಯಕತೆ ತುಂಬಾನೇ ಇತ್ತು ಇದಕ್ಕಾಗಿ ಅವರಿಗೆ ತಿಂಗಳಿಗೆ 1800 .ರೂ ಸಂಬಳ ಸಿಗುತ್ತಿತ್ತು.

ಬನ್ವಾರಿ ಲಾಲ್ ಅವರ ನಿತ್ಯ ಬೆಳ್ಳಗೆ 6 ರಿಂದ 11 ಗಂಟೆಯವರೆಗೆ ಕಾಲೇಜಿಗೆ ಹೋಗಿ, ಮಧ್ಯಾಹ್ನ CA ಟ್ಯೂಷನ್ ಅಟೆಂಡ್ ಆಗಿ ನಂತರ ಸಾಯಂಕಾಲ ಹಿಂದಿ ಟೈಪಿಂಗ್ ಕೆಲಸಕ್ಕೆ ಹೋಗುತ್ತಿದ್ದರು, ಇಷ್ಟು ಬಿಡುವಿಲ್ಲದ ಸಮಯದ ನಡುವೆಯು ಹೇಗೂ ಕಾಲೇಜು ಮುಗಿಸಿದರು. ಇವರು ಪಟ್ಟ ಪರಿಶ್ರಮ ವ್ಯರ್ತವಾಗಲಿಲ್ಲ, 1992 ರಲ್ಲಿ ಪ್ರತಿಷ್ಠಿತ “ಬಿರ್ಲಾ ಗ್ರೂಪ್” ಇವರನ್ನು ತೆರಿಗೆ ಮತ್ತು ಹಣಕಾಸು ವ್ಯವಸ್ಥಾಪಕನಾಗಿ ನೇಮಿಸಿಕೊಂಡಿತು, ಇಲ್ಲಿ ಇವರಿಗೆ ತಿಂಗಳಿಗೆ 4000 .ರೂ ಸಂಬಳ, ಇದರ ನಡುವೆ 1996 ರಲ್ಲಿ ಅಭಾ ಮಿತ್ತಲ್ ಅವರನ್ನು ಮದುವೆಯಾದರು ಈ ದಂಪತಿಗೆ ಈಗ ಒಬ್ಬ ಗಂಡು ಮಗ ಹಾಗು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬಿರ್ಲಾ ಗ್ರೂಪ್ ಕಂಪನಿಯಲ್ಲಿ 8 ವರ್ಷ ಸುಧೀರ್ಘ ಕಾರ್ಯನಿರ್ವಹಿಸಿದ ಇವರು ಏನಾದರು ಸಾಧಿಸಬೇಕೆಂದು 2000 ರಲ್ಲಿ ಕೆಲಸಕ್ಕೆ ವಿರಾಮ ಹೇಳಿದರು ಆಗ ಅವರ ಸಂಬಳ 25000 .ರೂ ಆಗಿತ್ತು.

2002- ಮೈಕ್ರೋಸೆಕ್ ಫೈನಾನ್ಷಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಸ್ಟಾಕ್ ಬ್ರೋಕಿಂಗ್, ವ್ಯಾಪಾರಿ ಬ್ಯಾಂಕಿಂಗ್ ಮತ್ತು ಹಣಕಾಸು ಸಲಹೆಯಲ್ಲಿ ತೊಡಗಿರುವ ಹಣಕಾಸು ಕಂಪನಿ ಸ್ಥಾಪಿಸಿದರು. ಇದರಲ್ಲಿ ಇವರ ಒಟ್ಟು ಹೂಡಿಕೆ 2.5 ಕೋಟಿ.ರೂ, ತಮ್ಮ ಸಂಬಳದಿಂದ ಕೂಡಿಟ್ಟ 80 ಲಕ್ಷದ ಜೊತೆಗೆ 1.7 ಕೋಟಿ.ರೂಪಾಯಿಗಳನ್ನು ಗೆಳೆಯನ ಹತ್ತಿರ ವಾರ್ಷಿಕವಾಗಿ ಶೇ.15 ರಂತೆ ಸಾಲ ಪಡೆದರು. 60 ಲಕ್ಷ ವೆಚ್ಚದಲ್ಲಿ ಕಾಮಾಕ್ ಸ್ಟ್ರೀಟ್-ನಲ್ಲಿ 2500 sq.ft ಆಫೀಸ್ ಜಾಗ ಖರೀದಿಸಿದರು, ಆರಂಭದಲ್ಲಿ ಕೇವಲ ಮೂರೇ ಜನ ಸಿಬ್ಬಂದಿಗಳಿದ್ದರು.

