ರಾತ್ರೋರಾತ್ರಿ ಖಾಲಿ ಸೈಟ್-ನಲ್ಲಿ ತಾಯಿ ಭುವನೇಶ್ವರಿಯ ಪುತ್ಥಳಿ ಪ್ರತ್ಯಕ್ಷವಾದ ಕಾರಣ ಕೇಳಿದ್ರೆ ನೀವು “ಹೀಗೂ ಉಂಟೆ” ಅಂತ ಹೇಳ್ತೀರ!!

0
435

ದೇವರನ್ನು ಜನರು ಯಾವುದಕ್ಕೆ ಉಪಯೋಗ ಮಾಡಿಕೊಳ್ಳುತ್ತಾರೆ ಅಂತ ತಿಳಿದಿರುವ ವಿಷಯವೆ. ಆದರೆ ಈಗೀಗ ಒಂದು ಟ್ರೇಡ್ ಆಗಿಬಿಟ್ಟಿದೆ. ಆಸ್ತಿ, ಮನೆ ಹೊಲ ಉಳಿಸಿಕೊಳ್ಳಲು ಒಂದು ದೇವರ ಮೂರ್ತಿಯನ್ನು ಸ್ಥಾಪನೆ ಮಾಡಿ ಆಶ್ಚರ್ಯ ಮೂಡಿಸುವುದು ನಡೆಯುತ್ತಿದೆ. ಇಂತಹದೆ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಜೆಯೇ ಕಾಲಿ ಇದ್ದ ಜಾಗ ಬೆಳ್ಳಗೆ ಅನ್ನೋದ್ರಲಿ ಭುವನೇಶ್ವರ ದೇವಾಲಯವಾಗಿ ಸ್ಥಳಿಯರಿಗೆ ಆಶ್ಚರ್ಯ ಮೂಡಿಸಿದೆ.

@publictv.in

ಹೌದು ಕೆಲವೊಂದು ಸಿನಿಮಾಗಳಲ್ಲಿ ತೋರಿಸುವ ರೀತಿ ಬೆಂಗಳೂರು ನಗರದ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಬಿಬಿಎಂಪಿ ಜಾಗದಲ್ಲಿ ರಾತ್ರೋರಾತ್ರಿ, ಕನ್ನಡ ಸಾಹಿತ್ಯ ಪರಿಷತ್‍ನವರು ಭುವನೇಶ್ವರಿ ತಾಯಿಯ ಪುತ್ಥಳಿಯನ್ನ ನಿರ್ಮಿಸಿದ್ದಾರೆ. ಇದನ್ನು ಕಂಡು ಸ್ಥಳಿಯರಿಗೆ ಹಲವು ಅನುಮಾನಗಳು ಕಂಡು ಬಂದಿವೆ ದೇವಿ ತಾನೇ ಹುಟ್ಟಿದ್ದಾಳೆ ಇಲ್ಲ ಯಾರದ್ರು ತಂದು ಪ್ರತಿಷ್ಠಾಪನೆ ಮಾಡಿದ್ದಾರೂ ಅನ್ನೋ ಯೋಚನೆಯಲ್ಲಿ ಭಕ್ತಿಯ ಜೊತೆಗೆ ಭಯವು ಮೂಡಿದೆ. ಪ್ರತಿಷ್ಠಾಪನೆ

ನಡೆದ್ದಿದು ಏನು?

