50 ಲಕ್ಷದೊಂದಿಗೆ ಬ್ಯಾಂಕ್ ಗೆ ಹೋದ ಭಿಕ್ಷುಕ…!! ಮುಂದೆ ಏನಾಯಿತು ನೀವೇ ಓದಿ…

0
2573

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಭಾರತದಾದ್ಯಂತ ಹೊಸ ನೋಟುಗಳ ಪರ್ವ ಶುರುವಾಗಿದೆ. ಆದ್ರೆ ಇಲ್ಲೊಬ್ಬ ಭಿಕ್ಷುಕ ತನ್ನ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕಿಗೆ ಎಷ್ಟು ಹಣದೊಂದಿಗೆ ಹೋಗಬಹುದು? ಭಿಕ್ಷೆ ಬೇಡಿ ಕೂಡಿಟ್ಟ ಕೆಲ ನೂರುಗಳು, ಸಾವಿರ ಅಥವಾ ಹೆಚ್ಚೆಂದರೆ ಐದು ಸಾವಿರ ರೂಪಾಯಿ. ಆದ್ರೆ ಈ ಭಿಕ್ಷುಕ ಮಾತ್ರ ನೇರವಾಗಿ 50 ಲಕ್ಷ ರೂಪಾಯಿಯೊಂದಿಗೆ ಬ್ಯಾಂಕ್ ಗೆ ಹೋಗಿದ್ದಾನೆ,

ಭಿಕ್ಷುಕ ತನ್ನ ಬಳಿ ಇದ್ದ 50 ಲಕ್ಷ ಹಣ ಹೊರತೆಗೆಯುತ್ತಿದ್ದಂತೆ ಸಾಲಿನಲ್ಲಿ ನಿಂತಿದ್ದ ಜನರೆಲ್ಲಾ ಆಶ್ಚರ್ಯಗೊಂಡರು. ಇದನ್ನು ನೋಡಿದ ಬ್ಯಾಂಕಿನಲ್ಲಿದ್ದ ಇತರ ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಅವಾಕ್ಕಾದರು. ಇದನ್ನು ನೋಡಿದ ಬ್ಯಾಂಕಿನಲ್ಲಿದ್ದ ಇತರ ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಅವಾಕ್ಕಾದರು.

ಶಾಕ್ ನಿಂದ ಹೊರಬಂದ ಅಧಿಕಾರಿಗಳು ಒಂದೇ ಸಾರಿ ಇಷ್ಟೊಂದು ಹಣವನ್ನು ಡಿಪಾಜಿಟ್ ಮಾಡೋದಕ್ಕೆ ಪಾನ್ ಕಾರ್ಡ್ ಕಡ್ಡಾಯವಾಗಿ ಬೇಕು ಅಂದಿದ್ದರಿಂದ, ಜೇಬಿನಿಂದ ಪಾನ್ ಕಾರ್ಡ್ ತೆಗೆದು ನೀಡಿದ್ದಾನಂತೆ ಈ ಭಿಕ್ಷುಕ ಲಕ್ಷಪತಿ, ಇದರಿಂದ ಮೈಂಡ್ ಬ್ಲ್ಯಾಕ್ ಆದ ಅಧಿಕಾರಿಗಳು ಆತನ ಖಾತೆಗೆ ಆ ಹಣವನ್ನು ಅಕೌಂಟಿಗೆ ಹಾಕದೆ ಅಧಿಕಾರಿಗಳು ಅ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ತನ್ನ ಎರಡು ಎಕರೆ ಜಮೀನು ಮಾರಿದ ದುಡ್ಡು ಇದು ಎಂದು ಆತ ಉತ್ತರಿಸಿದ. ಆ ಹಣವೇ ಇದು ಎಂದು ಅದಕ್ಕೆ ಸಂಬಂಧಿಸಿದ ಪತ್ರಗಳನ್ನು ತೋರಿಸುವಂತೆ ಬ್ಯಾಂಕ್ ಅಧಿಕಾರಿಗಳು ಕೇಳಿದ್ದರಿಂದ ದಾಖಲೆ ಪತ್ರಗಳನ್ನು ತರುವುದಾಗಿ ಭಿಕ್ಷುಕ ಅಲ್ಲಿಂದ ಹೊರಟು ಹೋದ ಎಂದು ವರದಿಯಾಗಿದೆ.

ಈ ಘಟನೆ ತೆಲಂಗಾಣದ ವಿಕಾರಾಬಾದ್ ನಲ್ಲಿ ನಡೆದಿರುವಂತೆ ಯೂಟ್ಯೂಬ್ ವೀಡಿಯೋ ಒಂದನ್ನು ಅಲ್ಲಿನ ಟಿವಿ ಚಾನೆಲ್ ಪ್ರಸಾರ ಮಾಡಿದೆ.