ಬಾವಲಿ ಗಳಿಂದ ಮನುಷ್ಯನಿಗೆ ಅನೇಕ ಲಾಭಗಳಿವೆ, ಬಾವಲಿಗಳಿಂದ ವೈರಸ್ ಹರಡುತ್ತಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿವೆಯಾ ಫಾರ್ಮಾ ಕಂಪನಿಗಳು??

0
896

ವರ್ಷದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ರೋಗಗಳು ಬರ್ತಾನೆ ಇರುತ್ತೆ, ಅಂತವೇ ರೋಗಗಳಾದ ಚಿಕನ್ ಗುನ್ಯಾ ಡೆಂಗು ಆ ಖಾಯಿಲೆ ಬರುವುದು ಬಾವಲಿ, ಪ್ರಾಣಿ, ಪಕ್ಷಿಗಳ ವೈರಸ್ ನಿಂದ ಎಂಬ ಸುಧಿಯೊಂದು ಹರಡುತ್ತೆ ಇದ್ದಕ್ಕೆ ಸರಿಯಾದ ಸಾಕ್ಷಾದ್ದಾರ ಇಲ್ಲದೆ ಇದೆನ್ನೆಲ್ಲ ನಂಬಿದ ಜನ್ರು ಪ್ರಾಣಿ ಪಕ್ಷಿಗಳ ವಿರುದ್ದ ಸರ್ಕಾರಕ್ಕೆ ಮೊರೆ ಹೋಗಿ ಕೋಟ್ಯಂತರ ಜೀವಿಗಳನ್ನು ನಿರ್ಣಾಮ ಮಾಡ್ತಾರೆ.

ನಿಜವಾದ ಅಂಶ ಹೇಗಿರುತ್ತೆ ಅಂದ್ರೆ ಕೆಲವೊಂದು ಜೀವಿಗಳಿಂದ ಪರಿಸರಕ್ಕೆ, ರೈತರಿಗೆ ತುಂಬಾನೇ ಉಪಯೋಗಗಳು ಇರುತ್ತೆ ಒಂದು ವೇಳೆ ಆ ಜೀವಿಗಳನ್ನು ಬಲಿ ತೆಗೆದುಕೊಂಡರೆ ದೊಡ್ಡಮೊತ್ತದಲ್ಲಿ ದುಷ್ಟಪರಿಣಾಮಗಳು ಬೀಳುವುದು ಗ್ಯಾರಂಟಿನೇ, ಸದ್ಯ ಇಂತಹದೇ ಒಂದು ಸುದ್ದಿಯಲ್ಲಿರುವ ನೆಫ್ಫ್ಯೂ ವೈರಸ್ ಬಾವಲಿಗಳಿಂದ ಹರಡುತ್ತಿದೆ, ಎಂಬ ಸುದ್ದಿಗೆ clarification ಇಲ್ಲದೆ ಬಾವಲಿಗಳನ್ನು ಕೊಂದು ಹಾಕುತ್ತಿದ್ದಾರೆ. ಅದೇ ಬಾವಲಿ ಇಲ್ಲಾಂದ್ರೆ ಪ್ರತಿಯೊಬ್ಬರೂ ಖಾಯಿಲೆಗೆ ತುತ್ತಾಗುವುದು ಸಂದೇಹವೇ ಇಲ್ಲ. ಹೌದು ಬಾವಲಿಗಳು ನಮ್ಮ ಪರಿಸರದ ಒಂದು ಮುಖ್ಯ ಜೀವಿ ಇವುಗಳು ಪರಿಸರದಲ್ಲಿರುವ ನಮಗೆ ಮಾರಕವಾದ ಸೊಳ್ಳೆ ಮತ್ತು ಇತರ ಜೀವಿಗಳನ್ನು ತಿನ್ನುತ್ತ ನಮಗೆ ಸಹಾಯ ಮಾಡುತ್ತೆ. ಅಂದ್ರೆ ಒಂದು ಪರಿಸರದಲ್ಲಿರುವ ಬಾವಲಿಗಳ ಗುಂಪು ಒಂದು ರಾತ್ರಿಯಲ್ಲಿ 250 kg ಕೃಷಿಗೆ ಮಾರಕವಾದ ಕೀಟಗಳನ್ನು ತಿನ್ನುತ್ತವೆ. ಒಂದು ಮರಿ ಬಾವಲಿ 600 ಸೊಳ್ಳೆಗಳನ್ನು ತಿನ್ನುತ್ತದೆ.

