ಗಾಡಿ ಓಡಿಸುವಾಗ ಈ ಐದು ವಿಷಯಗಳನ್ನು ಸದಾ ಮನಸಿನ್ನಲ್ಲಿಡಿ, ನೆನಪಿರಲಿ ನಿಮಗಾಗಿ ನಿಮ್ಮ ಪ್ರೀತಿಪಾತ್ರರು ನಿಮಗಾಗಿ ಮನೆಯಲ್ಲಿ ಕಾಯುತ್ತಿರುತ್ತಾರೆ..

0
2249

ನಮ್ಮ ತಂಡದಿಂದ ಸಣ್ಣ ಸಾಮಾಜಿಕ ಅರಿವಿನ ಲೇಖನ ತಪ್ಪದೇ ಓದಿ..

ಹೆತ್ತು ಹೊತ್ತು ಸಾಕಿ ಸಲಹಿದ ಯಾವ ಅಪ್ಪ ಅಮ್ಮನಿಗೆ ತಾನೆ ಹೆತ್ತ ಮಕ್ಕಳನ್ನು ಹೆಣವಾಗಿ ನೋಡಲು ಸಾಧ್ಯ?? ತಾ ಬದುಕದಿದ್ದರೂ ತಾನು ಹಡೆದ ಮಕ್ಕಳು ಚೆನ್ನಾಗಿರಬೇಕು ಎನ್ನುವ ಅಮ್ಮ.. ತಾ ಹೊಸ ಬಟ್ಟೆ ಧರಿಸದಿದ್ದರೂ.. ತನ್ನ ಮಕ್ಕಳು ಸುಖವಾಗಿ ಇರಬೇಕೆಂದು ಬಯಸುವ ಅಪ್ಪ.. ತನಗೆ ಇಲ್ಲದಿದ್ದರೂ ತನ್ನ ಗಂಡನ ಹೊಟ್ಟೆ ತುಂಬಿಸುವ ಹೆಂಡತಿ.. ಬೊಗಸೆ ತುಂಬಾ ಪ್ರೀತಿ ಕೊಡುವ ಮಕ್ಕಳು..

ಆದರೆ ನಾವು ಮಾಡುವುದೇನು?? 2 ನಿಮಿಷದ ಸುಖಕ್ಕೆ ಅಪ್ಪ ಅಮ್ಮ ಹೆಂಡತಿ ಮಗು ಎಲ್ಲರ ಪ್ರೀತಿಯನ್ನೇ ಮರೆತು ಬಿಡುತ್ತೇವೆ..

ಹೌದು ಇತ್ತೀಚಿನ ದಿನಗಳಲ್ಲಿ ಅಪಘಾತ ದಿಂದ ಸತ್ತವರ ಸಂಖ್ಯೆ ಏರುತ್ತಲೇ ಬಂದಿದೆ.. ಅದಕ್ಕೆ ಮುಖ್ಯವಾದ ಕಾರಣ ನಮ್ಮ ಅಭ್ಯಾಸಗಳು..

1. ಹೆಲ್ಮೇಟ್ ಧರಿಸದಿರುವುದು..
ಸಾವಿರ ಬೆಲೆ ಬಾಳುವ ಮೊಬೈಲ್ ಗಳಿಗೆ ಸ್ಕ್ರೀನ್ ಗಾರ್ಡ್ ಹಾಕಿಸಿಕೊಳ್ಳುವ ನಾವು.. ವಾಹನಗಳನ್ನು ಓಡಿಸುವಾಗ ಹೆಲ್ಮೇಟ್ ಧರಿಸುವುದಿಲ್ಲ.. ಈಗಿನ ಫ್ಯಾಷನ್ ಎಂದರೂ ತಪ್ಪಿಲ್ಲ.. ಆದರೆ ಅದರಿಂದ ಅಪಘಾತ ವಾಗಿ ಹೆತ್ತವರು ಪಡುವ ನೋವು ಸತ್ತವರಿಗೇಗೆ ತಿಳಿಯಬೇಕು ಅಲ್ಲವೇ.. ದಯಮಾಡಿ ಹೆಲ್ಮೇಟ್ ಬಳಸಿ..

2. ಕುಡಿದು ವಾಹನ ಚಲಾಯಿಸುವುದು..
ಕುಡಿದ ಮತ್ತಿನಲ್ಲಿ ಮಾತೆ ನೆಟ್ಟಗೆ ಬರದಿರುವಾಗ ನಮ್ಮ ಕೈಯಲ್ಲಿ ವಾಹನ ಚಲಾಯಿಸಲು ಸಾಧ್ಯವೇ?? ನನ್ನಿಂದ ಸಾಧ್ಯ ಎಂದು ಕೆಲವರು ಹೇಳಬಹುದು.. ಆದರೆ ಅಕಸ್ಮಾತ್ ಅನಾಹುತವಾದರೆ ನಿಮ್ಮ ಹೆಂಡತಿ ಮಕ್ಕಳು ಬೀದಿಗೆ ಬರುವುದು ಖಚಿತ..
ಅವರನ್ನು ಅನಾಥರನ್ನಾಗಿಸಬೇಡಿ..

3. ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು
ಹೇಗಿದ್ದೀಯಾ?? ಏನ್ ಮಾಡ್ತಿದಿಯಾ?? ಇಂತಹದ್ದನ್ನೆಲ್ಲಾ ಮೊಬೈಲ್ ನಲ್ಲಿ ಕೇಳಿ ಮುಂದೆ ಮಾತೇ ಆಡುವುದಕ್ಕೆ ಆಗದೇ ಇರುವ ತರ ಮಾಡಿಕೊಳ್ಳಬೇಡಿ… ನಿಮ್ಮ ಅಪ್ಪ ಅಮ್ಮ ಹೆಂಡತಿ ಪುಟ್ಟ ಮಗು ಜೊತೆಗೆ ನಿಮ್ಮ ಸ್ನೇಹಿತರು ಎಲ್ಲರಿಗೂ ನಿಮ್ಮ ಮಾತಿನ ಅವಶ್ಯಕತೆ ಇದೆ.. ಅದಕ್ಕಾಗಿ ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ.

4. ಸ್ಟಂಟ್ಸ್ ಮಾಡುವುದು..
ಬೈಕ್ ನಲ್ಲಿ ಸ್ಟಂಟ್ ಮಾಡುವದರಿಂದ ನೀವು ಹೀರೊ ಆಗುವುದಿಲ್ಲ.. 2 ನಿಮಿಷಗಳ ಥ್ರಿಲ್ ಅಷ್ಟೇ ಅದು. ಅದಕ್ಕೊಸ್ಕರ ಜೀವನ ಪೂರ್ತಿ ನಿಮ್ಮ ಮಕ್ಕಳ ಜೊತೆ ಆಟ ಆಡುವುದನ್ನ ಕಳೆದುಕೊಳ್ಳುವಿರಾ?? ಯೋಚನೆ ಮಾಡಿ..

ನಮ್ಮ ಕೈಲಾಗಿದ್ದು ನಾವು ಮಾಡಿದ್ದೇವೆ.. ಇನ್ನು ನಿಮಗೆ ಬಿಟ್ಟಿದ್ದು.. ನಿಮ್ಮ ಪ್ರೀತಿ ಪಾತ್ರರ ಬಗ್ಗೆ ಕಾಳಜಿ ಇದ್ದಲ್ಲಿ ಶೇರ್ ಮಾಡಿ ಅರಿವು ಮೂಡಿಸಿ..