ಬಾದಾಮಿ ಬೀಜ ಮತ್ತು ಎಣ್ಣೆಯಲ್ಲಿನ ಔಷಧೋಪಯೋಗಗಳು..!!

0
2303

Kannada News | Health tips in kannada

ಬೀಜ ಮತ್ತು ಎಣ್ಣೆ ಇವು ಬಾದಾಮಿಯಲ್ಲಿನ ಔಷಧೋಪಯೋಗಿ ಭಾಗಗಳು

1. ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನಸಿ ಮರುದಿನ ಬೆಳೆಗ್ಗೆ ಸಿಪ್ಪೆ ತೆಗೆದು ಅರೆದು ಹಾಲು, ಸಕ್ಕರೆ ಬೆರಸಿ ನಿತ್ಯವೂ ಕುಡಿದರೆ ದೇಹದ ಬಲ ಮತ್ತು ರಕ್ತ ವೃದ್ಧಿ.

2. ಕಣ್ಣಿನ ಸುತ್ತ ‘ಕಪ್ಪು ವರ್ತುಲ’ ಉಂಟಾಗಿದ್ದರೆ ಬಾದಾಮಿಯನ್ನು ಹಾಲಿನಲ್ಲಿ ತೇದು ಹಚ್ಚಿರಿ. ಕಪ್ಪು ಬಣ್ಣ ಕ್ರಮೇಣ ಕಡಿಮೆಯಾಗುತ್ತದೆ.

3. ಬಾದಾಮಿ ತೈಲವು ಪೌಷ್ಟಿಕವಾಗಿದ್ದು ಮುಖಕ್ಕೆ ಹಚ್ಚಿ ಮಾಲೀಶು ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.

4. ರಾತ್ರಿ ಮೂರರಿಂದ ಆರು ಹನಿಗಳಷ್ಟು ಬಾದಾಮಿ ತೈಲವನ್ನು ನಿತ್ಯವೂ ಹಚ್ಚಿದರೆ ತಲೆನೋವು ಮತ್ತು ತಕ್ತದ ಒತ್ತಡ ಕಡಿಮೆಯಾಗುತ್ತದೆ.

5. ಬಾದಾಮಿ ತೈಲವನ್ನು ತುಟಿಗೆ ಹಚ್ಚಿದರೆ ತುಟಿ ಒಡೆಯುವುದಿಲ್ಲ.

6. ಬಾದಾಮಿ ತೈಲ ತಲೆಕೂದಲಿಗೆ ಒಳ್ಳೆಯದು, ತೆಲೆಹೊಟ್ಟನ್ನು ನಿವಾರಿಸುತ್ತದೆ.

7. ನಿತ್ಯವೂ ಬಾದಾಮಿ ಸೇವಿಸಿದರೆ ದೇಹದ ಕಾಂತಿ ಹೆಚ್ಚುತ್ತದೆ.

8. ಇದರ ಟಿಟಿಯ ಸೇವನೆ ಮಕ್ಕಳ ಉತ್ತಮ ಬೆಳೆವಣಿಗೆಗೆ ಸಹಾಯ. ಇದರಲ್ಲಿ ಕಬ್ಬಿನಂಶ ಹೇರಳವಾಗಿದೆ. ಆದರೆ ಇದು ದೇಹಕ್ಕೆ ಅತ್ಯವಶ್ಯಕವಾಗಿರುವ ಹೈಡೆನ್ ಸಿಟಿ ಲಿಪೊಪ್ರೋಟೀನ್ ಪ್ರಮಾಣ ಹೆಚ್ಚಿಸುತ್ತದೆ. ಅಗತ್ಯವಿರುವ ಲೋ ಡೆನ್ಸಿಟಿ ಲಿಪೊಪ್ರೋಟೀನ್ ಪ್ರಮಾಣ ಕಡಿಮೆ ಮಾಡುತ್ತದೆ.

9. ಬಾದಾಮಿ ಮೆದುಳಿಗೆ ಹಾಗೂ ನರವ್ಯೂಹಕ್ಕೆ ಉತ್ತಮ ಟಾನಿಕ್.

10. ಬಾದಾಮಿ ನಿತ್ಯ ಸೇವನೆ ಆಯುಷ್ಯವರ್ಧಕ.

11. ಬಾದಾಮಿ ತೈಲದಿಂದ ಮಾಲೀಶು ಮಾಡಿದರೆ / ಬಾದಾಮಿಯನ್ನು ನಿತ್ಯ ಸೇವಿಸಿದರೆ ವೀರ್ಯ ವೃದ್ಧಿಯಾಗುತ್ತದೆ.

12. ಬಾದಾಮಿಯಲ್ಲಿರುವ ಸಹಜ ಸಿದ್ದವಾದ ಆ್ಯಂಟಿ ಆಕ್ಸಿಡಾಂಟ್ಗಳು ಕಾನ್ಸರ್, ಮಧುಮೇಹ, ಶ್ವಾಶಕೋಶಗಳ ಕಾಯಿಲೆ, ಕ್ಯಾಟರ್ಯಾಕ್ಟ್ ಹೃತ್ ಸಂಬಂಧೀ ರೋಗಗಳಿಂದ ರಕ್ಷಿಸುತ್ತದೆ.

Also Read: ಅಬ್ಬಾ ಅಂಜೂರ ತಿಂದ್ರೆ ಹಿಂಗೆಲ್ಲ ಆಗುತ್ತಾ.! ಏನು ಅಂತೀರಾ ಇಲ್ಲಿ ನೋಡಿ…