Also read: ಡೆಂಗ್ಯೂ ಖಾಯಿಲೆಯ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ವಿಷಯಗಳು.. ಮುಂಜಾಗ್ರತಾ ಕ್ರಮ ಪಾಲಿಸದಿದ್ದಲ್ಲಿ ಈ ರೋಗ ಮಾರಣಾಂತಿಕವಾಗಬಹುದು ಜಾಗ್ರತೆ…

ಇನ್ನೂ ವಿಚಿತ್ರ ಅಂದ್ರೆ ಇವು ಬೆಳೆಗಳಾದ ಬಾಳೆಹಣ್ಣು, ದ್ರಾಕ್ಷಿ, ತೆಂಗಿನ ಕಾಯಿ ತಿನ್ನುವ ಕೀಟವನ್ನು ಜಾಸ್ತಿ ತಿನ್ನುತ್ತವೆ. ಬಾವಲಿಗಳು ಹೆಚ್ಚಾಗಿ ಹಣ್ಣುಗಳನ್ನು ತಿನ್ನುವುದರಿಂದ 500 ಕ್ಕಿಂತಲೂ ಹೆಚ್ಚಿನ ಸಸ್ಯ ಪ್ರಬೇಧಗಳು ನಮ್ಮ ಭೂಮಿಯಲ್ಲಿ ಹರಡಲು ಸಹಾಯ ಮಾಡುತ್ತವೆ ಮತ್ತು ವಿಶೇಷವೆಂದರೆ ಬಾವಲಿಗಳ ಮಲದಲ್ಲಿ NITROGEN ಮತ್ತು Phosphorus ತುಂಬಾ ಅಧಿಕವಾಗಿರುತ್ತದೆ. ಇವೆರಡೂ ಭೂಮಿ ಮತ್ತು ಸಸ್ಯಗಳಿಗೆ ಅತ್ಯಗತ್ಯವಾದ ರಾಸಾಯನಿಕಗಳು. ಹೃದಯ ಮತ್ತು ರಕ್ತಕ್ಕೆ ಸಂಬದ ಪಟ್ಟ ಕಾಯಿಲೆಗಳಿಗೆ ಬಾವಲಿಯ ಎಂಜಲಿನಿಂದ ಔಷಧವನ್ನೂ ತಯಾರಿಸುತ್ತಾರೆ. ಆದ್ರೆ ಈ ನೆಫ್ಯೂ ವೈರಸ್ ಗೆ ಬಾವಲಿಯನ್ನೆ ಗುರಿಪಡಿಸಲಾಗುತ್ತಿದೆ, ಒಂದು ಕಾಲದಲ್ಲಿ ಇವೆ ಬಾವಲಿಗಳ ಎಂಜಲದ ಹಣ್ಣನ್ನು ತಿನ್ನುತ್ತಿದ್ದ ನಮಗೆ ಈ ರೋಗ ಬರುತಿರಲಿಲ್ಲ.