  • 2005- ವ್ಯಾಪಾರ ವೃದ್ಧಿಗೊಂಡ ನಂತರ ಬಲಲಿಗುಂಗೆ ದಕ್ಷಿಣ ಕೊಲ್ಕತ್ತಾದಲ್ಲಿ 3.5 ಕೋಟಿ.ರೂ ವೆಚ್ಚದಲ್ಲಿ 10000 sq.ft ಆಫೀಸ್ ಜಾಗ ಖರೀದಿಸಿ ಸ್ಥಳಾಂತರಿಸಿದರು.
  • 2010- ಇವರ ವಹಿವಾಟು 45 ಕೋಟಿ.ರೂ ಆಯಿತು, ಆದರೆ 2011 ಕಲ್ಲಿದ್ದಿಲು ಹಗರಣ ಆದ ಮೇಲೆ ಇವರಿಗೆ ಸ್ವಲ್ಪ ಹೊಡೆತ ಬಿದ್ದಿತು.
  • 2014- ಯೂರೋಪ್ ಕಂಡವನ್ನು ಸಂಚರಿಸಿದ ಬನ್ವಾರಿ ಲಾಲ್ ಅವರು ಆರೋಗ್ಯ ಮತ್ತು ಔಷದಿ ಕ್ಷೇತ್ರದ ಕುರಿತು ಸಮೀಕ್ಷೆ ನಡೆಸಿ ಜನರು ಫಾರ್ಮಸಿ ಕಂಪನಿಗಳಿಂದ ಮೋಸ ಹೋಗುತ್ತಿರುವುದನ್ನು ಗಮನಿಸಿ, ಒಂದು ಪಾರದರ್ಶಕ ಫಾರ್ಮಸಿ ಕಂಪನಿ ಸ್ಥಾಪಿಸಬೇಕೆಂದು ಯೋಚಿಸಿ, 2014 ರಲ್ಲಿ 150 ಕೋಟಿ.ರೂ ಗಳ ಹೂಡಿಕೆಯಲ್ಲಿ ಸಸ್ತಾಸುಂದರ್ ಎಂಬ ಇ-ಫಾರ್ಮಸಿ ಕಂಪನಿಯನ್ನು ಶುರುಮಾಡಿದರು, ಕಂಪೆನಿಗಾಗಿ ಕೊಲ್ಕತ್ತಾದಿಂದ 30 ಕಿ.ಮೀ ದೂರವಿರುವ ರಾಜರ್ಹಾತ್ ಎಂಬಲ್ಲಿ 40 ಲಕ್ಷದ ಮೌಲ್ಯದ ಜಾಗ ಖರೀದಿಸಿದ್ದಾರೆ ಮತ್ತು ಈ ಕಂಪನಿಗೆ, ತಮ್ಮ ಧೀರ್ಘ ಕಾಲದ ಸಿಬ್ಬಂದಿಯಾದ ರವಿಕಾಂತ್ ಶರ್ಮ ಅವರನ್ನು ಡೈರೆಕ್ಟರ್ ಆಗಿ ನೇಮಿಸಿದ್ದಾರೆ.
  • 2015 ಮತ್ತು 2016- ಸಸ್ತಾಸುಂದರ್ ಇ-ಫಾರ್ಮಸಿ ಕಂಪನಿ ಗ್ರಾಹಕರ ಮನೆ ಬಾಗಿಲಿಗೆ ಔಷಧಿಗಳನ್ನು ನೀಡುತ್ತ, ಕೇವಲ 15 ರಷ್ಟು ಮಾರ್ಜಿನ್-ನೊಂದಿಗೆ 2015 ರಲ್ಲಿ 20 ಕೋಟಿ ಮತ್ತು 2016 ರಲ್ಲಿ 63.5 ಕೋಟಿ ವಹಿವಾಟು ನಡೆಸಿ ದೇಶದಲ್ಲಿಯೇ ಒಂದು ದೊಡ್ಡ ಇ-ಫಾರ್ಮಸಿ ಕಂಪನಿಯಾಗಿ, ಯಶಸ್ವಿ ಕಂಪನಿಯಾಗಿ ಹೊರಹೊಮ್ಮಿತು.

 

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಂಪನಿ ಸ್ಥಾಪಿಸಿ, ಮುಂದಿನ 5 ವರ್ಷದಲ್ಲಿ 6000 ಕೋಟಿ.ರೂ ವಹಿವಾಟು ನಡೆಸಿ ದೇಶದ ಮಂಚೂಣಿ ಇ-ಫಾರ್ಮಸಿ ಕಂಪನಿಯಾಗುವುದೇ ಇವರ ಗುರಿಯಾಗಿದೆ. ಬನ್ವಾರಿ ಲಾಲ್ ಮಿತ್ತಲ್ ಅವರು ವರ್ಷಕ್ಕೊಮ್ಮೆ ನೇತ್ರದಾನ ಶಿಬಿರಗಳನ್ನು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕಾಗಿ ಧನ ಸಹಾಯ ಮತ್ತು ಆರೋಗ್ಯ ಕಿಟ್-ಗಳನ್ನು ನೀಡುತ್ತ ತಾವು ಸಾಮಾಜಿಕ ಸೇವೆಯಲ್ಲಿಯು ಹಿಂದೆ ಬಿದ್ದಿಲ್ಲ ಎಂದು ನಿರೂಪಿಸಿದ್ದಾರೆ.

ನಿಮ್ಮ ಕನಸುಗಳನ್ನು ನಂಬಿ ಅದರೆಡೆಗೆ ಸಾಗಲು ಕಷ್ಟಪಟ್ಟು ಕೆಲಸ ಮಾಡಿ ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿದರೆ   ಯಶಸ್ಸು ಖಂಡಿತ ಸಿಗುತ್ತದೆ ಎಂಬುದು ಇವರು ಯುವ ಜನರಿಗೆ ನೀಡುವ ಸಂದೇಶ…!