ಮನೆ ಖರೀದಿಗೂ ಮುನ್ನ ಇರಲಿ ಎಚ್ಚರ…!
ಸ್ವಂತದ್ಜೊಂದು ಮನೆ ಕೊಳ್ಳಬೇಕು ಅನ್ನೋ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಹಾಗಂತ ಸುಮ್ನೆ ಮನೆ ಕೊಳ್ಳೋಕಾಗುತ್ತಾ..? ಮನೆ ಖರೀದಿಸಿ ಯಾಮಾರೋಕು ಮುನ್ನ ಎಚ್ಚರಿಕೆಯಿಂದ ಇರಬೇಕಾಗುತ್ತೆ. ಅಲ್ಲದೇ ಇತ್ತೀಚೆಗೆ ದೇಶದಲ್ಲಿ ಮನೆಗಳನ್ನು ಏಜೆಂಟರು ಹೇಳಿದ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪವಿದೆ.
ಹಾಗಾಗಿ ಮನೆ ಖರೀದಿಸಲು ಬಯಸುವವರು ಜಾಗೃತರಾಗಿರುವುದು ಒಳ್ಳೆಯದು. ರೇರಾ ಮೂಲಕವೇ ಮನೆ ಖರೀದಿಸಿದ್ರೆ ನಷ್ಟದ ಭಯವಿರಲ್ಲ.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ:
- ನೀವೇನಾದರು ಮನೆ ಅಥವಾ ಅಪಾರ್ಟ್ಮೆಂಟ್ ಖರೀದಿಸಬೇಕಿದ್ದರೆ. ನೀವು ಆಯ್ಕೆ ಮಾಡಿರುವ ಡವಲಪರ್ಸ್ ರೇರಾ ಕಾಯ್ದೆ ಅಡಿ ರಿಜಿಸ್ಟಾರ್ ಮಾಡಿಸಿರಬೇಕು.
- ಮೊದಲು http://rera.karnataka.gov.in/ಗೆ ಲಾಗಿನ್ ಆಗಿ. ಅದರಲ್ಲಿ ರಿಜಿಸ್ಟ್ರೇಶನ್ ಕೆಳಗಿರುವ ರಿಜಿಸ್ಟ್ರರ್ ಪ್ರಾಜೆಕ್ಟ್ ಟ್ಯಾ ಬ್ ಮೇಲೆ ಕ್ಲಿಕ್ ಮಾಡಿ.
- ಇದನ್ನು ಪೋಸ್ಟ್ ಮಾಡಿದ ನಂತರ ಅಡ್ವಾನ್ಸ್ ಸರ್ಚ್ ಮೂಲಕ ನಿಮ್ಮ ಇತರೆ ವಿವರಗಳನ್ನು ತುಂಬಿ. ಅಂದರೆ ನೀವು ಮನೆ ಖರೀದಿಸಲು ಇಚ್ಛಿಸಿರುವ ಡೆವಲಪರ್, ಮನೆ ಖರೀದಿಸುವ ಸ್ಥಳದ ಮಾಹಿತಿ ಎಂಟರ್ ಮಾಡಿ.
- ರೇರಾ ರಿಜಿಸ್ಟ್ರೇಶನ್ ವೆಬ್ ಸೈಟ್ ನಲ್ಲಿ ತಾಲೂಕು, ಗ್ರಾಮ, ಜಿಲ್ಲೆಗಳಲ್ಲೂ ಸಹ ಪ್ರಾಪರ್ಟೀಸ್ ಬಗ್ಗೆ ಮಾಹಿತಿ ಪಡೆಯಬಹುದು.
- ನೀವು ಆಯ್ಕೆ ಮಾಡಿಕೊಂಡ ಜಾಗದ ಪ್ರಾಜೆಕ್ಟ್ ಗಳ ಬಗ್ಗೆ ಮಾಹಿತಿ ಪಡೆಯಲು ರೇರಾ ವೆಬ್ ಸೈಟ್ ಸಹಕರಿಸುತ್ತೆ.