ಹಾಗೆಯೇ ನೆಫ್ಫ್ಯೂ ವೈರಸ್ ಗೇ ಬಾವಲಿಯೇ ಇದಕ್ಕೆ ಮೂಲ ಕಾರಣ ಎಂದು ದೃಢ ಪಟ್ಟಿಲ್ಲ. ಹಾಗೆ ಇನಿತ್ತರ ಜೀವಿಗಳಾದ ಹಂದಿ, ಕೊಳಿ, ಬಾವಿ ನೀರು ಇನ್ನಿತರ ಕಡೆಗಳಲ್ಲಿ ಕೂಡ ಈ ವೈರಸ್ ಕಂಡು ಬಂದಿದೆ ಆದರೂ ಕೂಡ ಬಾವಲಿಯ ವಿರುದ್ಧ ಮಾತ್ರ ಆರೋಪವಿದೆ. ಇದರಲ್ಲಿ ಫಾರ್ಮಾ ದೈತ್ಯರ ಕೈವಾಡ ಇರಬಹುದಲ್ಲ. ಎಂಬ ಸಂದೇಹವಿದೆ ಅಂತೆ. ಒಂದುವೇಳೆ ಕೈವಾಡ ಇದ್ರೆ ಈ ಫಾರ್ಮಾ ದೈತ್ಯರು ಹೇಗೆ ಲಾಭ ಪಡೆಯುತ್ತಾರೆಂಬ ಸಿಕ್ಕ ಮಾಹಿತಿ ಹೀಗಿದೆ.

ನೆಪ್ಯೂ ವೈರಸ್ ಗೆ ಬಾವಲಿ ಕಾರಣವೆಂದು ಇನ್ನು ಸರಿಯಾದ ಮಾಹಿತಿ ಏನಿಲ್ಲ ಆದ್ರೆ ಇದರ ಬಗ್ಗೆ ಸಾಕಷ್ಟು ಪ್ರಚಾರ ಆಗಿದೆ. ಇದರಿಂದ ಒತ್ತಡಕ್ಕೆ ಮಣಿದ ಸರ್ಕಾರ ಬಾವಲಿಗಳ ಮಾರಣಹೋಮ ಮಾಡಿದರೆ ಸ್ವಲ್ಪ ದಿನಗಳ ನಂತರ ಬಾವಲಿಗಳ ಕೊರತೆಯಿಂದಾಗಿ ಕೃಷಿಗೆ ಕೀಟಗಳ ಹಾವಳಿ ಜಾಸ್ತಿಯಾಗುತ್ತದೆ. ಕ್ರಿಮಿನಾಶಕ ರಾಸಾಯನಿಕಗಳ ಅನಿವಾರ್ಯವಾಗುತ್ತದೆ. ವಾತಾವರಣದಲ್ಲಿ ಮನುಷ್ಯನಿಗೆ ಮಾರಕವಾದ ಸೊಳ್ಳೆಗಳು ಮತ್ತು ಇತರ ಜಂತುಗಳು ಜಾಸ್ತಿಯಾಗುತ್ತದೆ. ಇದರಿಂದ ಆಸ್ಪತ್ರೆ ಔಷದಿ ಕೂಡಾ ಅನಿವಾರ್ಯವಾಗುತ್ತದೆ. ಇದರಿಂದ ಫಾರ್ಮಾ ದೈತ್ಯರ ವ್ಯಾಪಾರ ಹೆಚ್ಚಾಗುತ್ತದೆ. ಕ್ರಿಮಿನಾಶಕ ಔಷದಿಗಳ ಹೆಚ್ಚಾದ ಬಳಕೆಯಿಂದ ಒಳ್ಳೆಯ ವ್ಯಾಪಾರವಾಗುತ್ತೆ. ದೈತ್ಯರ ಜೇಬು ತುಂಬುತ್ತದೆ. ಆಗ ಇವರು ನೇಫ್ಯೂ ವೈರಸ್ ಮದ್ದು ಹೊರಗೆ ಹಾಕಿ ಇನ್ನಷ್ಟು ದುಡ್ಡು ಮಾಡಿ ಬೆಳೆಯುತ್ತಾರೆ. ಆದ್ದರಿಂದ ಈ ದೈತ್ಯ ಕಂಪೆನಿಗಳು ಬಾವಲಿಗಳ ವಿರುದ್ಧ ದೊಡ್ಡ ಷಡ್ಯಂತ್ರ ರಚಿಸಿರುವ ಎಲ್ಲಾ ಸಂದೇಹಗಳು ಎದ್ದು ಕಾಣುತ್ತಿವೆ ಅಂತೆ.