ಒಂದು ಕ್ಷೌರಕ್ಕೆ 125 ರೂ ಪಡೆಯುವ ರೋಲ್ಸ್ ರಾಯ್ಸ್ ಮಾಲೀಕ…

0
3949

ರಮೇಶ್ ಬಾಬು ಎಂಬ ಕ್ಷೌರಿಕ ಗ್ರಾಹಕರಿಂದ ಒಂದು ಕ್ಷೌರಕ್ಕೆ 125 ರೂ. ಪಡೆಯುತ್ತಾರೆ. ವಿಶೇಷ ಎಂದರೆ ಇವರ ಬಳಿ ರೋಲ್ಸ್ ರಾಯ್ಸ್ ಕಾರಿದೆ. 3.18 ಕೋಟಿ ರೂಪಾಯಿ ಬೆಲೆ ಬಾಳುವ ರೋಲ್ಸ್ ರಾಯ್ ಕಾರು ಹೊಂದಿರುವ ರಮೇಶ್ ಬಾಬು ಮೂಲತಃ ಕ್ಷೌರಿಕ ವೃತ್ತಿಯವರು. ಅಪ್ಪನ ಕಾಯಕವನ್ನು ಮುಂದುವರಿಸಿ, ಎರಡು ದಶಕಗಳಿಂದಲೂ ಕ್ಷೌರಿಕನಾಗಿ ದುಡಿಯುತ್ತಿರುವ ಅವರು ಇದೀಗ ಮೂರು ಹೈಟೆಕ್ ಸಲೂನ್‌ಗಳಲ್ಲಿ 16 ಜನರಿಗೆ ಉದ್ಯೋಗ ನೀಡಿದ್ದಾರೆ.

ramesh-babu_0_0

ರಮೇಶ್ ಬಾಬು ಬದುಕಿನ ಸಾಧನೆ ಸುರೇಶ್ ರೆಡ್ಡಿ ನಿರ್ದೇಶನದಲ್ಲಿ ‘ಕ್ಷೌರಿಕ ಎಂಥ ಸಾಧಕ’ ಎನ್ನುವ ಚಲನಚಿತ್ರ ನಿರ್ಮಾಣಕ್ಕೂ ಸ್ಫೂರ್ತಿಯಾಗಿದೆ. ತಮ್ಮದೇ ಟ್ರಾವೆಲ್ಸ್ ಏಜೆನ್ಸಿ ಕಟ್ಟಿ 60 ಕಾರುಗಳಿಗೆ ಮಾಲೀಕರಾಗಿದ್ದಾರೆ. ಕಾರುಗಳ ಬಗ್ಗೆ ಅಗಾಧ ಮೋಹ ಹೊಂದಿದ್ದ ರಮೇಶ್ ಬಾಬು, ದುಡಿಮೆ ಹೆಚ್ಚುತ್ತಿದ್ದಂತೆ ಒಂದಾದ ನಂತರ ಒಂದು ಕಾರುಗಳನ್ನು ಖರೀದಿಸತೊಡಗಿದರು. 2001ರಲ್ಲಿ ಗೆಳೆಯರೊಬ್ಬರ ಸಲಹೆಯಂತೆ ಕಾರುಗಳನ್ನು ಬಾಡಿಗೆಗೆ ನೀಡ ತೊಡಗಿದರು. ಇಂದು ಅದೆಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಅಂದ್ರೆ ರಮೇಶ್ ಬಳಿ ಇದೀಗ 200ಕ್ಕೂ ಹೆಚ್ಚು ಲಕ್ಸುರಿ ಕಾರುಗಳಿವೆ.

ramesh-babu2-1451287839

ರಮೇಶ್ ಟೂರ್ಸ್‌ ಆಂಡ್ ಟ್ರಾವೆಲ್ಸ್ ಸಂಸ್ಥೆ ಸ್ಥಾಪಿಸಿ ಕಾರ್ಪೊರೇಟ್ ಸಂಸ್ಥೆಗಳಿಗೆ ಲಕ್ಷುರಿ ಕಾರುಗಳನ್ನು ಬಾಡಿಗೆಗೆ ನೀಡತೊಡಗಿದರು. 2003ರಲ್ಲಿದ್ದ ಎಂಟು ಕಾರು ಈಗ 128ಕ್ಕೇರಿದೆ. 2004ರಲ್ಲಿ 40 ಲಕ್ಷ ರೂ. ವೌಲ್ಯದ ಮರ್ಸಿಡಿಸ್ ಕಾರು ಖರೀದಿಸಿದರು. ಈಗ ಒಂಬತ್ತು ಮರ್ಸಿಡಿಸ್ ಕಾರಿದೆ (ಎಸ್ ಕ್ಲಾಸ್-1ಕೋಟಿ ರೂ. ವೌಲ್ಯ) . ಬಿಎಂಡಬ್ಲ್ಯು ನಾಲ್ಕು ಕಾರಿದೆ (7 ಸೀರೀಸ್‌ಗೆ ಒಂದು ಕೋಟಿ ರೂ. ವೌಲ್ಯ), ಕ್ಯಾಮ್ರಿ, ಟೊಯೋಟಾ ಕಮ್ಯೂಟರ್(60ಲಕ್ಷ ರೂ.) ಇತ್ಯಾದಿಗಳಿದ್ದರೆ 2011ರಲ್ಲಿ ರೋಲ್ಸ್ ರಾಯ್ಸ (ಹ್ಯಾಂಡ್ ಕ್ರಾಫ್ಟೆಡ್) 3.30 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ, ಇದರ ದಿನ ಬಾಡಿಗೆ ಎಂಟು ಗಂಟೆಗೆ(ಗರಿಷ್ಠ 80 ಕಿ. ಮೀ.)ಬರೇ 50,000 ರೂ.!
ಅವರ ಕಥೆ, ಅವರ ಮಾತಲ್ಲೇ ಕೇಳಿ

ಬಾಲಿವುಡ್‌‌ನ ಶಾರೂಖ್ ಖಾನ್, ಅಮಿತಾಬ್ ಬಚ್ಚನ್‌‌ರಂತಹ ಮಹಾನ್ ನಟರು ಬೆಂಗಳೂರಿಗೆ ಬಂದಾಗ, ರಮೇಶ್ ಅವರನ್ನು ಸಂಪರ್ಕಿಸಿ ಈ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಒಟ್ಟಿನಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಇದೆ ಅನ್ನೋದನ್ನ ರಮೇಶ್ ಎಂಬ ಶ್ರಮಜೀವಿ ನಿಜ ಮಾಡಿ ತೋರಿಸಿದ್ದಾರೆ. ಇಷ್ಟಾದರೂ ಪ್ರತೀ ದಿನ 15 ಜನರಿಗೆ ಕ್ಷೌರ ಮಾಡುವ ಮೂಲಕ ಅವರು ತಮ್ಮ ವೃತ್ತಿಗೆ ಗೌರವ ಸಲ್ಲಿಸುತ್ತಿದ್ದಾರಂತೆ.