ಇದರಿಂದ ನಿವೇಶನದ ಬಗ್ಗೆ,ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ವೆಬ್ ಸೈಟ್ ನಲ್ಲಿ ಡೆವೆಲಪರ್ಸ್/ಬಿಲ್ಡರ್ಸ್, ಪ್ರಮೋಟರ್ಸ್ ತಮ್ಮ ಹಿನ್ನೆಲೆಯ ವಿವರಗಳನ್ನು ನೀಡಬೇಕು. ಇದು ಯೋಜನೆಗಳ ಪ್ರಸ್ತುತ ಸ್ಥಿತಿ, ಪೂರ್ಣಗೊಳ್ಳುವ ಸಮಯ, ಮಾರಾಟ ಮಾಡಲ್ಪಡುವ ಅಪಾರ್ಟ್ಮೆಂಟಿನ ಸಂಪೂರ್ಣ ವಿವರ ಒಳಗೊಂಡಂತೆ ಸಂಖ್ಯೆ, ವಿಧ, ಕಾರ್ಪೆಟ್ ಏರಿಯಾ, ತೆರೆದ ಪ್ರದೇಶ ಇತ್ಯಾದಿ ವಿವರದ ಬಗ್ಗೆ ತಿಳಿದುಕೊಳ್ಳಬಹುದು.
- ಈ ಮಾಹಿತಿಗಳನ್ನು ಪಡೆಯುವುದರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗ್ರಾಹಕರಿಗೆ ಆಗುತ್ತಿರುವ ವಂಚನೆಯನ್ನು ಇದು ತಡೆಗಟ್ಟುತ್ತದೆ.
- ಡೆವೆಲಪರ್ಸ್/ಬಿಲ್ಡರ್ಸ್, ಪ್ರಮೋಟರ್ಸ್ ತಮ್ಮ ಹಿನ್ನೆಲೆಯ ವಿವರಗಳು, ಲಾಂಚ್ ಮಾಡುವ ಯೋಜನೆಗಳ ಸಂಪೂರ್ಣ ವಿವರ ನೀಡಬೇಕು.
- ಯೋಜನೆಗಳ ಪ್ರಸ್ತುತ ಸ್ಥಿತಿ, ಪೂರ್ಣಗೊಳ್ಳುವಲ್ಲಿನ ವಿಳಂಬ, ಬಾಕಿ ಉಳಿದಿರುವ ಪ್ರಕರಣಗಳು, ಭೂಮಿ ಪ್ರಕಾರ ಮತ್ತು ಬಾಕಿ ಉಳಿದಿರುವ ಪಾವತಿ ವಿವರಗಳನ್ನು ಸಹ ಹಂಚಿಕೊಳ್ಳಬೇಕು.
- ಅನುಮೋದನೆ ಮತ್ತು ಪ್ರಾರಂಭ ಪ್ರಮಾಣಪತ್ರಗಳ ಅಧಿಕೃತ ಪ್ರತಿಯನ್ನು ಪ್ರಾಧಿಕಾರದಿಂದ ಪಡೆಯಬೇಕು.
- ಹಂಚಿಕೆ ಪತ್ರದ ಪ್ರಸ್ತಾವನೆ, ಮಾರಾಟ ಒಪ್ಪಂದ, ಮತ್ತು ಎಲ್ಲರ ಸಹಿ ಹೊಂದಿರುವ ಸಂವಹನ ಪತ್ರ ಹೊಂದಬೇಕು.
ಮನೆ ಖರೀದಿಸುವ ಮುನ್ನ ವೆಬ್ ಸೈಟ್ ನಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆದು. ಆದಷ್ಟು ಎಚ್ಚರಿಕೆಯಿಂದ ಬಿಲ್ಡರ್ಸ್ ಗಳನ್ನು ಸಂಪರ್ಕಿಸಿ ಖರೀದಿಸಿದರೆ ಗ್ರಾಹಕರು ಮೋಸ, ವಂಚನೆಗೆ ಒಳಗಾಗುವುದನ್ನು ತಡೆಯಬಹುದು.