ಮೋದಿಯಿಂದ ಅಂತರಾಷ್ಟ್ರೀಯ ಬಸವ ಜಯಂತಿ- 23 ಭಾಷೆಗಳಲ್ಲಿ ವಚನ ಮುದ್ರಣ ಪುಸ್ತಕ ಬಿಡುಗಡೆ

0
1476

ಬಸವಣ್ಣನವರ ತತ್ವ ಆದರ್ಶಗಳು ದೇಶಕ್ಕೆ ಮಾದರಿಯಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಬಸವ ಸಮಿತಿ ಮಹತ್ತರವಾದ ಹೆಜ್ಜೆಯಿಟ್ಟಿದೆ.

ರಾಜ್ಯ ಬಸವ ಸಮಿತಿಗೆ ಐವತ್ತು ವರ್ಷ ಆದ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಬಸವ ಜಯಂತಿ ಆಚರಿಸಲು ಬಸವ ಸಮಿತಿ ನಿರ್ಧರಿಸಿದೆ.
ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಮೊದಲ ಅಂತರಾಷ್ಟ್ರೀಯ ಬಸವ ಜಯಂತಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದೇ ವೇಳೆ 23 ರಾಜ್ಯದ ವಿವಿಧ ಭಾಷೆಗಳಲ್ಲಿ 2 ಸಾವಿರದ 500 ವಚನಗಳನ್ನು ಮುದ್ರಿಸಲಾಗಿದ್ದು ಈ ಪುಸ್ತಕವನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.

200ಕ್ಕೂ ಅಧಿಕ ಭಾಷಾ ತಜ್ಞರು ಸೇರಿ ತಯಾರು ಮಾಡಿರುವ ಈ ವಚನಗಳ ಬಂಢಾರ ಇಂಗ್ಲಿಷ್, ಹಿಂದಿ, ತಮಿಳು, ಉರ್ದು, ಸಂಸ್ಕೃತ, ತಮಿಳು ಹೀಗೆ 23 ಭಾಷೆಗಳಲ್ಲಿ ಪ್ರಕಟವಾಗಲಿದ್ದು ಬಸವಣ್ಣನವರ ತತ್ವಗಳನ್ನು ದೇಶದ ತುಂಬಾ ಹರಡುವ ಯೋಜನೆಗೆ ಬಸವ ಸಮಿತಿ ಮುಂದಾಗಿದೆ.