ಆಸ್ತಿ ತೆರಿಗೆ ಕಟ್ಟಲು ನಿಮಗೆ ಕಷ್ಟವಾಗ್ತಿದ್ಯಾ, ಇದನ್ನ ಓದಿ ಆಸ್ತಿ ತೆರಿಗೆಯ ಸಂಪೂರ್ಣ ವಿವರ ಕೊಡ್ತೀವಿ..!

0
1014

ವಿರೇಶ್: ಏನಪ್ಪಾ ತುಂಬಾ ದಿನ ಸರದಿ ಸಾಲಿನಲ್ಲಿ ನಿಂತು ನನ್ನ ಆಸ್ತಿಯ ತೆರಿಗೆ ತುಂಬಲು ಬಹಳ ಕಷ್ಟವಾಯಿತು.

ಏಕೋ ವಿರೇಶ್ ನನ್ನ ಹಾಗೆ ವೆಬ್ ಪೆಟ್ರೋಲ್ ಬಳಿಸಿ, ಎಲ್ಲ ಆಸ್ತಿಗಳ ವಿವರಗಳನ್ನು ಬಹಿರಂಗ ಪಡಿಸಿದ್ದೇನೆ. ಗಂಟೆ ಗಟ್ಟಲೆ ನಿನ್ನ ಹಾಗೆ ಸರತಿ ಸಾಲಿನಲ್ಲಿ ನಿಲ್ಲದೆ ಮನೆಯಲ್ಲಿ ಹಾಯಾಗಿ ಫ್ಯಾನ್ ಕೆಳಗೆ ಕುಳಿತು ಕೆಲಸವನ್ನು ಕೆಲವೇ ಕ್ಷಣಗಳಲ್ಲಿ ಮಾಡಿ ಮುಗಿಸಿದ್ದೇನೆ.

ಹಾಗಿದ್ರೆ ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ ಮಾಡಬಹುದು ಎಂದು ವಿರೇಶ್ ಕೇಳುತ್ತಿದ್ದಂತೆ, ವಿಘ್ನೇಶ್ ಜಿಐಎಸ್ ನಕ್ಷೆಯಲ್ಲಿ ಸುಲಭವಾಗಿ ಹುಡುಕ ಬಹುದಾಗಿದೆ. ಆಸ್ತಿ ವಿವರ ತೆರಿಗೆ ಬಾಕಿ ವಿವರಗಳು ಆನ್ ಲೈನ್ ನಲ್ಲಿ ಲಭ್ಯವಿದೆ. ಇನ್ನು ಜಿಐಎಸ್ ಬಿಬಿಎಂಪಿ ವೆಬ್ ಪ್ರೋಟಲ್ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳ ವಿವರಗಳನ್ನು ಈ ಪೋರ್ಟಲ್‍ ನಲ್ಲಿ ತುಂಬಬಹುದು. ಇನ್ನು ಈ ಪೋರ್ಟಲ್ನಲ್ಲಿ ವಾರ್ಡ್ ಪ್ರದೇಶವಾರು ಕಟ್ಟಡಗಳನ್ನು ಪಿಐಡಿ ಆಧಾರ ಮೆಲೆ ನಕ್ಷೆಯಲ್ಲಿ ಸುಲಭವಾಗಿ ಹುಡಕಬಹುದು.

bbmp.gov.in/geptis ಲಾಗಿನ್ ಆಗಿ. ಇಲ್ಲಿ ನಿಮಗೆ ಅಗತ್ಯ ಮಾಹಿತಿಗಳನ್ನು ಸಲುಭವಾಗಿ ತುಂಬಬಹುದು. ಇದು ಎಲ್ಲ ಮಾದರಿಯ ತಂತ್ರಜ್ಞಾನದಲ್ಲೂ ಸುಲಭವಾಗಿ ಹಾಗೂ ವೇಗವಾಗಿ ತೆರೆದುಕೊಳ್ಳುತ್ತದೆ.

ಇನ್ನು ಈ ವೆಬ್‍ ಸೈಟ್ ನಲ್ಲಿ ನೀವು ದೂರನ್ನು ಸಹ ನೀಡಬಹುದು.

ತೆರಿಗೆ ಪವಾತಿಸುವುದು ಹೇಗೆ:

ಲಾಗಿನ್ ಮಾಡಿದ ಬಳಿಕ ನಿಮ್ಮ ಪಿಐಡಿ (ಆಸ್ತಿಯ ಪ್ರತ್ಯೇಕ ಗುರುತಿನ ಸಂಖ್ಯೆ) ವಿವರ ಪಡೆದುಕೊಳ್ಳಬಹುದು. ಇದರಲ್ಲಿ ನಿಮ್ಮ ತೆರಿಗೆಯ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಇನ್ನು ಐಡಿ ಹಾಗೂ ಮೊಬೈಲ್ ಗಳ ನಂಬರ್ ಹೊಂದಿಕೆಯಾಗದಿದ್ದರೆ, ಪೂರ್ಣ ವಿವರ ಲಭಿಸುವುದಿಲ್ಲ. ಇನ್ನು ಲಾಗಿನ್ ಮಾಡುವ ಮುನ್ನ ನಿಮ್ಮ ನಂಬರ್ ನಿಂದ ಲಾಗಿನ್ ಮಾಡಿ ಪಾಸ್ವರ್ಡ್ ದಾಖಲಿಸ ಬೇಕು. ಪಾಸ್ವರ್ಡ್ ಮರೆತು ಹೋಗಿದ್ದರೆ ಅದಕ್ಕೂ ಇಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.