ಬೆಂಗಳೂರಿನ ನಗರದ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಬಿಬಿಎಂಪಿ ಜಾಗದಲ್ಲಿ ರಾತ್ರೋರಾತ್ರಿ, ಕನ್ನಡ ಸಾಹಿತ್ಯ ಪರಿಷತ್‍ನವರು ಭುವನೇಶ್ವರಿ ತಾಯಿಯ ಪುತ್ಥಳಿಯನ್ನ ನಿರ್ಮಿಸಿದ್ದಾರೆ. ಎಂದು ಸುದ್ದಿ ಹರಡಿದೆ ಇದಕ್ಕೆ ಮೂಲ ಉದ್ದೇಶ ಏನೆಂದು ತಿಳಿದು ಬಂದ ಹಾಗೆ ಕನ್ನಡ ಸಾಹಿತ್ಯ ಪರಿಷತ್‍ನವರು ಜಿಲ್ಲಾ ಕನ್ನಡ ಭವನವನ್ನು ನಿರ್ಮಿಸುವ ಉದ್ದೇಶದಿಂದ ಈ ಸ್ಥಳದಲ್ಲಿ ಭುವನೇಶ್ವರಿ ದೇವಿ ಪುತ್ಥಳಿಯನ್ನು ನಿರ್ಮಿಸಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದು ಕಾನೂನು ಬಾಹಿರ ಅಂತ ಸ್ಥಳೀಯ ಕಾರ್ಪೋರೇಟರ್ ರಮೇಶ್ ಕೂಡ ಕೂಡ ವಿರೋಧಿಸಿದ್ದಾರೆ.

@publictv.in

ಈ ವಿಚಾರದ ಹಿನ್ನೆಲೆಯನ್ನು ತಿಳಿಸಿದ ಕನ್ನಡ ಸಾಹಿತ್ಯ ಪರಿಷತ್‍ ಕಸಾಪ ನಗರ ಜಿಲ್ಲಾಧ್ಯಕ್ಷ ಮಾಯಣ್ಣ, ನಾವು ಎರಡು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದೇವೆ. ನಗರದ ಶಾಸಕರಿಗೆ ಸಂಸದರಿಗೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಈ ಬಗ್ಗೆ ಮನವಿ ಕೂಡ ಮಾಡಿದ್ದೇವೆ. ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಅವರು ಕೂಡ ಬೆಂಬಲಿಸಿದ್ದಾರೆ. ಆದರೆ ಕೆಲವರ ಕುತಂತ್ರದಿಂದ ಪಾಲಿಕೆ ಇದಕ್ಕೆ ಅನುಮತಿ ನೀಡುತ್ತಿಲ್ಲ ಇದೇ ಕಾರಣಕ್ಕೆ ಭುವನೇಶ್ವರ ಮೂರ್ತಿಯನ್ನು ಪ್ರತಿಸ್ಥಾಪನೆ ಮಾಡಿದೇವೆ ಎಂದು ಕಸಾಪ ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಹೇಳಿದ್ದಾರೆ.

ಈ ವಿಷಯ ಈಗ ವ್ಯಾಪಕ ಚರ್ಚೆಗೆ ಒಳಗಾಗಿ ಕನ್ನಡ ಸಾಹಿತ್ಯ ಪರಿಷತ್‍ ವಿರುದ್ದ ಹಲವು ಜನರು ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅದೇ ವಾರ್ಡಿನಲ್ಲಿ ದೂರು ಸಲ್ಲಿಸಿದ್ದಾರೆ. ಈ ದೂರಿನನ್ವಯ ಬಿಬಿಎಂಪಿ ಈ ಸ್ಥಳವನ್ನು ಉದ್ಯಾನವನಕ್ಕಾಗಿ ಮೀಸಲಿಟ್ಟಿದೆ. ಆದರೆ ಈಗ ಜಿಲ್ಲಾ ಕಸಾಪದ ಸದಸ್ಯರು ಏಕಾಏಕಿ ಬಂದು ಭುವನೇಶ್ವರಿ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಈ ಜಾಗವನ್ನು ಕಬಳಿಸಲು ಯತ್ನಿಸಿದ್ದಾರೆ. ಈ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ ಎಂದು ವಾರ್ಡಿನ ಎಂಜಿನಿಯರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

Also read: ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಜನವರಿ 15 ಉಚಿತ ಸ್ಟಂಟ್‌ ಅಳವಡಿಸಲಾಗುವುದು..!! ಸಾಧ್ಯವಾದಷ್ಟು ಬಡಜನರಿಗೆ ಈ ಸುದ್ದಿಯನ್ನು ತಲುಪಿಸಿ!!