ಬಲ್ಲವನೇ ಬಲ್ಲ ಬೆಲ್ಲದ ರುಚಿಯ

0
1775

ಬೆಲ್ಲದ ಆರೋಗ್ಯಕರ ಗುಣಗಳು:

ಬೆಲ್ಲದಲ್ಲಿ ಸಮರ್ಥವಾದ ಕಬ್ಬಿಣಾಂಶ(ಐರನ್) ಇರುತ್ತದೆ. ಬಿಸಿಲು ಬಣ್ಣ ಇರುವ ಬೆಲ್ಲದಲ್ಲಿ ಇನ್ನೂ ಹೆಚ್ಚು ಕಬ್ಬಿಣಾಂಶ ಲಭ್ಯವಾಗುತ್ತದೆ. ಕ್ರಮ ತಪ್ಪದೆ ಇದನ್ನು ತೆಗೆದುಕೊಳ್ಳುತ್ತಿದ್ದರೆ ಐರನ್ ಕೊರತೆ ಎಂಬ ಸಮಸ್ಯೆ ಇರುವುದೇ ಇಲ್ಲ. ಬೆಲ್ಲದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಸಣ್ಣ ಮಕ್ಕಳಿಗೆ ಬೆಲ್ಲವನ್ನು ತಿನ್ನಲು ಕೊಡುವುದು ಲಾಭದಾಯಕವಾಗಿದೆ, ಶಾರೀರಿಕ ಬೆಳವಣಿಗೆ ವೇಗವಾಗಿ ಆಗುತ್ತದೆ. ಮೂಳೆಗಳು ಗಟ್ಟಿಯಾಗಿ ಶರೀರವು ಬಲವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣವೂ ಹೆಚ್ಚುವುದರಿಂದ ನಿಃಶಕ್ತಿಯು ಬರುವುದಿಲ್ಲ.

ಮೆಗ್ನೆಷಿಯಂ ಮಾಂಸಖಂಡಗಳ ನೋವನ್ನು, ಉಳುಕನ್ನು, ಹಿಡಿದಂತಾಗುವುದನ್ನು ಕಡಿಮೆಗೊಳಿಸುತ್ತದೆ. ಮಂಡಿ, ಮೊಣಕೈಗಳನ್ನು ಸದೃಢ ಮಾಡುತ್ತದೆ. ಬೆಲ್ಲದಲ್ಲಿ ಇರುವ ಜಿಂಕ್ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ಸದೃಢಪಡಿಸುತ್ತದೆ. ಇದರಲ್ಲಿರುವ ಆ್ಯಂಟಿಬಾಯಟಿಕ್ ಗುಣವು ದೇಹವನ್ನು ರೋಗ ನಿರೋಧಕವಾಗಿ ಗಟ್ಟಿಯಾಗಿ ಮಾಡುತ್ತದೆ. ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತದೆ. ಜಠರದ ಚಲನೆಗೆ ನೆರವಾಗಿ ಮಲಬದ್ಧತೆಯಿಂದ ರಕ್ಷಿಸುತ್ತದೆ.

ಬೆಲ್ಲವು ಜೀರ್ಣಕಾರಿ ಎಂಜೈಮ್‌ಗಳನ್ನು ಚುರುಕಾಗಿರಿಸಿ, ಶೀಘ್ರವಾಗಿ ಆಹಾರವನ್ನು ಜೀರ್ಣ ಮಾಡಲು ಸಹಕರಿಸುತ್ತದೆ. ಈ ಕಾರಣದಿಂದಾಗಿ ಹೊಟ್ಟೆ ಉಬ್ಬರ, ಅಸಿಡಿಟಿ, ತೇಗು ಇಂಥವುಗಳನ್ನು ತಡೆಗಟ್ಟುತ್ತದೆ. ಆದ್ದರಿಂದಲೇ ಕೆಲವರು ಊಟವಾದ ತಕ್ಷಣವೇ ಒಂದು ಸಣ್ಣ ಹೆಂಟೆ ಬೆಲ್ಲವನ್ನು ಬಾಯಲ್ಲಿ ಹಾಕಿ ಚೀಪುತ್ತಾರೆ. ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ. ಗಂಟಲಿನಲ್ಲಿ ಕಟ್ಟಿರುವ ಕಫವನ್ನು ಬೆಲ್ಲ ಕರಗಿಸಿ ತೊಲಗಿಸುತ್ತದೆ. ನೆಗಡಿ, ಕೆಮ್ಮಿನಿಂದ ಉಪಶಮನ ನೀಡುತ್ತದೆ.ರಕ್ತವನ್ನು ಪುಷ್ಟಿ ಮಾಡಿ, ರಕ್ತವನ್ನು ವೃದ್ಧಿಯಾಗುವಂತೆ ಮಾಡುವ ಗುಣ ಬೆಲ್ಲಕ್ಕಿದೆ. ಇದರ ಬಳಕೆ ಮಾಡುವುದರಿಂದ ಶಕ್ತಿವಂತರಾಗಿ ದೃಢಕಾಯರಾಗಿ ಬೆಳೆಯುವಂತೆ ಮಾಡುತ್ತದೆ.

ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವ ಕಾರಣ ದೇಹದಲ್ಲಿ ಆಮ್ಲೀಯ ತತ್ವಗಳನ್ನು ನಿಭಾಯಿಸುತ್ತದೆ. ಹೀಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ನಿಶ್ಯಕ್ತಿಯಾದಾಗ ಸ್ವಲ್ಪ ಬೆಲ್ಲವನ್ನು ಸೇವಿಸಿದರೆ ಕೂಡಲೇ ಶಕ್ತಿ ಬರುತ್ತದೆ.ಇದು ಬಂದಾಗ ಸಣ್ಣ ಬೆಲ್ಲದ ಹೆಂಟೆಯನ್ನು ಬಾಯಲ್ಲಿ ಹಾಕಿ ಚೀಪಿ ರಸವನ್ನು ಕುಡಿಯುತ್ತಾ ಇದ್ದರೆ, ಕೂಡಲೇ ಬಿಕ್ಕಳಿಕೆ ನಿಂತು ಹೋಗುತ್ತದೆ. ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ನಿವಾರಣೆಯಾಗಲಿದೆ. ಎಳ್ಳು ಬೆರೆಸಿ ಜೊತೆಗೆ ಸೇವಿಸಿದರೆ ಶ್ವಾಸಕೋಶಕ್ಕೆ ಉತ್ತಮ.

ಕೆಮ್ಮು, ಅಸ್ತಮಾ, ಅಜೀರ್ಣ, ತಲೆನೋವು ನಿವಾರಣೆಗೆ ಬೆಲ್ಲ ತಿನ್ನುವುದು ಒಳ್ಳೆಯದು.